ಅಕ್ಟೋಬರ್ 24, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ನಾಗವಾರ ಮೂಲದ ರಾಜಗೋಪಾಲ್ ಎಂಬುವವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಬೆಂಗಳೂರಿನ ನಾಗವಾರ ಬಸ್ ಸ್ಟಾಪ್ ಸಮೀಪ ಕಾರ್ಲೆ ಗ್ರೂಪ್ ನಿರ್ಮಾಣದ ತಡೆಗೋಡೆಯಿಂದಾಗಿ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ ಎಂದು ರಾಜಗೋಪಾಲ್ ಅವರು ಆರೋಪಿಸಿದರು. 

 ಮಳೆಗಾಲದಲ್ಲಿ ಕಾರ್ಲೆ ಗ್ರೂಪ್ ನಿರ್ಮಾಣದ ತಡೆಗೋಡೆಯಿಂದ ನಮ್ಮ ಮನೆ ಸುತ್ತಮುತ್ತ ಹೆಚ್ಚು ನೀರು ನಿಲ್ಲುತ್ತಿದೆ ಎಂದು ರಾಜಗೋಪಾಲ್ ಅವರು ಆರೋಪಿಸಿದರು. 

 ಹಾಗಾಗಿ ರಾಜ್ಯ ಸರ್ಕಾರ ಈ ತಡೆಗೋಡೆ ತೆರವುಗೊಳಿಸಿದರೆ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.