ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನೆಲಮಂಗಲ ತಾಲೂಕಿನ ಕಲಲಾಘಟ್ಟ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಗಿರೀಶ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಕಲಲಾಘಟ್ಟ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರಾದ ಸೌಮ್ಯ ಅವರ ಪತಿ ಆಂಜಿನಮೂರ್ತಿ ಅವರು ಅಧ್ಯಕ್ಷರಂತೆ ಅಧಿಕಾರ ಚಲಾಯಿಸುತ್ತಿದ್ದಾರೆ. ಅನೇಕ ಯೋಜನೆಗಳಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಗಿರೀಶ್ ಅವರು ಆರೋಪಿಸಿದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಗೀತಾ ಅವರು ಸಹ ಆಂಜಿನಮೂರ್ತಿಅವರಿಗೆ ಸಹಕಾರ ನೀಡುತ್ತಿದ್ದಾರೆ. PDO ಸಹ ನಮ್ಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಗಿರೀಶ್ ಅವರು ಆರೋಪಿಸಿದರು.
ಹೀಗಾಗಿ ಕಲಲಾಘಟ್ಟ ಗ್ರಾಮ ಪಂಚಾಯತಿಯು ಅವ್ಯವಹಾರಗಳ ಆಗರವಾಗಿದೆ ಎಂದು ಗಿರೀಶ್ ಅವರು ಅಯೋಪಿಸಿದರು. ಹಾಗಾಗಿ ರಾಜ್ಯ ಸರ್ಕಾರವು ಕಲಲಾಘಟ್ಟ ಗ್ರಾಮ ಪಂಚಾಯತಿಯು ಅವ್ಯವಹಾರಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಅಗ್ರಹಿಸಿದರು.