ಫೆಬ್ರವರಿ 5, 2026:
ನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಜೆ.ಡಿ.ಎಸ್. ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಸನ್ಮಾನ್ಯ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ನಮ್ಮ ಮಾಲೂರು ತಾಲೂಕಿನ ಮುಖಂಡರ ತಂಡದೊಂದಿಗೆ ಭೇಟಿ ಮಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಪ್ರಚಲಿತ ರಾಜಕೀಯ ವಿದ್ಯಾಮಾನಗಳ ಕುರಿತು ಹೂಡಿ ವಿಜಯ್ ಕುಮಾರ್ ಅವರು ಸುದೀರ್ಘವಾಗಿ ಚರ್ಚಿ ನಡೆಸಿದರು.
ಈ ಸಂದರ್ಭದಲ್ಲಿ ನಮ್ಮ ಮಾಲೂರು ತಾಲೂಕಿನ ಮೂಲಭೂತ ಸೌಕರ್ಯಗಳು, ಕೃಷಿ ಮತ್ತು ಕೈಗಾರಿಕಾ ವಲಯದ ಪ್ರಗತಿ ಹಾಗೂ ಸ್ಥಳೀಯರ ಉದ್ಯೋಗಾವಕಾಶಗಳ ಬಗ್ಗೆ ಸಚಿವರ ಗಮನ ಸೆಳೆದೆನು. ಕ್ಷೇತ್ರದ ಪ್ರತಿಯೊಬ್ಬ ನಾಗರಿಕನ ಧ್ವನಿಯಾಗಿ, ಇಲ್ಲಿನ ಜನರ ಆಶೋತ್ತರಗಳನ್ನು ಈಡೇರಿಸಲು ಬೇಕಾದ ಪೂರಕ ರಾಜಕೀಯ ನಿರ್ಧಾರಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಮಾಲೂರಿನ ಹಿತಾಸಕ್ತಿ ಕಾಪಾಡುವಲ್ಲಿ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಾದೇಶಿಕ ನಾಯಕತ್ವದ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ ಎಂದು ನಾನು ಈ ವೇಳೆ ಮನವರಿಕೆ ಮಾಡಿಕೊಟ್ಟರು.
ಈ ಮಹತ್ವದ ಭೇಟಿಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜಿ.ಕೆ. ಕೃಷ್ಣಾರೆಡ್ಡಿ ಹಾಗೂ ಸಂಸದರಾದ ಶ್ರೀ ಮಲ್ಲೇಶ್ ಬಾಬು, ಶ್ರೀ ಜಿ.ಇ. ರಾಮೇಗೌಡರು ಅವರೊಂದಿಗೆ ಮಾಲೂರಿನ ಭವಿಷ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು.
ನಮ್ಮೊಂದಿಗೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ತೂಪಲ್ಲಿ ಚೌಡಿರೆಡ್ಡಿ, ಶ್ರೀ ಆರ್. ಪ್ರಭಾಕರ್, ಶ್ರೀ ಜಯರಾಜ್, ಶ್ರೀ ಶಿವಾರೆಡ್ಡಿ ಹಾಗೂ ಶ್ರೀ ಡಿ. ವಿ. ವೆಂಕಟೇಶ್ ಗೌಡ, ಶ್ರೀ ದಿನೇಶ್ ಗೌಡ ಅವರು ಉಪಸ್ಥಿತರಿದ್ದು, ನಮ್ಮ ಕ್ಷೇತ್ರದ ಏಳಿಗೆಗಾಗಿ ಮತ್ತು ಜನಸೇವೆಯ ಸಂಕಲ್ಪಕ್ಕೆ ಸಾಥ್ ನೀಡಿದರು. ಮಾಲೂರಿನ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದ್ದು, ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ನಿರಂತರವಾಗಿರಲಿದೆ.