ಮಾರ್ಚ್ 28, 2024

ಬೆಂಗಳೂರಿನ‌ ಕೆ.ಆರ್.ಪುರಂ ನಲ್ಲಿ ದೇಶ ವಿದೇಶಗಳ‌ ಹೆಸರಾಂತ ಕಲಾವಿದರ ತಂಡದಿಂದ ಕೂಡಿದ ಜೆಮಿನಿ ಸರ್ಕಸ್ ರೋಚಕ ಮತ್ತು ಅದ್ಭುತ ಪ್ರದರ್ಶನ.

ಸರ್ಕಸ್ ನ‌‌ ಪ್ರಮುಖ ಆಕರ್ಷಣೆಯಾದ ಪ್ರಾಣಿಗಳ ಪ್ರದರ್ಶನ ನಿಷೇಧದ ನಂತರ ಸರ್ಕಸ್ ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ರಷ್ಯಾ ಸಹಿತ ವಿವಿಧ ದೇಶಗಳ ಕಲಾವಿದರನ್ನು ಬಳಸಿಕೊಂಡು ಸರ್ಕಸ್ ಪ್ರದರ್ಶನ ನೀಡುವ ಮೂಲಕ ಸರ್ಕಸ್ ನ ಜನಾಕರ್ಷಣೆ ಹೆಚ್ಚಿಸುವ ಕಾರ್ಯದಲ್ಲಿ ಜೆಮಿನಿ ಸರ್ಕಸ್ ಮುಂಚೂಣಿಯಲ್ಲಿದೆ ಎಂದು ಸರ್ಕಸ್ ಪ್ರೊಮೋಟರ್ ಪ್ರೇಮನಾಥ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

1951 ರಲ್ಲಿ ಎಂ.ವಿ.ಶಂಕರನ್ ಹಾಗೂ‌ ಕೆ.ಸಹಾದೇವನ್ ರಿಂದ ಆರಂಭವಾದ ಜೆಮಿನಿ ಸರ್ಕಾಸ್ ಇವರಗೂ ದೇಶ ವಿದೇಶಗಳಲ್ಲಿ ಸಾವಿರಾರು ಪ್ರದರ್ಶನ ನೀಡುವ ಮೂಲಕ ಸರ್ಕಸ್ ಕಲೆಯನ್ನು ಜೀವಂತವಾಗಿ ಉಳಿಸಿದೆ ಇಂದು ಎಂ.ವಿ.ಶಂಕರ್ ಅವರ ಮಕ್ಕಳಾದ ಅಜಯ್ ಶಂಕರ್ ಹಾಗೂ ಅಶೋಕ್ ಶಂಕರ್ ಜೇಮಿನಿ ಸರ್ಕಸ್ ಮುಂದುವರಿಸುವ ಮೂಲಕ ತಮ್ಮ ತಂದೆಯ ಹೆಸರಿಗೆ ಕೀರ್ತಿ ತಂದಿದ್ದಾರೆ.

ಬೆಂಗಳೂರು ನಾಗರಿಕರಿಗೆ ರಜಾ ಕಾಲದಲ್ಲಿ ಶುದ್ದ ಮನರಂಜನೆ ನೀಡುವ ಉದ್ದೇಶದಿಂದ. ಬೆಂಗಳೂರಿನ ಕೆ.ಆರ್.ಪುರಂ ನ ದೂರವಾಣಿ ನಗರದ ಐಟಿಐ ಮೈದಾನದಲ್ಲಿ ಜೇಮಿನಿ ಸರ್ಕಸ್ ಪ್ರದರ್ಶನ ಆರಂಭವಾಗಿ ಸರ್ಕಸ್ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಸರ್ಕಸ್ ಪ್ರೊಮೋಟರ್ ಪ್ರೇಮನಾಥ್ ಹೇಳಿದರು.

ಕೆ.ಆರ್.ಪುರಂ ನಲ್ಲಿ ಪ್ರದರ್ಶನವಾಗಿತ್ತಿರುವ ಜೇಮಿನಿ ಸರ್ಕಸ್ ನಲ್ಲಿ ರಷ್ಯಾ, ತಾಂಜೇನಿಯಾ, ಇಥಿಯೋಪಿಯ ಹಾಗೂ ಭಾರತದ ವಿವಿಧ ಭಾಗದ ಹೆಸರಾಂತ ಕಲಾವಿದರು ವೈವಿಧ್ಯಮಯ ರೋಮಾಂಚನಕಾರಿ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ ಎಂದು ಪ್ರೇಮನಾಥ್ ಹೇಳಿದರು.

ಮೇ ತಿಂಗಳ 6 ತನಕ ಪ್ರತಿದಿನ ಮೂರು ಪ್ರದರ್ಶನ ನಡೆಯಲಿದೆ ಎಂದು ಪ್ರೇಮನಾಥ್ ಹೇಳಿದರು.

ಜೆಮಿನಿ ಸರ್ಕಸ್ ನಿರ್ದೇಶಕ‌ ದಿವಾಕರ್ ಹಾಗೂ ವ್ಯವಸ್ಥಾಪಕ್ ಟೈಟಸ್ ವರ್ಗಿಸ್ ಹಾಜರಿದ್ದರು.

ಜೇಮಿನಿ ಸರ್ಕಸ್ ನಲ್ಲಿ ಭಾರತ, ತಾಂಜಾನಿಯ, ಇಥಿಯೋಪಿಯಾ ಸಹಿತ ವಿವಿಧ ದೇಶಗಳ 300 ಮಂದಿ ಉದ್ಯೋಗಿಗಳಿದ್ದು ಅವರಲ್ಲಿ 60 ಮಂದಿ ಮಹಿಳಾ ಕಲಾವಿದರು ಹಾಗೂ 40 ಮಂದಿ ಪುರುಷ ಕಲಾವಿದರಿದ್ದಾರೆ.