ಜನವರಿ 5, 2025
ಬೆಂಗಳೂರಿನ ಕೆ.ಆರ್. ಪುರದ ಎಂ.ಟಿ.ಬಿ ಶುಭಮೇರು ಕಲ್ಯಾಣಮಂಟಪದಲ್ಲಿ 'ಶ್ರೀ ವಾಲ್ಮೀಕಿ ಜನಕಲ್ಯಾಣ ಕ್ರೆಡಿಟ್ ಕೋ - ಆಪರೇಟಿವ್ ಸೊಸೈಟಿ'ಯ ಉದ್ಘಾಟನಾ ಸಮಾರಂಭ ನಡೆಯಿತು.
ಸಹಕಾರಿ ಸಚಿವರಾದ ಕೆ.ಎನ್. ರಾಜಣ್ಣ, ಶಾಸಕರಾದ ಬೈರತಿ ಬಸವರಾಜ, ಮಾಜಿ ಸಚಿವರಾದ ಶ್ರೀರಾಮುಲು, ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ದೀಪ ಬೆಳಗಿಸುವ ಮುಖೇನ 'ಶ್ರೀ ವಾಲ್ಮೀಕಿ ಜನಕಲ್ಯಾಣ ಕ್ರೆಡಿಟ್ ಕೋ - ಆಪರೇಟಿವ್ ಸೊಸೈಟಿ'ಯನ್ನು ಉದ್ಘಾಟನೆ ಮಾಡಿದರು.
ಈ ಸಮಾರಂಭದಲ್ಲಿ ಶ್ರೀ ವಾಲ್ಮೀಕಿ ಜನಕಲ್ಯಾಣ ಕ್ರೆಡಿಟ್ ಕೋ - ಆಪರೇಟಿವ್ ಸೊಸೈಟಿ'ಯ ಎಲ್ಲಾ ನಿರ್ದೇಶಕರು ಭಾಗಿಯಾಗಿದ್ದರು. ಜತೆಗೆ ಈ ಸಮಾರಂಭದಲ್ಲಿ ವಾಲ್ಮೀಕಿ ಸಮುದಾಯದ ಸಾವಿರಾರು ಜನರು ಭಾಗಿಯಾಗಿದ್ದರು.