ಜೂನ್ 13, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ನ್ಯಾಷನಲ್ ಮೈನಾರಿಟಿ ವೆಲ್ಫೇರ್ ಕೌನ್ಸಿಲ್' ನ ರಾಷ್ಟೀಯ ಅಧ್ಯಕ್ಷರಾದ 'ಡಾ. ಮೊಹಮ್ಮದ್ ಸೈಫುದ್ದಿನ್ ಖಾನ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

  ಬಡವರಿಗೆ ನಿವೇಶನ ಕೊಡಿಸುವ ನೆಪದಲ್ಲಿ ಬೆಂಗಳೂರಿನ ಕುಂಬಳಗೂಡು ಮೂಲದ ಡಿ.ಪಿ. ಕೃಷ್ಣಮೂರ್ತಿ ಹಾಗೂ ಆನಂದ ರಾವ್ ಅವರು 70 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚನೆ ಎಸಗಿದ್ದಾರೆ ಎಂದು ಡಾ. ಮೊಹಮ್ಮದ್ ಸೈಫುದ್ದಿನ್ ಖಾನ್ ಅವರು ಆರೋಪಿಸಿದರು. 

  ರಾಜ್ಯ ಸರ್ಕಾರದ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಕೆಂಗೇರಿ ಸಮೀಪದಲ್ಲಿ ಬಡವರಿಗೆ ಕಡಿಮೆ ದರದಲ್ಲಿ ನಿವೇಶನ ಕೊಡಿಸುತ್ತೇನೆ ಎಂದು ಹೇಳಿ ಸುಮಾರು 67 ಹೆಚ್ಚು ಜನರ ಬಳಿ 70 ಲಕ್ಷಕ್ಕಿಂತ ಹೆಚ್ಚು ಹಣ ಪಡೆದು ಡಿ.ಪಿ. ಕೃಷ್ಣಮೂರ್ತಿ ಹಾಗೂ ಆನಂದ ರಾವ್ ಅವರು ವಂಚನೆ ಎಸಗಿದ್ದಾರೆ ಎಂದು ಡಾ. ಮೊಹಮ್ಮದ್ ಸೈಫುದ್ದಿನ್ ಖಾನ್ ಅವರು ಆರೋಪಿಸಿದರು. 

 ಡಿ.ಪಿ. ಕೃಷ್ಣಮೂರ್ತಿ ಹಾಗೂ ಆನಂದ ರಾವ್ ಅವರ ಬಳಿ 70 ಲಕ್ಷ ಹಣ ಕೇಳಲು ಹೋದರೆ, ಮಾರಕಾಸ್ತ್ರಗಳಿಂದ ದಾಳಿ ಮಾಡುವುದಾಗಿ ಹೆದರಿಸುತ್ತಾರೆ ಎಂದು ಡಾ. ಮೊಹಮ್ಮದ್ ಸೈಫುದ್ದಿನ್ ಖಾನ್ ಅವರು ಆರೋಪಿಸಿದರು. 

 ಹಾಗಾಗಿ ನಿವೇಶನ ಕೊಡಿಸುವ ನೆಪದಲ್ಲಿ ಅಕ್ರಮ ಎಸಗಿರುವ ಡಿ.ಪಿ. ಕೃಷ್ಣಮೂರ್ತಿ ಹಾಗೂ ಆನಂದ ರಾವ್ ಅವರನ್ನು ಬಂಧಿಸಿ ಬಡವರಿಗೆ ನ್ಯಾಯ ಕೊಡಿಸಬೇಕೆಂದು ಡಾ. ಮೊಹಮ್ಮದ್ ಸೈಫುದ್ದಿನ್ ಖಾನ್ ಅವರು ಮನವಿ ಮಾಡಿದರು.