ಆಗಸ್ಟ್ 6, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'K.S & D.L ಮಾರ್ಕೆಟಿಂಗ್ ಸ್ಟಾಫ್ ಅಂಡ್ ವರ್ಕರ್ಸ್ ಅಸೋಸಿಯೇಷನ್ 'ನ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಜಿ.ಆರ್. ಶಿವಶಂಕರ್ ಅವರು ಮಾತನಾಡಿದರು.
ಕೆ.ಎಸ್ & ಡಿ.ಎಲ್ ಬೆಂಗಳೂರು ಮಾರುಕಟ್ಟೆ ವಿಭಾಗದ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಬೇಕೆಂದು ಜಿ.ಆರ್. ಶಿವಶಂಕರ್ ಅವರು ಒತ್ತಾಯಿಸಿದರು.
ಜತೆಗೆ ಕೆ.ಎಸ್ & ಡಿ.ಎಲ್ ಕಾರ್ಮಿಕರಿಗೆ ಬೋನಸ್ ನೀಡದಿರುವುದನ್ನು ಖಂಡಿಸಿ ಮುಷ್ಕರ ನಡೆಸಲಾಗುವುದು ಎಂದು ಜಿ.ಆರ್. ಶಿವಶಂಕರ್ ಅವರು ಮಾಧ್ಯಮಗಳಿಗೆ ತಿಳಿಸಿದರು.