ಬೆಂಗಳೂರು, ಮಾರ್ಚ್ 25, 2025
ಬೆಂಗಳೂರಿನ ಜೆ.ಪಿ. ಭವನದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ರಾಜ್ಯ ಸರ್ಕಾರವು ₹15,500 ಕೋಟಿ ಲೂಟಿ ಮಾಡಲು ಮುಂದಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷ ಕಳೆದಿದೆ.ಆಡಳಿತಕ್ಕೆ ಬಂದಾಗಿಂದ ಇಷ್ಟು ದೊಡ್ಡ ಮಟ್ಟದ ಹಗರಣಗಳು ಭ್ರಷ್ಟಾಚಾರಗಳು ಬಯಲಿಗೆ ಬರುತ್ತೆ ಅಂತ ಜನ ನಿರೀಕ್ಷೆ ಮಾಡಿರಲಿಲ್ಲಾ.ಆಡಳಿತ ವೈಪಲ್ಯತೆ ಆಗಿದೆ.ಸ್ಮಾರ್ಟ್ ಮೀಟರ್ ಇನ್ಸ್ಟಾಲೇಶನ್ ನಲ್ಲಿ ಪಾರದರ್ಶಕವಾಗಿ ಟೆಂಡರ್ ಆಗಿಲ್ಲಾ,ಇದನ್ನ ರಾಜ್ಯದ ಜನತೆ ಮುಂದೆ ಮಾಧ್ಯಮಗಳು ಇಟ್ಟಿವೆ.
ಸದನ ಅಂತ್ಯದ ದಿನಗಳಲ್ಲಿ ಸ್ಮಾರ್ಟ್ ಮೀಟರ್ ಹಗರಣದ ಬಗ್ಗೆ ಬಿಜೆಪಿ ಶಾಸಕರು ಸದನದ ಒಳಗೆ ಪ್ರಾಸ್ತಾಪ ಮಾಡಿದ್ರು,ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಕಲೆಹಾಕ್ತಿದ್ದಿನಿ.ರಾಜ್ಯದ ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ ಸಬ್ಸಿಡಿ ಕೊಡೊದನ್ನ ಕೇಂದ್ರ ಸರ್ಕಾರದ ಅರ್ ಡಿ ಎಸ್ ಎಸ್ ಕೊಡ್ತಿದೆ.ರಾಜ್ಯದ ಇಂಧನ ಸಚಿವರು, ಅಧಿಕಾರಿಗಳು ಆರ್ ಡಿ ಎಸ್ ಎಸ್ ಸ್ಕೀಮ್ ನಿಂದ ಹೊರಗಡೆ ಹೋಗುವ ಕೆಲಸ ಮಾಡ್ತಿದ್ದಾರೆ.ರಾಜ್ಯದ ಜನತಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡ್ತಿದೆ ಅಂತಾರೆ. ಆರ್ ಡಿ ಎಸ್ ಎಸ್ ಸ್ಕೀಮ್‌ನಿಂದ ಆಚೆ ಬಂದಿರೋದಕ್ಕೆ ಸಚಿವರು ಉತ್ತರ ಕೊಡಬೇಕು,ಇದರ ಒಳಗೆ ಗೋಲ್ ಮಾಲ್ ನಡೆದಿದೆ.ಆದ್ರೆ rdss ಸ್ಕೀಂ ನಿಂದ ಯಾಕೆ ಹೊರಹೋದ್ರು..?ಇದು ಅನುಮಾನಕ್ಕೆ ಕಾರಣವಾಗಿದೆ
ಇಲ್ಲಿ ಗೋಲ್ಮಾಲ್ ನಡೆದಿರುವುದು ನಿಜ, ಅನುಮಾನವೇ ಇಲ್ಲ,ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲೇ 900 ರೂ. ಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಆಗಿದೆ.ಸಿಂಗಲ್ ಪೇಸ್ ಗೆ ರಾಜ್ಯದಲ್ಲಿ 4998 ರೂ. ಪ್ರತಿ ಮೀಟರ್ ಗೆ ದರ ನಿಗದಿ ಮಾಡಿದ್ದಾರೆ
