ಮೇ 27, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂಪಿ ಕರಬಸಪ್ಪ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಪಕ್ಷೇತರ ಅಭ್ಯರ್ಥಿಯಾದ ಎಂ.ಪಿ ಕರಬಸಪ್ಪ ಅವರು ಮಾತನಾಡಿದರು.
ಜೂನ್ 3ರಂದು ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ನನ್ನ ಕ್ರಮ ಸಂಖ್ಯೆ 7 ಆಗಿದ್ದು, ಮತದಾರ ಬಂಧುಗಳು ನನಗೆ ತಮ್ಮ ಅಮೂಲ್ಯ ಪ್ರಾಶಸ್ತ್ಯ ಮತ 1 ನೀಡಬೇಕೆಂದು ಎಂ.ಪಿ. ಕರಬಸಪ್ಪ ಅವರು ಒತ್ತಾಯಿಸಿದರು.