ಫೆಬ್ರವರಿ 5, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ SC/ST ವಕೀಲರ ಸಂಘ (R)' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

  ಬೆಂಗಳೂರು ವಕೀಲರ ಸಂಘದ 2025-2028 ನೇ ಸಾಲಿನ ಚುನಾವಣೆಯಲ್ಲಿ ಸ್ಪರ್ಧಿಸಲು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸದಸ್ಯರಿಗೆ ಶೇಕಡಾ 18% ರಂತೆ ಮೀಸಲಾತಿ ನೀಡಬೇಕೆಂದು ಒತ್ತಾಯ 

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಕೀಲರ ಸಂಘ (ರಿ) ರವರು ಬರೆದುಕೊಂಡ ಮನವಿ ಪತ್ರವೇನೆಂದರೆ,

ಬೆಂಗಳೂರು ವಕೀಲರ ಸಂಘದ ಪ್ರಸ್ತುತ 2025-2028 ನೇ ಸಾಲಿನ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸದಸ್ಯರು 2025-2028 ನೇ ಸಾಲಿನ ಚುನಾವಣೆಯಲ್ಲಿ ಸ್ಪರ್ದಿಸಲು ಶೇಕಡಾ 18% ರ ಅನ್ವಯ ಮೀಸಲಾತಿಯನ್ನು ನಿಗಧಿಪಡಿಸಿ, ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎಲ್ಲಾ ಸಂಘ ಸಂಸ್ಥೆಗಲ್ಲಿ ಮೀಸಲಾತಿ ಕಲ್ಪಿಸಿರುವಂತೆ ಏಷ್ಯಾ ಖಂಡದ ಮೊದಲ ಸ್ಥಾನದಲ್ಲಿರತಕ್ಕಂತಹ ನಮ್ಮ ಬೆಂಗಳೂರು ವಕೀಲರ ಸಂಘದಲ್ಲಿ ಸುಮಾರು 28,000 ವಕೀಲ ಸದಸ್ಯರಿರುವ ಸಂಘದಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸುಮಾರು 8,000 ಕ್ಕೂ ಅಧಿಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸದಸ್ಯರುಗಳಿಗೆ ಶೇಕಡಾ. 18% 03 ಮೀಸಲಾತಿಯನ್ನು ನೀಡುವುದರ ಮುಖಾಂತರ ಚುನಾವಣೆ ಪ್ರಕ್ರಿಯೆಯಲ್ಲಿ ಸಾಮಾಜಿಕ ನ್ಯಾಯವನ್ನು ಒದಗಿಸುತ್ತಾ, ಮುಂದುವರೆಸಬೇಕಾಗಿ, ಮುಖ್ಯವಾಗಿ ಬೆಂಗಳೂರು ವಕೀಲರ ಸಂಘದ ಮಹಿಳಾ ಸದಸ್ಯರಿಗೆ ಶೇಕಡಾ 30% ರಂತೆ ಮೀಸಲಾತಿ ನೀಡುವಂತೆ ಭಾರತದ ಸರ್ವೋಚ್ಚ ನ್ಯಾಯಾಲಯ ಪ್ರಕರಣ ಸಂಖ್ಯೆ: ಎಸ್.ಎಲ್.ಪಿ(ಸಿ) 1404/2025 ರಂತೆ ಆದೇಶ ನೀಡಿದ್ದರ ಅನ್ವಯ ಬೆಂಗಳೂರು ವಕೀಲರ ಸಂಘವು ಚುನಾವಣಾ ಪ್ರಕ್ರಿಯೆನ್ನು ಮುಂದುವರೆಸುತ್ತಿದ್ದು, ಅದರಂತೆ ಸಂಘದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಕೀಲ ಸದಸ್ಯರ ಮೀಸಲಾತಿ ನೀಡಿ ಸುಗಮವಾಗಿ ಸಂಘದ ಚುನಾವಣಾ ಪ್ರಕ್ರಿಯೆಗೆ ಅನುವು ಮಾಡಿಕೊಡತಕ್ಕದ್ದು.

ಆದ್ದರಿಂದ ತಾವಂದಿರು, ದಯವಿಟ್ಟು ತಮ್ಮ ಹಾಲಿ ಹೈಪವರ್ ಕಮೀಟಿ/ಸಂಘದ ಪದಾಧಿಕಾರಿಗಳು / ಮಾಜಿ ಪದಾಧಿಕಾರಿಗಳು ಸದಸ್ಯರುಗಳೆಲ್ಲಾ ಈ ಕೂಡಲೇ ತುರ್ತಾಗಿ ಚುನಾವಣೆಗೆ ಮುಂಚಿತವಾಗಿ ತುರ್ತು ವಿಶೇಷ ಸಭೆಯನ್ನು ಕರೆದುಮೇಲ್ಕಂಡ ವಿಷಯದ ಬಗ್ಗೆ ಸಂಪೂರ್ಣವಾಗಿ ಚರ್ಚಿಸಿ2025-2028 ನೇ ಸಾಲಿನ ಚುನಾವಣೆಯಲ್ಲಿ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ನೀಡಿ ಸಂಘದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಕೀಲ ಸದಸ್ಯರುಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಡುವಂತೆ ತಮ್ಮಲ್ಲಿ ಕಳಕಳಿಯ ಮನವಿ.