ರಾಷ್ಟ್ರೀಯ ಗ್ರಾಹಕರ ದಿನಾಚರಣೆ 2025

 ರಾಜ್ಯ ಗ್ರಾಹಕರ ವೇದಿಕೆಗೆ ಸುಮಾರು 255466 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 248072 ಪ್ರಕರಣಗಳು ವಿಲೇವಾರಿಯಾಗಿದೆ

ಬೆಂಗಳೂರು: ಡಿಸೆಂಬರ್ 24, 2025

 ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ 2025ರ ಕಾರ್ಯಕ್ರಮವನ್ನು

ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಉದ್ಘಾಟಿಸಿದರು.

ನಗರದ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಕುರಿತು ಮಾತನಾಡಿದ ಸಚಿವರು

ರಾಜ್ಯ ಗ್ರಾಹಕರ ವೇದಿಕೆಗೆ ಸುಮಾರು 255466 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 248072 ಪ್ರಕರಣಗಳು ವಿಲೇವಾರಿಯಾಗಿದ್ದು ಶೆ 97% ರಷ್ಟು ಕಾರ್ಯಮುಗಿದಿದೆ 7394 ಅಂದರೆ 3% ರಷ್ಟು ಪ್ರಕರಣಗಳು ಬಾಕಿ ಇದ್ದು ಈ ಸಂದರ್ಭದಲ್ಲಿ ಶಿವಶಿಂಕರೇಗೌಡ ರವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಬೇಕು ಎಂದರು.

ಅತಿ ಬೇಗ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಶೀಘ್ರವಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರನ್ನು ನೇಮಿಸಲು ಕ್ರಮವಹಿಸಲಾಗುವುದು ಎಂದರು.

ಇಲ್ಲಿ ಒಂದು ಪ್ರಕರಣ ನೋಡಿದಾಗ

ಒಬ್ಬ ಡಾಕ್ಟರ್ ಕೆಲಸ ಸರಿಯಾಗಿ ಮಾಡದೆ ಇದ್ದರೆ ರೋಗಿಯ ಪ್ರಾಣ ಉಳಿಯಲ್ಲಾ ಗ್ರಾಹಕ ವೇದಿಕೆಗೆ ಎರಡು ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಅವರು ಮಾಡಿರುವ ತಪ್ಪಿನಿಂದ ಒಬ್ಬ ಹೆಣ್ಣು ಮಗಳಿಗೆ ಕಣ್ಣು ಅಪಾಯವಾಗಿದ್ದು ಬೇಸರಾ ತಂದಿದೆ ಇಂತಹ ಪ್ರಕರಣಗಳು ನಡೆಯಬಾರದು ಇಂತಹ ಪ್ರಕರಣಗಳಲ್ಲಿ ಅವರಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದರು.

ಡಾಕ್ಟರ್ ಮಾಡಿದ ತಪ್ಪಿನಿಂದ ಮಕ್ಕಳ ಪ್ರಾಣಕ್ಕೆ ಅಪಾಯವಾಗಿದ್ದು ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕಿತ್ತು‌ ಎಂದರು.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಫರಾದಗಳು ಹೆಚ್ಚಾಗುತ್ತಿವೆ ಅದರಲ್ಲಿ ತುಂಬಾ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ ಸೈಬರ್ ಕಳ್ಳರು ಜಾಸ್ತಿ ಯಾಗಿವೆ

ಮೊಬೈಲ್ ಗಳಮೂಲಕ ಎಸ್ ಎಂಎಸ್ ಕಳುಹಿಸಿ ಒಟಿಪಿ ಮೂಲಕ ಜನರು ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಇದು ತಡೆಯಬೇಕು ಇದರ ಕುರಿತು ನಾನು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸುತ್ತೇನೆ ಎಂದರು.

ನಾವು ಗ್ರಾಹಕರ ರಕ್ಷಕರಾಗಬೇಕು ನಾವು ನಮ್ಮ ಬಳಿ ಬಂದವರನ್ನು ಪ್ರೀತಿಯಿಂದ ಮಾತಾಡಿಸಿ ಅವರ ಸೇವೆ ಮಾಡಬೇಕು ಇದು ಗಾಂಧಿಯವರ ಸಂಕಲ್ಪ ವಾಗಿತ್ತು .

