ಫೆಬ್ರವರಿ 3, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ಕರ್ನಾಟಕ ರಾಜ್ಯ ಖೋ ಖೋ ಅಸೋಸಿಯೇಷನ್' ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಲೋಕೇಶ್ವರ ಅವರು ಮಾತನಾಡಿದರು.
'ಕರ್ನಾಟಕ ಒಲಂಪಿಕ್ ಅಸೋಸಿಯೇಷನ್'ನ ಗೋವಿಂದರಾಜ್ ಅವರ ಸರ್ವಾಧಿಕಾರ ಧೋರಣೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಲೋಕೇಶ್ವರ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯ ಸಮಸ್ಯೆಗಳ ಬಗ್ಗೆ ಹಾಗೂ ರಾಜ್ಯ ಕ್ರೀಡಾನೀತಿ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೆಷನ್ ಸರ್ವಾಧಿಕಾರ ಧೋರಣೆಯಿಂದ ಕರ್ನಾಟಕ ಕ್ರೀಡೆಯು ನಾಶವಾಗಿರುವ ಬಗ್ಗೆ ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತಿದ್ದೇವೆ.
ಕಳೆದ 75 ವರ್ಷಗಳಿಂದ ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯು ತಮ್ಮ ಕರ್ತವ್ಯವನ್ನು ಅಧಿಕೃತವಾಗಿ ಮಾಡಿಕೊಂಡಿರುವುದು ಸರಿಯಷ್ಟೆ ಕಳೆದ 40 ವರ್ಷಗಳಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಮೊದಲ 3 ಸ್ಥಾನಗಳಲ್ಲಿ ನಮ್ಮ ರಾಜ್ಯದ ಸ್ಥಾನವನ್ನು ಉಳಿಸಿಕೊಂಡುಬಂದಿರುವುದು ಅಷ್ಟೇ ಸತ್ಯ. ಎರಡು ಬಾರಿ ಅರ್ಜುನ ಪ್ರಶಸ್ತಿ, ಹತ್ತಾರು ಬಾರಿ ರಾಷ್ಟ್ರಮಟ್ಟದ ಏಕಲವ್ಯ, ಝಾನ್ಸಿರಾಣಿ ವೀರಅಭಿಮನ್ಯು, ಜಾನಕಿ ಭರತ ಮತ್ತು ಇಳಾ ಪ್ರಶಸ್ತಿಗಳನ್ನು ನಮ್ಮ ರಾಜ್ಯದ ಆಟಗಾರರು ಪಡೆದು ರಾಜ್ಯದ ಕೀರ್ತಿಪತಾಕೆಯನ್ನು ಹಾರಿಸಿರುತ್ತಾರೆ. ಕಳೆದವಾರವಷ್ಟೇ ವಿಶ್ವಮಟ್ಟದ ಪಂದ್ಯಾವಳಿಯಲ್ಲಿ ಮಹಿಳಾ ಮತ್ತು ಪುರುಷರ ತಂಡದಲ್ಲಿ ಭಾರತ ದೇಶವು ಗೆದಿದ್ದು, ಆ ತಂಡಗಳಲ್ಲಿ ನಮ್ಮರಾಜ್ಯದ ಕುಮಾರಿ. ಚೈತ್ರ ಮತ್ತು ಗೌತಮ್ ಎಂಬ ಆಟಗಾರರು ಭಾಗವಹಿಸಿದ್ದು ಪ್ರಶಂಸನೆಗೆ ಒಳಾಗಾಗಿದ್ದು ಎಲ್ಲರಿಗೊಗೊತ್ತಿರುವ ವಿಚಾರ ಈ ವಿಶ್ವಸ್ಪರ್ಧೆಯಲ್ಲಿ ಗೆದ್ದ ನಮ್ಮ ಆಟಗಾರರಿಗೆ ನಮ್ಮ ರಾಜ್ಯ ಸರ್ಕಾರ ತಮ್ಮ ಕಳಪೆ ಕ್ರೀಡಾ ನೀತಿಯಿಂದ ಸರಿಯಾಗಿ ಗೌರವಿಸದೆ ಅವಮಾನ ಮಾಡಿದ್ದು, ಆಟಗಾರರಿಗೆ. ದೇಶದ ಕ್ರೀಡಾಭಿಮಾನಿಗಳಿಗೆ ನೋವಾಗಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಆ ಬಹುಮಾನದ ಹಣವನ್ನು ನಮ್ಮ ರಾಜ್ಯದ ಆಟಗಾರರು ಮತ್ತು ರಾಜ್ಯ ಸಂಸ್ಥೆಯು ತಿರಸ್ಕರಿಸಿದ್ದಾರೆ. ಅದನ್ನು ಸರಿಪಡಿಸಬೇಕಂತ 10 ದಿನಗಳಿಗೂ ಹೆಚ್ಚು ದಿನ ಕಾಲಾವಕಾಶವನ್ನು ನಾವು ಸರ್ಕಾರಕ್ಕೆ ನೀಡಿದ್ದೆವು. ಈ ಬಗ್ಗೆ ಮುಖ್ಯಮಂತ್ರಿಗಳುಸಹ ಸರಿಪಡಿಸುತ್ತೇನೆ ಅಂತ ಪತ್ರಿಕಾ ವರದಿಗಾರರಿಗೆ ತಿಳಿಸಿದ್ದರು. ಆದರೆ ಯಾವುದೇ ಸರಿಪಡಿಸುವ ಕೆಲಸ ಮಾಡಿರುವುದಿಲ್ಲ. ಇದಲ್ಲದೆ ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯು ರಾಷ್ಟ್ರೀಯ ಖೋ-ಖೋ ಫೆಡರೇಶನ್ಗೆ ಅಧಿಕೃತ ನೊಂದಣಿ ಆಗಿರುವಂತಹ ಸಂಸ್ಥೆ.ಇದಲ್ಲದೆ ನಮ್ಮ ಕರ್ನಾಟಕ ರಾಜ್ಯ ಸಂಸ್ಥೆಯು ಕರ್ನಾಟಕ ಒಲಂಪಿಕ್ ಸಂಸ್ಥೆಯ ಸಂಸ್ಥಾಪಕ ಸದಸ್ಯರಾಗಿದ್ದು ನಿಜ. ಕಳೆದ ಎಂಟು ವರ್ಷಗಳಿಂದ ನಮ್ಮ ಸಂಸ್ಥೆಗೆ ಯಾವುದೇ ನೋಟಿಸ್ ನೀಡದೆ ನಮ್ಮನ್ನು ನೋಂದಣಿ ಮಾಡಿಕೊಳ್ಳದೆ ಬೇರೆ ಒಂದು ನಕಲಿ ಸಂಸ್ಥೆಯನ್ನು ನೋಂದಣಿ ಮಾಡಿಕೊಂಡು ನಡೆಸುತ್ತಿರುವುದು ಸಹ ನಿಜ. ಹಾಗೂ 2014 ರಿಂದ 2025 ವರೆಗೆ ನಮ್ಮ ಸಂಸ್ಥೆಯ ಕ್ರೀಡಾ ಚಟುವಟಿಕೆ ನಡೆಸಲು ಕೊಡಬೇಕಾಗಿದ್ದ ಸರ್ಕಾರದ ಅನುದಾನವನ್ನು ಸಹ ನೀಡಿರುವುದಿಲ್ಲ. ಪ್ರತಿವರ್ಷ ನಮ್ಮ ರಾಜ್ಯದ ಕ್ರೀಡಾಪಟುಗಳನ್ನು ಸೀನಿಯರ್. ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗಗಳಲ್ಲಿ ಆಯ್ಕೆ ಮಾಡಿ ತರಬೇತಿ ನೀಡಿ ರಾಷ್ಟ್ರದ ವಿವಿಧ ಮಟ್ಟದ ಭಾಗಗಳಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವರಿಗೆ ಸಂಚಾರಭತ್ಯೆ ಅಹಾರ ಭತ್ಯೆ