ಬೆಂಗಳೂರು, ಮಾರ್ಚ್ 9, 2025
ಬೆಂಗಳೂರಿನ ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ ಡಾ. ಸಿದ್ದರಾಮ ಬೆಲ್ಲಾಳ ಶರಣರು ರಚಿಸಿದ "ಸತ್ಯ ಶರಣರು ಸತ್ಯ ಶೋಧ" ಸಂಶೋಧನ ಗ್ರಂಥ ಲೋಕಾರ್ಪಣೆಯಾಯಿತು.
ಬಸವ ಸಮಿತಿ ಬೆಂಗಳೂರು ಹಾಗೂ ಬಸವ ಮಹಾಮನೆ ಟ್ರಸ್ಟ್ ಬಸವಕಲ್ಯಾಣ ಇವರ ಸಂಯುಕ್ತಾಶ್ರಯದಲ್ಲಿ "ಸತ್ಯ ಶರಣರು ಸತ್ಯ ಶೋಧ" ಸಂಶೋಧನ ಗ್ರಂಥ ಬಿಡುಗಡೆಯಾಯಿತು.
ಈ ಸಂಶೋಧನಾ ಗ್ರಂಥದ ಮುಖೇನ ಸತ್ಯ ತಿಳಿಯುವ ಕೆಲಸ ಮಾಡಿದ್ದೇನೆ ಎಂದು ಡಾ. ಸಿದ್ದರಾಮ ಬೆಲ್ಲಾಳ ಶರಣರು ತಿಳಿಸಿದರು.
'ಮೈಸೂರಿನ ಕುಂದೂರು ಮಠದ ಡಾ. ಶರಶ್ಚಂದ್ರ ಮಹಾಸ್ವಾಮಿಗಳು ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶಿವರಾಜ ಪಾಟೀಲ ಅವರು ಸತ್ಯ ಶರಣರು ಸತ್ಯ ಶೋಧ' ಸಂಶೋಧನ ಗ್ರಂಥವನ್ನು ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವರರಾದ ಡಾ. ಎಚ್.ಸಿ. ಮಹಾದೇವಪ್ಪ, ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಅವರು ಉಪಸ್ಥಿತರಿದ್ದರು.