ನವೆಂಬರ್ 7, 2024

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು 'ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ'ಯ ನೇತೃತ್ವದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ತಮಟೆ ಚಳವಳಿ

ನಡೆಯಿತು. 

'ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ'ಯ ರಾಷ್ಟೀಯ ಅಧ್ಯಕ್ಷರಾದ ಬಿ. ಆರ್. ಮುನಿರಾಜ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. 

ಬೆಂಗಳೂರಿನ ಬೆನ್ನಿಗಾನಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ನಾರಾಯಣಸ್ವಾಮಿ ಎಂಬುವರ ಜಮೀನು ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಬಿ. ಆರ್. ಮುನಿರಾಜ ಅವರು ಆರೋಪಿಸಿದರು. ಈ ಸಂಬಂಧ ಕೆಲವು ಕಿಡಿಗೇಡಿಗಳು ಹಾಗೂ ಮಹಾದೇವಪುರ ಠಾಣೆಯ ಕೆಲವು ಪೊಲೀಸರ ಮೂಲಕ ದೊಡ್ಡ ಮೊತ್ತದ ಹಣ ಪಡೆದಿದ್ದಾರೆ ಎಂದು ಬಿ. ಆರ್. ಮುನಿರಾಜ ಅವರು ಆರೋಪಿಸಿದರು.

 ಈ ಸಂಬಂಧ ದಲಿತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಮಹಾದೇವಪುರ ಠಾಣೆಯ ಕೆಲವು ಪೊಲೀಸರನ್ನು ಅಮಾನತು ಮಾಡಬೇಕೆಂದು ಬಿ. ಆರ್. ಮುನಿರಾಜ ಅವರು ಒತ್ತಾಯಿಸಿದರು. 

 ಜತೆಗೆ ದಲಿತರ ಹಾಗೂ ಕೆಲವು ಪತ್ರಕರ್ತರ ಮೇಲೆ ಹಲ್ಲೆ ನಡೆಸಲು ಆದೇಶ ಹೊರಡಿಸಿರುವ ಸಹಾಯಕ ಆಯುಕ್ತರನ್ನು ವರ್ಗಾವಣೆ ಮಾಡಬೇಕೆಂದು ಬಿ. ಆರ್. ಮುನಿರಾಜ ಅವರು ಒತ್ತಾಯಿಸಿದರು.