ಅಕ್ಟೋಬರ್ 26, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ "ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ"ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

  ಈ ಪತ್ರಿಕಾಗೋಷ್ಠಿಯಲ್ಲಿ ಭೀಮರಾವ್ ಪವಾರ ಅವರು ಮಾತನಾಡಿದರು. 

  ಕರ್ನಾಟಕ ರಾಜ್ಯದಲ್ಲಿ ಚರ್ಮಕಾರ ಉಪಜಾತಿಗಳನ್ನು ಮಾದಿಗ ಸಂಬಂಧಿತ ಪಟ್ಟಿಯಿಂದ ಬೇರ್ಪಡಿಸಿ ಶೇಕಡಾ 3ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು. 

 ರಾಜ್ಯ ಸರ್ಕಾರವು ಚರ್ಮಕಾರ ಸಮಾಜದ ಜನರ ಸಮಗ್ರ ಏಳಿಗೆಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ / ಮಂಡಳಿಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.

 ಈ ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಡಾ. ಮೋಹನ ಉಳ್ಳಿಕಾಶಿ, ಪ್ರಧಾನ ಕಾರ್ಯದರ್ಶಿಯಾದ ಸುನಿಲ ಮದನಭಾವಿ, ಉಪಾಧ್ಯಕ್ಷರಾದ ಶಿವಲಿಂಗಪ್ಪ ಗೌಳಿ, ಪ್ರಭು ಬೆಂಗಳೂರ, ಶಿವಾನಂದ ದೊಡಮನಿ, ವಿಠಲ ಪೋಳ ಮತ್ತು ವಕ್ತಾರರಾದ ಸಂಜೀವ ಲೋಕಪೂರ ಅವರು ಉಪಸ್ಥಿತರಿದ್ದರು.