ಬೆಂಗಳೂರಿನ ಎಫ್.ಕೆ. ಸಿ.ಸಿ.ಐ ಸಭಾಂಗಣದಲ್ಲಿ ಏಪ್ರಿಲ್ 12 ರಂದು 'ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಬೆಂಗಳೂರು' ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ.
ಅಲಯನ್ಸ್ ಸಂಸ್ಥೆ ನಮ್ಮದೇ ಆದಂತಹ ಸ್ವದೇಶಿ ಸಂಸ್ಥೆ. ಈ ಸಂಸ್ಥೆ ಸುಮಾರು 18 ವರ್ಷಗಳಿಂದ ನಮ್ಮ ದೇಶದಲ್ಲಿ ಪ್ರಾರಂಭವಾಗಿರುತ್ತದೆ. ಇದರ ಪ್ರಧಾನ ಕಚೇರಿ ನೋಯ್ತಾ ನವದೆಹಲಿಯಲ್ಲಿದೆ. ಈ ಸಂಸ್ಥೆ ಈ ವರ್ಷದ ಅಂತಾರಾಷ್ಟ್ರೀಯ ಅಧ್ಯಕ್ಷರಾದಂತಹ ಶ್ರೀಯುತ ಅಲಯ್ ರಾಜಕುಮಾರ್ ಸಕ್ಷೇನಾ ದಕ್ಷಿಣ ಪ್ರಾಂತ್ಯದಲ್ಲಿ ಅಂತಾರಾಷ್ಟ್ರೀಯ ನಿರ್ದೇಶಕರಾದ ಅಲಯ್ ನಾಗರಾಜ್ ವಿ. ಬೈರಿ, ಪಿಂಡಿ, ಅಲಯ್ ಜಿ.ಪಿ. ದಿವಾಕರ್ ಐಸಿಸಿ ಆಲಯ್ ಆಜಂತ ಎಸ್. ರಂಗಸ್ವಾಮಿ, ಐಸಿಸಿ ಆಲಯ್ ಎಂ. ಮುನಿಯಪ್ಪ ಹಾಗೂ ಮಾಜಿ ಶಾಸಕ ನಬ ನೆ.ಲ. ನರೇಂದ್ರಬಾಬು ಮತ್ತು ಹಲವಾರು ಗಣ್ಯರುಗಳ ನೇತೃತ್ರದಲ್ಲಿ ದಿನಾಂಕ 12.04.2025ರಂದು ಕೆ.ಜಿ. ರಸ್ತೆ ಗಾಂಧಿನಗರದಲ್ಲಿರುವ ಎಫ್ ಕೆಸಿಸಿಐನಲ್ಲಿ ಜಿಲ್ಲಾ ಸಂಪುಟ ಸದಸ್ಯರುಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ನಮ್ಮ ದೇಶದಲ್ಲಿ ರಾಜ್ಯದಲ್ಲಿ ಜಿಲ್ಲೆಗಳಲ್ಲಿ ಈ ಸಂಸ್ಥೆಯನ್ನು ಬೆಳೆಸಬೇಕೆಂದು ಸೇರಿಕೊಂಡಿದ್ದೇವೆ. ಹಲವಾರು ಸೇವಾ ಚಟುವಟಿಕೆಗಳನ್ನು ಮಾಡಿ ಅವಶ್ಯಕತೆ ಇರುವವರಿಗೆ ಶಿಕ್ಷಣ, ಹಸಿವು ನಿವಾರಣಾ ಕಾರ್ಯಕ್ರಮ, ವೃದ್ಧಾಶ್ರಮ ಅನಾಥಾಶ್ರಮ, ಸ್ವಚ್ಛ ಭಾರತ ಆರೋಗ್ಯ ಶಿಬಿರಗಳು ಸಸಿ ನೆಡುವ ಕಾರ್ಯಕ್ರಮ ಸೇರಿದಂತೆ ಹಲವಾರು ರೀತಿಯ ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುತ್ತೇವೆ ಪ್ರಪಂಚದಾದ್ಯಂತ 20 ದೇಶಗಳಲ್ಲಿ ನಮ್ಮ ಅಲಯನ್ಸ್ ಸಂಸ್ಥೆ ಹರದಿಕೊಂಡಿದ್ದು ನೂರಕ್ಕೂ ಹೆಚ್ಚು ಜಿಲ್ಲೆಗಳು ಹಾಗೂ 2500ಕ್ಕೂ ಹೆಚ್ಚು ಕ್ಲಬ್ ಗಳು ಮತ್ತು ಸುಮಾರು ೨೦ ನಾವಿರ ಸದಸ್ಯರುಗಳನ್ನು ಹೊಂದಿದ್ದು, ಬೆಂಗಳೂರಿನ ನಮ್ಮ ಜಿಲ್ಲೆಯು ಕಳೆದ ವರ್ಷ ಪ್ರಾರಂಭವಾಗಿದ್ದು ಅಂದಾಜು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುತ್ತದೆ ಹಾಗೂ 25 ಕ್ಲಬ್ ಗಳನ್ನು ಒಳಗೊಂಡಿರುವ ಈ ಜಿಲ್ಲೆ ಕಳೆದ ವರ್ಷ ಅತ್ಯುತ್ತಮ ಸಮಾಜ ಸೇವಾ ಚಟುವಟಿಕೆಗಳನ್ನು ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿರುತ್ತದೆ ಈ ವರ್ಷ ಏಪ್ರಿಲ್ ಬೆಂದ ಅಧಿಕಾರವನ್ನು ವಹಿಸಿಕೊಂಡಿರುವ ನಮ್ಮ ಹೆಮ್ಮೆಯ ಜಿಲ್ಲಾ ರಾಜ್ಯವಾಲರು ಅಲಯ್ ಡಾ ಸತ್ಯವತಿ ಬಸವರಾಜ್ ಹಾಗೂ ಎಲ್ಲಾ ಸಂಪುಟ ಸದಸ್ಯರು ದಿನಾಂಕ 12.04.2025ರಂದು ಸಂಪುಟ ಸದಸ್ಯರ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಂಡಿದ್ದು ಎಲ್ಲಾ ಮಾಧ್ಯಮ ಮಿತ್ರರು ಈ ಒಂದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಒಂದು ಸಂಸ್ಥೆಯ ಬೆಳವಣಿಗೆಗೆ ಕಾರಣೀಭೂತರಾಗಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.