ತ್ರಿಪೇಸ್ ಗೆ 28 ಸಾವಿರ ಸರ್ಕಾರಿ ದರ ಮಾರ್ಕೆಟ್ ದರ 3 ಸಾವಿರ ಅಷ್ಟೆ,ಬೇರೆ ರಾಜ್ಯಗಳಲ್ಲಿ ಮಂತ್ಲಿ ಚಾರ್ಜ್ 57 ರೂ. ಅಷ್ಟೆ,ತೆಲಂಗಾಣದಲ್ಲಿ 66 ರೂ. ನಮ್ಮ ರಾಜ್ಯದಲ್ಲಿ 71 ರೂ. 10 ವರ್ಷದಲ್ಲಿ 15 ಸಾವಿರ ಕೋಟಿ ಗೂ. ಹೆಚ್ಚು ಸಂಗ್ರಹಕ್ಕೆ ಸ್ಕೆಚ್ ಟೆಂಡರ್ ಕರೆಯಬೇಕಾದ್ರೆ ನಿಯಮಾವಳಿಗಳನ್ನ ಪಾಲನೆ ಮಾಡಬೇಕು.೪೫ ದಿನ ಮಿನಿಮಮ್ ಟೈಮ್ ಕೊಡ್ತಾರೆ
ಕೇವಲ ೩೪ ದಿನದ ಒಳಗೆ ಟೆಂಡರ್ ಪ್ರಕ್ರಿಯೆ ಮುಗಿಸಿದ್ದಾರೆ.ಪೊಲ್ ಮ್ಯಾನಿಪ್ಯಾಕ್ಚರ್ ಕಂಪನಿಗೆ ಕೊಡ್ತರೆ,ದಾವಣಗೆರೆ ಮೂಲಕ ರಾಜಶ್ರಿ ಕಂಪನಿಗೆ ಕೊಡ್ತಾರೆ.ಟೆಕ್ನಿಕಲ್ ಫೈನಾನ್ಸಿಯಲ್ ನಲ್ಲಿ ಎಲಿಜಬಲ್ ಇಲ್ಲಾ.ಯಾರ ಆಶೀರ್ವಾದದಿಂದ ಇವರಿಗೆ ಟೆಂಡರ್ ಕೊಟ್ಟಿದ್ದಾರೆ ಗೊತ್ತಿಲ್ಲಾ.೪೮೦೦ ಕೋಟಿಯಷ್ಟು ಇದಕ್ಕೆ ಎಲಿಜಬಲ್ ಇರಬೇಕು. ಕೆಟಿಪಿಪಿ ನಿಯಮದ ಪ್ರಕಾರ ೯೬೦೦ ಕೋಟಿ ಹಣಕಾಸು ವಹಿವಾಟು ಇರಬೇಕು.
ಉತ್ತರ ಪ್ರದೇಶದಲ್ಲಿ ಬ್ಲಾಕ್ ಲಿಸ್ಟ್ ನಲ್ಲಿರುವ ಸಾಫ್ಟ್‌ವೇರ್ ಕಂಪನಿಗೆ ಸಬ್ ಕಾಂಟ್ರಾಕ್ಟ್ ಕೊಡ್ತಾರೆ.೧೫೫೦೦ ಸಾವಿರ ಕೋಟಿ ಲೂಟಿಯಾಗ್ತಿದೆ
ಪಾರದರ್ಶಕವಾಗಿ ರಿಟೆಂಡರ್ ಕರೆಯೋದು ಉತ್ತಮ
ಇಂಧನ ಸಚಿವರು ಅಧಿಕಾರಿಗಳಿಗೆ ಇದರ ಬಗ್ಗೆ ತರಾತುರಿಯಲ್ಲಿ ಮಾಹಿತಿ ಕೊಡಿ ಎಂದು ಸುದ್ದಿಗೋಷ್ಟಿ ಮಾಡಿಸಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ , ವಿರೋದ ಪಕ್ಷದ ನಾಯಕ ಅಶೋಕ್ ಜೊತೆ ಮಾತಾಡ್ತಿನಿ,ಇದನ್ನ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೊಗೊದಕ್ಕೆ ಹೋರಾಟ ಮಾಡ್ತಿವಿ.ಟೆಂಡರ್ ನಿಮಯಗಳನ್ನ ಗಾಳಿಗೆ ತೂರಿದ್ದಾರೆ. ಇದಕ್ಕೆ ಉತ್ತರ ಕೊಡಬೇಕು ಹಗರಣದಲ್ಲಿ ಪ್ರಭಾವಿ ಸಚಿವರಿದ್ದಾರಾ ಎಂಬ ವಿಚಾರ..ಇಲಾಖೆ ಸಚಿವರ ಗಮನಕ್ಕೆ ಬರದೆ ಯಾರಿಗಾದ್ರು ಅನುಕೂಲ ಮಾಡಲು ಸಾದ್ಯನಾ..?
