ಬೆಂಗಳೂರು, ಮಾರ್ಚ್ 13, 2025
ಐ.ಪಿ.ಡಿ ಸಾಲಪ್ಪ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಕರ್ನಾಟಕ ರಾಜ್ಯ ಪೌರಕಾರ್ಮಿಕ ಮತ್ತು ಸಫಾಯಿ ಕರ್ಮಚಾರಿ ವರ್ಕರ್ಸ್ ಯೂನಿಯನ್' ನಿಂದ ಬೃಹತ್ ಪ್ರತಿಭಟನೆ ನಡೆಯಿತು.
ರಾಜ್ಯ ಸರ್ಕಾರವು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಯ ಟಿಪ್ಪರ್/ಕಾಂಪ್ಯಾಕ್ಟರ್, ಚಾಲಕ, ಸಹಾಯಕ, ಲೋಡರ್ಸಗಳು ಐ.ಪಿ.ಡಿ ಸಾಲಪ್ಪ ವರದಿಯ ಸರ್ಕಾರಿ ಸುತ್ತೋಲೆ ಅಂಶ 06 ಅನೂರ BSWMC ಸಂಸ್ಥೆಯಲ್ಲಿ ಖಾಯಂ ಕಾರ್ಮಿಕರಾಗಿ ವಿಲೀನ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲು ಧರಣಿ ಹಮ್ಮಿಕೊಂಡಿದ್ದರು.
ಈ ಮೂಲಕ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸನ್ನಿಧಾನಕ್ಕೆ ತಮ್ಮ ಮಾಧ್ಯಮದಲ್ಲಿ ಪ್ರಕಟಿಸುವಂತೆ ಕೋರಿ ಪತ್ರಿಕಾ ಹೇಳಿಕೆ ನೀಡುವುದೇನೆಂದರೆ,
ಆತ್ಮೀಯರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 29 ಲಕ್ಷ ಕಟ್ಟಡಗಳಿಂದ ಅನೈರ್ಮಲ್ಯ ಸ್ವಚ್ಚ ಮಾಡುವ, ಮನೆ ಮನೆಯಿಂದ ಕಸ ಸ್ವೀಕರಿಸಿ ಸಾಗಿಸುವ, ಚಾಕ, ಸಹಾಯಕ, ಲೋಡರ್‌ಗಳ, ಕಳೆದ 30 ವರ್ಷಗಳಿಂದ ಗುತ್ತಿಗೆದಾರರಿಂದ ಶೋಷಣೆಗೆ ಗುರಿಯಾಗಿ, ಕನಿಷ್ಟ ವೇತನಕ್ಕೆ ವಂಚಿತರಾಗಿದ್ದಾರೆ. ರಾಜ್ಯದಲ್ಲಿ ಪೌರಕಾರ್ಮಿಕರ ಸ್ವಚ್ಚತಾ ವೃತ್ತಿ ಗುತ್ತಿಗೆ ಪದ್ಧತಿಗೆ ನೀಡುವುದು ರದ್ದಾಗಿದೆ. ಆದರೂ ಈ ಚಾಲಕ, ಸಹಾಯಕ, ಲೋಡರ್ಸ್ ಗಳನ್ನು ಇನ್ನೂ ಗುತ್ತಿಗೆಯಲ್ಲಿ ಮುಂದುವಸುತ್ತಾ ಸಂವಿಸಧಾನ ಆಶಯಗಳ ಸವಲತ್ತುಗಳಿಂದ ವಂಚಿಸುತ್ತಿದ್ದಾರೆ.
ಇವರ ಸಮಗ್ರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಐ.ಪಿ.ಡಿ ಸಾಲಪ್ಪ ವರದಿಯ ಸರ್ಕಾರಿ ಸುತ್ತೋಲೆ ಅಂಶಗಳ ಅನುಸಾರ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.