ಮಾರ್ಚ್ 30, 2024 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ"ಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

  ಈ ಪತ್ರಿಕಾಗೋಷ್ಠಿಯಲ್ಲಿ ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಬಿ.ಆರ್. ಮುನಿರಾಜ ಅವರು ಮಾತನಾಡಿದರು.

    ಹಣ ಹೂಡಿದರೆ ಹೆಚ್ಚು ಲಾಭ ನೀಡುವ ನೆಪದಲ್ಲಿ ಶಿವಾಜಿನಗರ ಮೂಲದ ಅಶ್ವಿನ್ ರಾವ್, ಆಂಧ್ರಪ್ರದೇಶದ ನೆಲ್ಲೂರು ಮೂಲದ ಕಲೀಲ್ ಹಾಗೂ ತಮಿಳುನಾಡು ಮೂಲದ ಜಯರಾಜ್ ಎಂಬುವರು ಅಕ್ರಮವಾಗಿ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂಪಾಯಿ ಹಣ ಪಡೆದು ವಂಚನೆ ಎಸಗಿದ್ದಾರೆ ಎಂದು ಬಿ.ಆರ್. ಮುನಿರಾಜ ಅವರು ಆರೋಪಿಸಿದರು.

 ಅಶ್ವಿನ್ ರಾವ್, ಕಲೀಲ್ ಹಾಗೂ ಜಯರಾಜ್ ಅವರ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ 1400 ಪ್ರಕರಣಗಳು ದಾಖಲಾಗಿವೆ ಎಂದು ಬಿ.ಆರ್. ಮುನಿರಾಜ ಅವರು ತಿಳಿಸಿದರು. ಈ ಮೇಲ್ಕಂಡ ಆರೋಪಿಗಳು ವಂಚನೆ ಮಾಡಿದ್ದಾರೆ ಎಂದು ಬಿ.ಆರ್. ಮುನಿರಾಜ ಅವರು ಆರೋಪಿಸಿದರು.

  ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಪೊಲೀಸರು ಈ ಮೇಲ್ಕಂಡ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಹಣ ಕಳೆದುಕೊಂಡಿರುವ ಸಾವಿರಾರು ಅಮಾಯಕ ಜನರಿಗೆ ನ್ಯಾಯ ಒದಗಿಸಬೇಕೆಂದು ಬಿ.ಆರ್ ಮುನಿರಾಜ ಅವರು ಒತ್ತಾಯಿಸಿದರು.