ಅಕ್ರಮಕ್ಕೆ ಸಚಿವರೆ ಉತ್ತರ ಕೊಡಬೇಕು.ಅಧಿಕಾರಿಗಳಿಂದ ಉತ್ತರ ಕೊಟ್ರೆ ಸಾಲದು
ಇದು ದಪ್ಪ ಚರ್ಮದ ಸರ್ಕಾರ ನಾವು ಮುಂದೆ ಅಧಿಕಾರಕ್ಕೆ ಬರೊಲ್ಲಾ ಅಂತ ಗೊತ್ತು.ಅದಕ್ಕೆ ಇಗ ಎಷ್ಟು ಆಗುತ್ತೊ ಅಷ್ಟು ಲೂಟಿ ಮಾಡ್ತಿದ್ದಾರೆ,ಸರ್ಕಾರ ಬಂದಮೇಲೆ ಎರಡವರೆ ಲಕ್ಷ ಕೋಟಿ ಸಾಲ ಆಗಿದೆ.ಸಾಲ ತೀರಿಸೋದಕ್ಕೆ ಸಾಲ ಮಾಡಿದ್ದಾರೆ
ಈ ಸಾಲದಿಂದ ಯಾವುದೇ ಅಭಿವೃದ್ಧಿಯಾಗಿಲ್ಲಾ
ಸಂವಿಧಾನ ಬದಲಾವಣೆ ವಿಚಾರ ಡಿಕೆಶಿಗೆ ಟಾಂಗ್..
ಸಂವಿಧಾನ ಪುಸ್ತಕ ಹಿಡಿದು ಗಂಟೆ ಅಲ್ಲಾಡಿಸಿದ್ರೆ ಆಗೊಲ್ಲಾ..ಅದರಲ್ಲಿ ಏನು ಬರೆದಿದೆ ಅನ್ನೋದನ್ನ ಗೊತ್ತಿರೋರಿಂದ ತಿಳಿದುಕೊಳ್ಳಲಿಮೋದಿ ಸಂವಿಧಾನ ಬದಲಾವಣೆ ಮಾಡ್ತಾರೆ ಅಂತ ಅಪಪ್ರಚಾರ ಮಾಡಿದ್ರು ಎಲ್ಲಾರುಇಗ ಡಿಕೆಶಿ ಕಾಂಗ್ರೆಸ್ ಮನಸ್ಥಿತಿ ಏನು ಅನ್ನೋದನ್ನ ಹೇಳಿದ್ದಾರೆ.ನಟ್ಟು ಬೋಲ್ಟ್ ಟೈಟ್ ಮಾಡೋದಕ್ಕೆ ಜನರೆ ಸ್ಪಾನರ್ ತಗೊತ್ತಾರೆ.4% ಮೀಸಲಾತಿ ವಿಚಾರ .ರಾಜಭವನಕ್ಕೆ ಬಿಜೆಪಿ ಜೊತೆಗೂಡಿ ಹೋಗಿದ್ದೇವೆ.ಧರ್ಮಾಧಾರಿತ ಮೀಸಲಾತಿಗೆ ಕೋರ್ಟ್ ವಿರೋಧಿಸಿದೆ.ಮೈನಾರಿಟಿ ಎಂದು ಸರ್ಕಾರ ಹೇಳುತ್ತೆ,ಜೈನರು, ಬೌಧರು ಸೇರಿದಂತೆ ಉಳಿದ ಮೈನಾರಿಟಿಗೂ ಸೌಲಭ್ಯ ಕೊಡಲಿ
ಬಿಜೆಪಿ- ಜೆಡಿಎಸ್ ನಡುವೆ ಯಾವುದೆ ಗೊಂದಲ ಇಲ್ಲ
[ಎಲ್ಲಾ ಬುದ್ದಿ ಜೀವಿಗಳಿಗೂ ಗೊತ್ತಿದೆ ಒಂದು ಖುರ್ಚಿಗಾಗಿ ಬೇರೆ ಏನು ಇಲ್ಲಾ,ಈ ಮಟ್ಟದ ರಾಜಕಾರಣ ಮಾಡೋದು.ಯಾರು ಆ ಸಿಡಿ ಫ್ಯಾಕ್ಟರಿ ಓನರ್ ಯಾರು ಆ ಮಾಲೀಕ ದಯಮಾಡಿ ತಗೊಂಡು ಬನ್ನಿ ಜನರ ಮುಂದೆ ಇಡಿ ಏಳುವರೆ ಕೋಟಿ ಜನರು ಕಾಯ್ತಿದ್ದಾರೆ.ಯಾರು ಅ ಮಹನೀಯ ಯಾರು ಪುಣ್ಯಾತ್ಮಇಷ್ಟು ಸಿಡಿಗಳನ್ನ ಸಮಯ ಕೊಟ್ಟು ಬಂಡವಾಳ ಹಾಕಿ ಜನಗಳನ್ನ ಇಟ್ಟು ಇಷ್ಟೆಲ್ಲಾ ಸಿಡಿಗಳನ್ನ ಮಾಡಿಸಿರೋರು ಯಾರು ಅಂತ ನಾವೆಲ್ಲಾ ಕಾಯ್ತಿದ್ದೇವೆ.ದಯಮಾಡಿ ದೂರು ಕೊಡಿ ರಾಜಣ್ಣನವರೆ ಯಾಕೆ ಹೀಗೆ ಸತಾಯಿಸ್ತಿದ್ದಿರಾ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.