ಸೆಪ್ಟೆಂಬರ್ 13, 2024
ರೆಂಕೋ (ಬಿ.ಹೆಚ್.ಇಎಲ್) ಹೌಸ್ ಬಿಲ್ಡಿಂಗ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಶಂಕರ್ ಜಿ.ಬೆಲೇರಿ ನಕಲಿ ಖಾತಾ, ನಕಲಿ ಬಿಬಿಎಂಪಿ ಕಂದಾಯ ರಶೀದಿ, 1999 ರಲ್ಲಿ ಪಡೆದ ಅಮಾನ್ಯ ನೋಟರಿ ಜಿಪಿಎ ಮತ್ತು ಮರಣ ಹೊಂದಿರುವವರ ಜಿಪಿಎ ಬಳಸಿ ನಿವೇಶನ ನೋಂದಣಿ ಮಾಡಿ ಸೊಸೈಟಿಗೆ ವಂಚನೆ.
ಬೆಂಗಳೂರು: ರೆಂಕೋ (ಬಿ.ಹೆಚ್.ಇ.ಎಲ್) ಹೌಸ್ ಬಿಲ್ಡಿಂಗ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಅಧ್ಯಕ್ಷರಾದ ವಿಜಯಕುಮಾರ್ ಮತ್ತು ಮಾಜಿ ಅಧ್ಯಕ್ಷರಾದ ಶಂಕರ್ ಜಿ.ಬೇಲೆರಿ ಹಾಲಿ ನಿರ್ದೇಶಕ ಹಾಗೂ ಜಿ.ಜೆ.ಸುರೇಶ ಹಾಲಿ ಉಪಾಧ್ಯಕ್ಷರು ರವರು ಮತ್ತು ಇವರ ಜೊತೆ ಸೇರಿರುವ ಒಂರ್ದಿವ ನಿರ್ದೇಶಕರು
ಸೊಸೈಟಿಯಲ್ಲಿ ಹಲವಾರು ಹಗರಣ ಮತ್ತು ಸೊಸೈಟಿ ನಿಯಾಮವಳಿ ಉಲ್ಲಂಘನೆ ಹಾಗೂ ನಕಲಿ ನೋಂದಣಿ ಮತ್ತು ಖಾತೆ ಹಾಗೂ ಖಾಸಗಿಯವರಿಗೆ ಸದಸ್ಯತ್ವ ನೀಡಿ ಬೆಲೆ ಬಾಳುವ ಸೈಟ್ ಗಳನ್ನು ಮಾರಾಟ ಮಾಡಿರುವ ಕುರಿತು ಬಿಹೆಚ್ ಇಎಲ್ ನಲ್ಲಿ ಸುಮಾರು 35 ವರ್ಷ ಸೇವೆ ಸಲ್ಲಿಸಿ ಆಡಳಿತಾಧಿಕಾರಿಯಾಗಿ ನಿವೃತ್ತಿ ಹೊಂದಿದ್ದು ಹಾಗೂ ಸೊಸೈಟಿ ಹಿರಿಯ ಸದಸ್ಯರಾದ ಸಿದ್ದಹನುಮಪ್ಪರವರು ರವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಪಟ್ಟಣಗೆರೆ ಎರಡನೆ ಹಂತದ ಮುಂದುವರೆದ ಬಡಾವಣೆಯಲ್ಲಿ ಉಳಿಕೆ ಜಾಗದ ಸೈಟ್ ಗಳು ಮತ್ತು ಹೆಚ್ಚಿನ ಮಳೆ ನೀರುಗಾಲುವೆ ಪಕ್ಕದಲ್ಲಿ ಇರುವ ಖಾಲಿ ಜಾಗಗಳಿಗೆ ನಕಲಿ ಸೈಟ್ ನಂಬರ್ ಗಳನ್ನು ಹಾಕಿ 13 ಸೈಟ್ ಗಳನ್ನು ಮಾರಾಟ ಮಾಡಿದ್ದಾರೆ.
