ಬೆಂಗಳೂರು, ಜನವರಿ 23, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಗೋರ ಸೇನಾ ರಾಷ್ಟೀಯ ಸಂಘಟನೆ'ಯ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಲೋಕಸಭಾ ಸದಸ್ಯರಾದ ಉಮೇಶ್ ಜಾದವ್ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಒಳ ಮೀಸಲಾತಿಗೆ ಆಕ್ಷೇಪಣೆ ಕುರಿತು ಮಾಜಿ ಲೋಕಸಭಾ ಸದಸ್ಯರಾದ ಉಮೇಶ್ ಜಾದವ್ ಅವರು ಮಾತನಾಡಿದರು.
ಮೇಲೆ ತಿಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತರುವುದೆಂದರೆ, ಬಂಜಾರಾ ಸಮುದಾಯವು (ಬಂಜಾರಾ, ಲಂಬಾಣಿ, ಲಂಬಾಡಾ, ಲಂಬಾಡಿ, ಲಮಾಣಿ, ಸುಗಾಳಿ ಮತ್ತು ಸುಕಾಳಿ ಮುಂತಾದ ವಿವಿಧ ಪದಗಳಿಂದ ಸಾಮಾನ್ಯವಾಗಿ ಕರೆಯಲ್ಪಡುತ್ತದೆ) ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದೆ. ಈ ಸಮಾಜವು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಸಾಕಷ್ಟು ಸಮಸ್ಯೆಯನ್ನು ಅನುಭವಿಸಿದೆ ಎಂದು ತಿಳಿಯಬಯಸುತ್ತೇವೆ. ಬಂಜಾರಾ ಸಮಾಜವು ಪ್ರಾಚೀನ ಭಾರತದಲ್ಲಿ ಸಾಂಸ್ಕೃತಿಕ ಪರಂಪರೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಪಾರ ಕೊಡುಗೆ ನೀಡಿದ, ಇದರ ಬಗ್ಗೆ ಉಲ್ಲೇಖವು ಸಾಕಷ್ಟು ಪುಸ್ತಕಗಳಲ್ಲಿ ಮುದ್ರಣಗೊಂಡಿದೆ ಹಾಗು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಈ ಸಮುದಾಯದ ಸರಿಯಾದ ಜನಗಣತಿಯನ್ನು ಅನುಸರಿಸಲಾಗಿಲ್ಲ ಎನ್ನುವುದಕ್ಕೆ ಸಾಕಷ್ಟು ಉದಾರಣೆಗಳು ಲಭ್ಯವಿದೆ.
ಸ್ವಾತಂತ್ರದ ನಂತರ, ರಾಜ್ಯಗಳ ಮರುಸಂಘಟನೆಯು ಈ ಸಮುದಾಯವನ್ನು ಕೆಲವು ರಾಜ್ಯದಲ್ಲಿ ಅಲ್ಪಸಂಖ್ಯೆಯನ್ನಾಗಿ ಮಾಡಿದೆ ಮತ್ತು ಕೆಲವು ರಾಜ್ಯಗಳು ಈ ಸಮುದಾಯದ ಬಗ್ಗೆ ಸರಿಯಾದ ಜನಗಣತಿಯನ್ನು ನಡೆಸಲಾರದ ಕಾರಣ, ಬಂಜಾರಾ ಸಮುದಾಯವನ್ನು ವಿವಿಧ ಜಾತಿ ಗುಂಪುಗಳಲ್ಲಿ ಇರಿಸಲು ಕಾರಣವಾಗಿದೆ. ಈದರಿಂದಾಗಿ ವಿವಿಧ ರಾಜ್ಯಗಳಲ್ಲಿ ಬಂಜಾರಾ ಸಮುದಾಯಕ್ಕೆ ಗಂಭೀರ ಅನ್ಯಾಯವಾಗಿದೆ ಎಂದು ಹೇಳಲು ಈಚೆಪಡುತ್ತೇನೆ.
ಬಂಜಾರಾ ಸಮುದಾಯವು ದೇಶದ್ದುದ್ದಕ್ಕೂ ಹರಡಿದೆ, ಉತ್ತರದಿಂದ ದಕ್ಷಿಣ ಭಾರತದಲ್ಲಿ ಮತ್ತು ಭಾರತದ ಪಶ್ಚಿಮದಿಂದ ಪೂರ್ವ ಭಾಗದಲ್ಲಿ ಸಾಕಷ್ಟು ರಾಜ್ಯಗಳಲ್ಲಿ ಈ ಸಮುದಾಯವು ಕಂಡುಬರುತ್ತದೆ. ಕರ್ನಾಟಕದಲ್ಲಿ ಸರಿಯಾದ ಜನಗಣತಿಯನ್ನು ಅನುಸರಿಸುತ್ತಿಲ್ಲ ಎಂಬುದಕ್ಕೆ ಪುರಾವೆಯು ಸ್ವಾತಂತ್ರ್ಯ ಪೂರ್ವದ ಯುಗದಿಂದ ಕಂಡುಬರುತ್ತದೆ.