ಮೇ 31, 2024 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ಬಿಬಿಎಂಪಿಯ ನೇರವೇತನ (DPS), ಪೌರಕಾರ್ಮಿಕರ, ಮೇಲ್ವಿಚಾರಕರ, ಚಾಲಕರ, ಸಹಾಯಕರ, ಲೋಡರ್ಸ್ ಅವರ ಖಾಯಂ ಒತ್ತಾಯ ಕ್ರಿಯಾ ಸಮಿತಿ'ಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

  ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಎಂ. ಸುಬ್ಬರಾಯುಡು ಅವರು ಮಾತನಾಡಿದರು.

ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರಾದ ಆಟೋ ಚಾಲಕರು, ಲಾರಿ ಚಾಲಕರು, ಲೋಡರ್ಸ್, ಕ್ಲೀನರ್ಸ್, ಘನತ್ಯಾಜ್ಯ ವಾಹನ ಚಾಲಕರಿಗೆ ನೇರವೇತನ (DPS) ಪದ್ಧತಿ ಜಾರಿಗೊಳಿಸಬೇಕೆಂದು ಎಂ. ಸುಬ್ಬರಾಯಿಡು ಅವರು ಒತ್ತಾಯಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಕ್ರಿಯಾ ಸಮಿತಿಯ ಪ್ರಮುಖರಾದ ಎಂ.ಸಿ. ಶ್ರೀನಿವಾಸ್, ಕೆ.ಬಿ. ನರಸಿಂಹ ಅವರು ಉಪಸ್ಥಿತರಿದ್ದರು.