ಸೈಟ್ ಗಳಿಗೆ ಸಬ್ ರಿಜಿಸ್ಟ್ರಾರ್ ಮೌಲ್ಯಕ್ಕೆ ಸೊಸೈಟಿಯಿಂದ ರಶೀದಿ ಹಾಕಲಾಗಿದ್ದು ಆದರೆ ಈ ಸೈಟ್ ಗಳ ಮಾರುಕಟ್ಟೆ ಬೆಲೆ ಸಬ್ ರಿಜಿಸ್ಟ್ರಾರ್ ಮೌಲ್ಯಕ್ಕಿಂತ 3 ಪಟ್ಟು ಹೆಚ್ಚು ಬೆಲೆಯುಳ್ಳ ಸೈಟ್ ಗಳನ್ನು ಹೊರಗಿನವರಿಗೆ ನೋಂದಣಿ ಮಾಡಿ ವಂಚನೆ ಮಾಡಿರುತ್ತಾರೆ.
ಸೈಟ್ ಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಸೊಸೈಟಿಯಲ್ಲಿ ಸದಸ್ಯತ್ವ ನೀಡಿ, ಕೆಲವೇ ತಿಂಗಳ ಅಂತರದಲ್ಲಿ ಅವರಿಗೆ ಸೈಟ್ ನೋಂದಣಿ ಮಾಡಿಕೊಟ್ಟಿದ್ದಾರೆ.
ಸೊಸೈಟಿಯ ಸೈಟ್ ಗಳನ್ನು ಖಾಸಗಿಯವರಿಗೆ ಮಾರಾಟ ಸಲುವಾಗಿ ನಕಲಿ ದಾಖಲೆ ಸೃಷ್ಟಿ ಮತ್ತು ನಕಲಿ ಖಾತೆಗಳೊಂದಿಗೆ ಹೆಚ್ಚಿನ ಮೌಲ್ಯಕ್ಕೆ ಮಾರಾಟ ಮಾಡಿರುವ ಬಗ್ಗೆ ಸಹಕಾರ ಇಲಾಖೆ ಸಹಕಾರ ಕಾಯ್ದೆ 1959ರ ಕಲಂ 65 ರ ಅಡಿಯಲ್ಲಿ ಸೊಸೈಟಿಯ ದಾಖಲೆಗಳನ್ನು ಪರಿಶೀಲಿಸಿ 10 ಗಂಭೀರ ಆರೋಪಗಳ ಪಟ್ಟಿಯಲ್ಲಿ 3 ನೇ ಮತ್ತು 4 ನೇ ಹಂತದಲ್ಲಿ ಅಭಿವೃದ್ಧಿಕಾರರಿಗೆ ಹೆಚ್ಚಿನ ಹಣ ಪಾವತಿಸಿ ಸಂಘಕ್ಕೆ ನಷ್ಟ ಉಂಟುಮಾಡಿರುವ ಅಭಿಪ್ರಾಯ ತಿಳಿಸಿ, ಸಹಕಾರ ಇಲಾಖೆಯ ಪರಿವೀಕ್ಷಣಾ ಅಧಿಕಾರಿ ತಮ್ಮ ಅಂತಿಮ ವರದಿಯಲ್ಲಿ ನಮೂದಿಸಿ ಇಲಾಖೆಗೆ ಸಲ್ಲಿಸಿರುತ್ತಾರೆ. ಅದರಂತೆ ಸಹಕಾರ ಸಂಘದ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ, ಅವರು ಕಲಂ 68 ರ ಅಡಿ ಅನುಪಾಲನೆಗೆ ಆದೇಶ ಹೊರಡಿಸಿದ್ದು, ಹಾಗೆಯೇ ಕಲಂ 29 ಸಿ ಅಡಿಯಲ್ಲಿ ಸೊಸೈಟಿಯ 12 ನಿರ್ದೇಶಕರನ್ನು ಅನರ್ಹಗೊಳಿಸಲು ನೋಟಿಸ್ ಜಾರಿ ಮಾಡಿರುತ್ತಾರೆ.