ನ್ಯೂಯಾರ್ಕ್ ನಗರದಲ್ಲಿನ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ "ಅಂತಾರಾಷ್ಟ್ರೀಯ ಯೋಗ ದಿನ"ವನ್ನು ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆಯಲ್ಲಿ ಪ್ರಮುಖರಾಗಿ ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಜತೆಗೆ 180 ದೇಶಗಳ ಪ್ರತಿನಿಧಿಗಳು ಯೋಗದ ವಿವಿಧ ಆಸನಗಳನ್ನು ಮಾಡಿದರು. ಇದೊಂದು ವಿಶ್ವದಾಖಲೆ ಕಾರ್ಯಕ್ರಮವಾಗಿತ್ತು.