ಬೆಂಗಳೂರು, ಮಾರ್ಚ್ 17, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಕೇಂದ್ರ ಸರ್ಕಾರವು ಬ್ಯಾಂಕಿಂಗ್ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ 2025ರ ಮಾರ್ಚ್ 23ರ ಮಧ್ಯರಾತ್ರಿಯಿಂದ 2025ರ ಮಾರ್ಚ್ 25ರ ಮಧ್ಯರಾತ್ರಿವರೆಗೆ ಮುಷ್ಕರ ನಡೆಯಲಿದೆ ಎಂದು ತಿಳಿಸಿದರು.
1. ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಷನ್.
2. ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾಡರೇಷನ್
3. ನ್ಯಾಷನಲ್ ಕಾಡೆಷನ್ ಆಫ್ ಬ್ಯಾಂಕ್ ಯೂನಿಯನ್ನ.
4. ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್
5 ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ.
6. ಇಂಡಿಯನ್ ನ್ಯಾಷನಲ್ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್.
7. ಇಂಡಿಯನ್ ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಕಾಂಗ್ರೆಸ್.
8. ನ್ಯಾಷನಲ್ ಆರ್ಗನೈಸೆಶನ್ ಆಫ್ ಬ್ಯಾಂಕ್ ವರ್ಕಸ್್ರ
9. ನ್ಯಾಷನಲ್ ಆರ್ಗನೈಸೆಶನ್ ಆಫ್ ಬ್ಯಾಂಕ್ ಆಫೀಸರ್ಸ್
ಈ ನಮ್ಮ UFBU ಕೆಳಕಂಡ ಬೇಡಿಕೆಗಳಿಗಾಗಿ, 23 ಮಾರ್ಚ 2025 ರ ಮಧ್ಯರಾತ್ರಿಯಿಂದ 25 ಮಾರ್ಚ್ 2025 ರ ಮಧ್ಯರಾತ್ರಿಯವರೆಗೆ ಎರಡು ದಿನಗಳ ಮುಷ್ಕರವನ್ನು ಘೋಷಿಸಿದೆ.
> ಎಲ್ಲ ವಿಭಾಗಗಳಲ್ಲಿ ಹೊಸ ನೇಮಕಾತಿ ಈಗಿರುವ ತಾತ್ಕಾಲಿಕ ಕೆಲಸಗಾರರನ್ನು ಖಾಯಂಗೊಳಿಸುವುದು.
> ಬ್ಯಾಂಕಿಂಗ್ ಉದ್ಯಮದಲ್ಲಿ 5 ದಿನಗಳ ಕೆಲಸದ ವಾರವನ್ನು ಜಾರಿಗೆ ತರುವುದು.
• ಪಿಎಲ್ಐ ಮೇಲಿನ ಡಿಎಫ್ಎಸ್ ನಿರ್ದೇಶನವನ್ನು ಹಿಂಪಡೆಯುವುದು. ಯಾಕೆಂದರೆ ಇದು ಸಾರ್ವಜನಿಕ ಬ್ಯಾಂಕುಗಳ ಕೆಲಸದ ಭದ್ರತೆಯನ್ನು ಕಸಿಯುವುದರೊಂದಿಗೆ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳನ್ನು ವಿಭಜಿಸುವ ಪ್ರಯತ್ನವನ್ನು ಮಾಡುವುದರ ಜೊತೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳ ಸ್ನಾಯತ್ತತೆಯನ್ನು ಹಾನಿ ಮಾಡುತ್ತಿದೆ. ಇದು 8ನೇ ಜಂಟಿ ಹಸ್ತಾಕ್ಷರದ ಒಡಂಬಡಿಕೆಗೆ ವಿರೋಧವಾಗಿದೆ.
> ಅನಾಗರಿಕ/ಅಸಭ್ಯ ಗ್ರಾಹಕರಿಂದ ಬ್ಯಾಂಕಿನ ಅಧಿಕಾರಿಗಳಿಗೆ/ ಕೆಲಸಗಾರರಿಗೆ ಆಗುವ ಅಕ್ರಮಣಗಳಿಂದ ರಕ್ಷಣೆ.
> ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಖಾಲಿ ಇರುವ ನೌಕರ/ ಅಧಿಕಾರಿ ನಿರ್ದೇಶಕರ ಹುದ್ದೆಯನ್ನು ಭರ್ತಿ ಮಾಡುವುದು.
