ಬೆಂಗಳೂರು, ಮಾರ್ಚ್ 27, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಅರಳಾಪುರ ಮಂಜೇಗೌಡ್ರು ಮಾತನಾಡಿದರು. 

ಬೆಂಗಳೂರಿನ ಯಲಹಂಕದ ಶೆಟ್ಟಿಗೆರೆ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಠಿಸಿ ಕೋಟ್ಯಾಂತರ ಬೆಲೆ ಬಾಳುವ ಜಮೀನನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ ಎಂದು ಅರಳಾಪುರ ಮಂಜೇಗೌಡ್ರು ಆರೋಪಿಸಿದರು. 

ಯಲಹಂಕ ತಾಲ್ಲೂಕು, ಜಾಲ ಹೋಬಳಿ, ಶೆಟ್ಟಿಗೆರೆ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 78, 79, 80 ರಲ್ಲಿ ಭ್ರಷ್ಟಾಚಾರ ನಡೆಸಿ ಅಕ್ರಮ ದಾಖಲೆ ಸೃಷ್ಠಿಸಿ ಕೋಟ್ಯಾಂತರ ಬೆಲೆ ಬಾಳುವ ಜಮೀನನ್ನು ಪಟ್ಟ ಭದ್ರಹಿತಾಸಕ್ತಿಗಳು ಲಪಟಾಯಿಸುತ್ತಿರುವ ಬಗ್ಗೆ ಹಾಗೂ ಯಲಹಂಕ ತಾಲ್ಲೂಕು ಕಛೇರಿ ವ್ಯಾಪ್ತಿಯ ಅವ್ಯವಸ್ಥೆಗಳ ಬಗ್ಗೆ ಹಾಗೂ ಯಲಹಂಕ ತಾಲ್ಲೂಕು ವ್ಯಾಪ್ತಿಯ ಅನೇಕ ಸಾರ್ವಜನಿಕರು ರೈತರು, ದಲಿತರ ಹಾಗೂ ಇನ್ನಿತರ ಅನೇಕ ಜಲ್ವಂತ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ ಎಂದು ತಿಳಿಸಿದರು.

ರೈತರು ಅನುಭೋಗದಲ್ಲಿ ಇರುವ ಜಮೀನನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಭೂ ಮಾಫಿಯಾದ ಕೆಲ ವ್ಯಕ್ತಿಗಳು ಅಮಾಯಕ ರೈತರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ರೈತ ಹೋರಾಟಗಾರ್ತಿ ರಾಜೇಶ್ವರಿ ಅವರು ಆರೋಪಿಸಿದರು. 

ಹಣ ಬಲದಿಂದ ರೈತರ ಜಮೀನು ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ, ಹಾಗಾಗಿ ರಾಜ್ಯ ಸರ್ಕಾರವು ಸೂಕ್ತ ಕ್ರಮ ಕೈಗೊಂಡು ರೈತರ ಜಮೀನು ಉಳಿಸಬೇಕೆಂದು ಮನವಿ ಮಾಡಿದರು.