ಡಿಸೆಂಬರ್ 27, 2024 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ವಿ.ಎಸ್.ಎಸ್. ಅಭಿಮಾನ್ ಡಾ|| ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ (ರಿ) ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಬಿ.ತಿಮ್ಮರಾಜು (ರಾಜುಗೌಡ) ಅವರು ಮಾತನಾಡಿದರು. 

ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಡಿಸೆಂಬರ್ 30 ರಂದು ನಟ ಡಾ|| ವಿಷ್ಣುವರ್ಧನ್ ರವರ 15ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದೆ ಎಂದು ಬಿ.ತಿಮ್ಮರಾಜು (ರಾಜುಗೌಡ) ಅವರು ತಿಳಿಸಿದರು. 

1. ದಿನಾಂಕ: 30-12-2024 ರಂದು ಅಭಿಮಾನ್ ಸ್ಟುಡಿಯೋದಲ್ಲಿರುವ ಡಾ| ವಿಷ್ಣುವರ್ಧನ್ ರವರ 15ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು 10 ಗುಂಟೆ ಜಾಗದಲ್ಲಿ ಪೂಜಾ ಕಾರ್ಯಕ್ರಮ ಮಂದಿರಕ್ಕೆ ಹಾಗೂ ಅನ್ನದಾನ ಮತ್ತು ರಕ್ತದಾನ ಶಿಭಿರ ಆಯೋಜಿಸಿದ್ದೇವೆ:

2. ಅಭಿಮಾನ್ ಸ್ಟುಡಿಯೋ ಮಾಲೀಕರು ಅಕ್ರಮ ಭೂ ಕಬಳಿಕೆಯ ಚಟುವಟಿಕೆಗಳಿಂದ ಮತ್ತು ಜೀವ ಬೆದರಿಕೆಯಿಂದ ರಕ್ಷಣೆ ಕೋರಿ ಹಲವು ಸಂಘಟನೆಗಳ ಮೇಲೆ ಕೆಂಗೇರಿ ಪೋಲೀಸ್ ಠಾಣೆಯಲ್ಲಿ ದಿನಾಂಕ: 28-08- 2024ರಂದು ದೂರು ಕೊಟ್ಟಿರುತ್ತಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಾಂಕ: 17-09-2024ರಂದು ಸಿಟಿ ಸಿವಿಲ್ ಅಂಟ್ ಸೆಷನ್ ಜಡ್ಜ್ ಬೆಂಗಳೂರು (2.3. 12) 4.2 2.6544/20240 ಕೋರ್ಟ್ ನಿಂದ ಡಾ || ವಿಷ್ಣುವರ್ಧನ್ ರವರ ಸಮಾಧಿ ಜಾಗ ಪುಣ್ಯ ಭೂಮಿಗೆ ಪ್ರವೇಶ ನಿರ್ಬಂಧ ತಡೆಯಾಜ್ಞೆಯನ್ನು ತಂದಿರುತ್ತಾರೆ. ದಿನಾಂಕ:18-09-2024ರಂದು ಡಾ| ವಿಷ್ಣು ವರ್ಧನ್ ರವರ 74ನೇ ಜನ್ಮದಿನೋತ್ಸವ ಕಾರ್ಯಕ್ರಮ ಇರುತ್ತದೆ ಈ ಮೇಲ್ಕಂಡ ಟ್ರಸ್ಟ್ ವತಿಯಿಂದ ಆಯೋಜಿಸಿದ್ದೇವು

3. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಟಿ ಸಿವಿಲ್ ಅಂಟ್ ಸೆಷನ್ ಜಡ್ಜ್ ಬೆಂಗಳೂರು (ಸಿಸಿಹೆಚ್ 12) ಓ.ಎಸ್ ನಂ.6544/2024ರ ಕೋರ್ಟ್‌ಗೆ ವಿ.ಎಸ್.ಎಸ್ ವಿಷ್ಣು ಸೇನಾ ಸಂಘಟನೆ ಹಾಗೂ ವಿ.ಎಸ್.ಎಸ್. ಅಭಿಮಾನ್ ಡಾ ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಡಾ॥ ವಿಷ್ಣು ವರ್ಧನ್ ರವರ ಸಮಾಧಿ ಜಾಗ 0.10ಗುಂಟೆ ಜಾಗದ ಬಗ್ಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು 2017ರಿಂದ 2024ರ ವರೆಗೆ ಕೋರ್ಟ್‌ಗೆ ಸಲ್ಲಿಸಿರುತ್ತೇವೆ. ಮತ್ತು ಡಾ- ವಿಷ್ಣುವರ್ಧನ್ ರವರ ಹುಟ್ಟು ಹಬ್ಬ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮದ ಆಯೋಜಿಸಿದ ದಾಖಲೆಗಳನ್ನು ಸಲ್ಲಿಸಿರುತ್ತೇವೆ ಹಾಗೂ ಡಿಸೆಂಬರ್ 30 2024 15ನೇ ಪುಣ್ಯ ಸ್ಮರಣೆಯ ಕಾರ್ಯಕ್ರಮದ ಜಿಲ್ಲಾಧಿಕಾರಿಗಳ ಆದೇಶ ಪ್ರತಿ ಹಾಗೂ ಬಿ.ಬಿ.ಎಂ.ಪಿ ಅನುಮತಿ ಪತ್ರವನ್ನು ಸಲ್ಲಿಸಿರುತ್ತೇವೆ. ಘನ ನ್ಯಾಯಾಲಯದಲ್ಲಿ ವಾದ ಪ್ರತಿವಾದಗಳು ಆಲಿಸಿದ ನ್ಯಾಯಾಧೀಶರು ಮೇಲ್ಕಂಡ ಪ್ರಕರಣದ ನಿರ್ಬಂಧ ತಡೆಯಾಜ್ಞೆಯನ್ನು ವಜಾಮಾಡಿರುತ್ತಾರೆ. ಸಿಟಿ ಸಿವಿಲ್ ಅಂಟ್ ಸೆಷನ್ ಜಡ್ಜ್ ಬೆಂಗಳೂರು (ಸಿಸಿಹೆಚ್ 12) ಓ.ಎಸ್ ನಂ.6544/2024ರ ದಿನಾಂಕ: 19- 12-2024ರ ತೀರ್ಪಿ ಹೊರಡಿಸಿ ಆದೇಶ ಮಾಡಿದ್ದು ಈ ಪ್ರಕರಣದ ಮುಂದುವರೆದ ಭಾಗವಾಗಿ ವಿಚಾರಣೆಯನ್ನು ದಿನಾಂಕ: 04-02-2025ಕ್ಕೆ ಮುಂದೂಡಿರುತ್ತಾರೆ.