> ಐಬಿಎಯೊಂದಿಗೆ ಬಾಕಿ ಇರುವ ಸಮಸ್ಯೆಗಳ ಪರಿಹಾರ.
> ನಮ್ಮ ಗ್ರಾಚುಟಿ ಮಿತಿಯನ್ನು ರೂಪಾಯಿ 25 ಲಕ್ಷಗಳಿಗೆ ಹೆಚ್ಚಿಸಿ ಮತ್ತು ಅದನ್ನು ಈಗ ಸರ್ಕಾರಿ ನೌಕರರಿಗೆ ಸಮಾನವಾಗಿ ತೆರಿಗೆ ಮುಕ್ತಗೊಳಿಸಿ.
> ಸಿಬ್ಬಂದಿಗಳ ಸವಲತ್ತಿನ ಮೇಲಿನ ನ್ಯಾಯಯುತವಲ್ಲದ ತೆರಿಗೆಯನ್ನು ನಿಲ್ಲಿಸಿ ರಿಯಾಯಿತಿ ಪ್ರಯೋಜನಗಳ ಮೇಲೆ ಆದಾಯ ತೆರಿಗೆ ವಸೂಲಾತಿ ಬೇಡ. ಆಡಳಿತ ವರ್ಗ ಈ ವೆಚ್ಚವನ್ನು ಭರಿಸಲಿ.
> ಐಡಿಬಿಐ ಬ್ಯಾಂಕಿನಲ್ಲಿ 51% ಸರ್ಕಾರಿ ಬಂಡವಾಳವನ್ನು ಉಳಿಸಿ. ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿ
ಸಿಬ್ಬಂದಿಯ ಕೊರತೆಯಿಂದಾಗಿರುವ ಸೇವಾ ಅವ್ಯವಸ್ಥೆ : ತೀವ್ರವಾಗಿರುವ ಬ್ಯಾಂಕ್ ಸಿಬ್ಬಂದಿಯ
ಕೊರತೆಯಿಂದಾಗಿ ಗ್ರಾಹಕರಿಗೆ ಸಲ್ಲಬೇಕಾದ ತೃಪ್ತಿದಾಯಕ ಸೇವೆಯನ್ನು ಬ್ಯಾಂಕ್ ಸಿಬ್ಬಂದಿ ನೀಡಲಾರದಾಗಿದ್ದಾರೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಮೂಲಕ ಸರ್ಕಾರ ತನ್ನ ಎಲ್ಲಾ ಜನ ಹಿತಾಸಕ್ತಿ ಮುಗಳನ್ನು ಪ್ರಚುರಪಡಿಸುತ್ತದೆ. ಅವುಗಳನ್ನು ಜನರಿಗೆ ತಲುಪಿಸಲು ಬ್ಯಾಂಕ ಸಿಬ್ಬಂದಿಗಳು ತಮ್ಮ ಕಾರ್ಯಕ್ಷೇತ್ರದ ಬಾಹುಳ್ಯದಿಂದ ಹೊರ ಹೋಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅದಕ್ಕೆ ಅದಕ್ಕೆ ಸಮನಾದ ಸಿಬ್ಬಂದಿಗಳಿಲ್ಲದೆ ಇರುವವರ ಮೇಲಿನಕೆಲಸದ ಹೊರೆ ಅಗಾಧವಾಗಿ ಬೆಳೆದಿದೆ..
ಹೀಗಾಗಿ ಬ್ಯಾಂಕುಗಳಲ್ಲಿ ಹೊಸ ನೇಮಕಾತಿಗಳನ್ನು ಮಾಡುವುದರೊಂದಿಗೆ ಈಗ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಮೇಲಿನ ಈ ಅಗಾಧವಾದ ಒತ್ತಡವನ್ನು ಕಡಿಮೆ ಮಾಡಬೇಕು.
