ಅಕ್ಟೋಬರ್ 18, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಕೆಎಲ್‌ಗೆ ಸಂಸ್ಥೆಯ ಎಸ್. ನಿಜಲಿಂಗಪ್ಪ ಕಾಲೇಜಿನ ಸಿಬ್ಬಂದಿ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಎಸ್ ನಿಜಲಿಂಗಪ್ಪ ಕಾಲೇಜಿನ ಡಾ. ಅರುಣಕುಮಾರ ಬಿ. ಸೋನಪ್ಪನವರ ಅವರು ಮಾತನಾಡಿದರು.
ಎಸ್. ನಿಜಲಿಂಗಪ್ಪ ಕಾಲೇಜಿನ ವಜ್ರ ಮಹೋತ್ಸವದ ಹಿನ್ನೆಲೆಯಲ್ಲಿ ಅಕ್ಟೋಬರ್ 20ರಂದು ತಾಂತ್ರಿಕ ಮತ್ತು ತಾಂತ್ರಿಕೇತರ ಅಭ್ಯರ್ಥಿಗಳಿಗಾಗಿ "ಮೆಗಾ ಉದ್ಯೋಗ ಮೇಳ"ವನ್ನು ಆಯೋಜಿಸಲಾಗಿದೆ ಎಂದು ಡಾ. ಅರುಣಕುಮಾರ ಬಿ. ಸೋನಪ್ಪನವರ ಅವರು ತಿಳಿಸಿದರು.
ಈ ಉದ್ಯೋಗ ಮೇಳದಲ್ಲಿ ಅನೇಕ ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಲಿವೆ ಎಂದು ಡಾ. ಅರುಣಕುಮಾರ ಬಿ. ಸೋನಪ್ಪನವರ ತಿಳಿಸಿದರು.