ಈ ಬಿಜೆಪಿಯವರು ದ್ವೇಷ ರಾಜಕಾರಣ ಮಾಡುವ ಮೂಲಕ ಭಾತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿಯವರ ಹೆಸರು ಬದಲಿಸಲು ಹೊರಟಿದ್ದಾರೆ ಅವರು ನೂತನ ಕಾರ್ಯಕ್ರಮ ಅನುಷ್ಠಾನ ಮಾಡಿ

  ಅಟಲ್ ಬಿಹಾರಿ ವಾಜಪೇಯಿ ರವರ ಹೆಸರನ್ನು ಇಟ್ಟಿದ್ದರೆ ನಾವು ಸ್ವಾಗತಿಸುತ್ತಿದ್ದೆವು ಆದರೆ ಗಾಂಧೀಜಿಯವರ ಹೆಸರು ಬದಲಿಸಿ ರಾಮರ ಹೆಸರನ್ನು ಇಟ್ಟಿದ್ದು ತುಂಬಾ ಬೇಸರವಾಗಿದೆ.

ಶ್ರೀರಾಮ ಎಲ್ಲಾರಿಗೂ ದೇವರೆ ನಾನು ಬೆಳಗ್ಗೆ 5 ಗಂಟೆಗೆ ಎದ್ದು ರಾಮಕೋಟಿ ಬರೆಯುತ್ತೇನೆ ಇದು ಇಂದಿನದಲ್ಲಾ ಸುಮಾರು ವರ್ಷಗಳಿಂದ ಮುಂದುವರೆಸುತ್ತಾ ಬರೆಯುತ್ತಿದ್ದೇನೆ ಶ್ರೀರಾಮ ಎಲ್ಲಾರಿಗೂ ದೇವರೆ ಅವರ ಹೆಸರನ್ನು ರಾಜಕೀಯಕ್ಕೆ ಬಳಸಬಾರದು ಎಂದರು

ಯಾರೆ ಆಗಲಿ ತಪ್ಪಾಗಿದಲ್ಲಿ ಬದಲಾವಣೆಗೆ ಪ್ರಯತ್ನವನ್ನು ಮಾಡಬೇಕು ಆಗದೆ ಇದ್ದಾಗ ಶಿಕ್ಷೆ ವಿಧಿಸಬೇಕು ಎಂದರು 

ಈ ಎರಡು ಆಯೋಗದ ಕೆಲಸ ಉತ್ತಮವಾಗಿದ್ದು ಅವರಿಗೆ ಸರ್ಕಾರದ ಪರವಾಗಿ ಎಲ್ಲಾ ನೆರವನ್ನು ಕೊಡಲು ಬದ್ದವಾಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದರಾದ ಚಂದ್ರಪ್ಪ, ಆಹಾರ ಆಯೋಗದ ಅಧ್ಯಕ್ಷರಾದ ಕೃಷ್ಣ,ರಾಜ್ಯ ಗ್ರಾಹಕ ವೇದಿಕೆ ಅಧ್ಯಕ್ಷರಾದ ನ್ಯಾಯಮೂರ್ತಿ ಶಿವ ಶಂಕರೇಗೌಡ,ಸರ್ಕಾರದ ಕಾರ್ಯದರ್ಶಿ ಪ್ರಸಾದ್,ಆಯುಕ್ತರಾದ ಕನಗವಲ್ಲಿ,ನಿಗಮ ನಿರ್ದೇಶಕ ಜಗದೀಶ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಕಾನೂನು ಮಾಪನ‌ ಇಲಾಖೆಯ ನಿಯಂತ್ರಕರಾದ ಎಂ.ಎಸ್.ಎನ್.ಬಾಬು ಹಾಗೂ ಅಧಿಕಾರಿಗಳು ,ಆಯೋಗದ ಸದಸ್ಯರು ಉಪಸ್ಥಿತರಿದ್ದರು.