5 ದಿನಗಳ ಕೆಲಸದ ವಾರ: ಇಡೀ ವಾಣಿಜ್ಯ ಕ್ಷೇತ್ರದಲ್ಲಿ ಆರ್ ಬಿ ಐ ಯನ್ನು ಸೇರಿ ಐದು ದಿನಗಳ ಕೆಲಸದ
ವಾರ ಜಾರಿಯಲ್ಲಿದೆ. ಎಲ್ಐಸಿ ನಲ್ಲೂ ಇದು ಜಾರಿಯಿದೆ. ಕೆಲ ಪ್ರೈವೇಟ್ ಸೆಕ್ಟರ್ಗಳಲ್ಲಿ ಹಾಗೂ ಐಟಿಐ ಸೆಕ್ಟರ್ ನಲ್ಲಿ ಕೂಡ ಐದು ದಿನಗಳ ಕೆಲಸದ ವಾರ ಜಾರಿಯಲ್ಲಿದೆ. ಐಬಿಎ ನಮ್ಮ ಒಡಂಬಡಿಕೆಯಲ್ಲಿ ನಮ್ಮ ಈ ಬೇಡಿಕೆಯನ್ನು ಸ್ವೀಕರಿಸಿ ಸರಕಾರಿ ಸಲ್ಲಿಸಿದ್ದು ಆಗಿದೆ ಆದರೆ ಸರಕಾರದಿಂದ ಆದೇಶ ಇದುವರೆಗೆ ಬಂದಿಲ್ಲ ಅದಕ್ಕಾಗಿ ನಾವೆಲ್ಲ ಸೇರಿ ಐದು ದಿನಗಳ ಕೆಲಸದ ವಾರಕ್ಕಾಗಿ ಒತ್ತಾಯಿಸುತ್ತೇವೆ.
ನಮ್ಮ ಇತರೆ ಬೇಡಿಕೆಗಳು:
ಪಿಎಲ್ಐ ಮೇಲಿನ ಡಿಎಫ್ಎಸ್ ನಿರ್ದೇಶನವನ್ನು ಹಿಂಪಡೆಯುವುದು.
ಬ್ಯಾಂಕಿನ ಕೆಲಸಗಳಲ್ಲಿ ಡಿಎಫ್ಎಸ್ ಮೂಗು ತೂರಿಸುವ ಪ್ರಯತ್ನವನ್ನು ನಿಲ್ಲಿಸಬೇಕು. ಸಾರ್ವಜನಿಕ ಬ್ಯಾಂಕುಗಳ ಸ್ನಾಯುಕ್ತತೆಯನ್ನು ಗೌರವಿಸಬೇಕು.
ಬ್ಯಾಂಕಿನ ಕಾಯಂ ಕೆಲಸಗಳನ್ನು ಹೊರಗುತ್ತಿಗೆ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು. ನೌಕರರನ್ನು ಮತ್ತು ಅಧಿಕಾರಿಗಳನ್ನು ಶೋಷಿಸುವ ಅನ್ಯಾಯದ ಕಾರ್ಮಿಕ ಪದ್ಧತಿಗಳನ್ನು ನಿಲ್ಲಿಸಬೇಕು.
ಈ ನಮ್ಮ ಬೇಡಿಕೆಗಳಿಗಾಗಿ ಮತ್ತು ಅವುಗಳ ಶೀಘ್ರ ಅನುಷ್ಠಾನಕ್ಕಾಗಿ UFBU, 23 ಮಾರ್ಚ 2025 ರ ಮಧ್ಯರಾತ್ರಿಯಿಂದ 25 ಮಾರ್ಚ್ 2025 ರ ಮಧ್ಯರಾತ್ರಿಯವರೆಗೆ ಎರಡು ದಿನಗಳ ಮುಷ್ಕರವನ್ನು ಘೋಷಿಸಿದೆ.
ಸರ್ಕಾರವಾಗಲಿ ಅಥವಾ ನಿರ್ವಾಹಕ ಮಂಡಳಿ ಆಗಲಿ ಈ ಬಗ್ಗೆ ನಮ್ಮೊಂದಿಗೆ ಯಾವುದೇ ರೀತಿಯ ವ್ಯವಹಾರಕ್ಕೆ ಮುಂದಾಗದೆ ಇರುವುದರಿಂದ ಈ ರೀತಿಯ ಮುಷ್ಕರ ಅನಿವಾರ್ಯವಾಗಿದೆ. ಇದರಿಂದ ಆಗುವ ಯಾವುದೇ ತೊಂದರೆಗಳಿಂದ ಸಾರ್ವಜನಿಕರು ಬೇಸರಗೊಳ್ಳದೆ ನಮಗೆ ಸಹಾಯ ಮಾಡಬೇಕೆಂದು ಈ ಮೂಲಕ ಕಳಕಳಿಯ ಕೋರಿಕೆ.