ಜನವರಿ 5, 2024 

ಕನ್ನಡಿಗ ಶ್ರೀ ಸ್ವಾಮಿ ಸಿ.ಜೆ. ಅವರಿಂದ ಅದ್ಭುತ ಸಾಧನೆ: ತೈಲ ವರ್ಣ ಚಿತ್ರಗಳ ಮೂಲಕ ಪೌರಾಣಿಕ ಕಥೆಗಳ ಅನಾವರಣ (ಮಹಾಭಾರತದ 178ಕ್ಕೂ ಅಧಿಕ ತೈಲ ವರ್ಣ ಚಿತ್ರಗಳು )- ಶ್ರೀ ಸ್ವಾಮಿ ಸಿ.ಜೆ ಅವರಿಂದ ಮಹಾಭಾರತ ಸರಣಿ

ಬೆಂಗಳೂರು, ಜನವರಿ 5, 2024: ಭಾರತೀಯ ಪುರಾಣಗಳ ಶ್ರೀಮಂತ ಇತಿಹಾಸದಲ್ಲಿ ಮಹಾಭಾರತವು ಸದಾ ಪ್ರಸ್ತುತವಾಗಿರುವ ಮಹಾಕಾವ್ಯವಾಗಿದೆ. ಮಹಾಭಾರತವು ಕುರುವಂಶದ ಕಥೆ, ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಮತ್ತು ಪಾಂಡವರ ನಡುವಿನ ಧರ್ಮಯುದ್ಧದ ಕತೆಯನ್ನು ಮಹಾಭಾರತ ನವಿರಾಗಿ ಹೇಳುತ್ತದೆ. ಶೌರ್ಯ, ನೈತಿಕತೆ ಮತ್ತು ಬ್ರಹ್ಮಾಂಡದ ಸಮತೋಲನವೇ ಮಹಾಭಾರತದ ಮೂಲತಿರುಳಾಗಿದೆ.

ಶ್ರೀ ಸ್ವಾಮಿ ಸಿ.ಜೆ ಅವರ ಮಹಾಭಾರತ ಸರಣಿಯು ಕೇವಲ ತೈಲ ವರ್ಣ ಚಿತ್ರಗಳ ಸಂಗ್ರಹವಲ್ಲ, ಬದಲಿಗೆ ಕಾಲಾತೀತವಾದ ಸಾಹಸಗಾಥೆಯ ಸೊಗಸಾದ ನಿರೂಪಣೆಯಾಗಿದೆ. ಶ್ರೀ ಸ್ವಾಮಿ ಅವರು ಕಾರ್ಪೊರೇಟ್ ಜಗತ್ತಿನಲ್ಲಿ 27 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ ಅನುಭವಿ ಮ್ಯಾನೇಜ್‍ಮೆಂಟ್ ವೃತ್ತಿಪರರಾಗಿದ್ದು, ಕಲೆಯ ಬಗ್ಗೆ ಅತ್ಯುತ್ಸಾಹ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಈ ಸೃಜನಶೀಲ ಪ್ರಯಾಣವನ್ನು ಅವರು 2018 ರಲ್ಲಿ ಪ್ರಾರಂಭಿಸಿ ಫೆಬ್ರವರಿ 2023 ರವರೆಗೆ 5 ವರ್ಷಗಳ ಅವಧಿಯಲ್ಲಿ 178ಕ್ಕೂ ಅಧಿಕ ಮಹಾಭಾರತದ ಕಲಾಕೃತಿಗಳನ್ನು ರಚಿಸುವ ಮೂಲಕ ಮಹಾಭಾರತ ಕಲಾರಸಿಕರಿಗೆ ಕೊಡುಗೆಯನ್ನು ನೀಡಿದ್ದಾರೆ.

ಮಹಾಭಾರದ ಸರಣಿಯನ್ನು ಅನಾವರಣಗೊಳಿಸಿದ ಬಳಿಕ ಶ್ರೀ ಸ್ವಾಮಿ ಸಿ.ಜೆ ಅವರು ಹೇಳಿದರು, ``ನಿಜಕ್ಕೂ ನಾನು ರೋಮಾಂಚಿತನಾಗಿದ್ದೇನೆ. ಐದು ವರ್ಷಗಳ ಅವಧಿಯನ್ನು ಮೀಸಲಿಟ್ಟು 24’’ BY 30’’ ಅಳತೆಯ ಕ್ಯಾನ್ವಾಸ್‍ಗಳಲ್ಲಿ ರಚಿಸಿರುವ ಮಹಾಭಾರತದ ಸರಣಿಯ 178 ತೈಲವರ್ಣ ಫ್ರೇಮ್-ಟು-ಫ್ರೇಮ್ ತೈಲವರ್ಣ ಕಲಾಕೃತಿಗಳನ್ನು ಚಿತ್ರಕಲಾ ರಸಿಕರಿಗೆ ಹಾಗು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಭಾಗ್ಯ ನನ್ನದಾಗಿದೆ. ಈ ಸರಣಿಗಾಗಿ ತೆಗೆದುಕೊಂಡಿರುವ ಸಮಯವು ಇಟಲಿಯ ಕಲಾವಿದ ಶ್ರೀ ಜಿಯಂಪಾವ್ಲ್ವ್ ಥೋಮಸೆಟ್ಟಿ ಅವರ ಟೈಮ್‍ಲೈನ್ ಅನ್ನು ಮೀರಿಸಿದೆ. ಭಾರತೀಯ ಸಂಸ್ಕøತಿ ಮತ್ತು ಮಹಾಭಾರತದ ಅಧ್ಯಯನಕ್ಕಾಗಿ ಹೋಲಿಸಬಹುದಾದ ಅವಧಿಯನ್ನು ಮೀಸಲಿಟ್ಟರೂ, ಇಟಾಲಿಯನ್ ಕಲಾವಿದ ದೊಡ್ಡ ಕ್ಯಾನ್ವಾಸ್‍ಗಳಲ್ಲಿ ಮಹಾಭಾರತದ 25 ವರ್ಣಚಿತ್ರಗಳನ್ನು ರಚಿಸಲು 12 ವರ್ಷಗಳನ್ನು (ಅಧ್ಯಯನಕ್ಕಾಗಿ 5 ವರ್ಷ ಮತ್ತು ಕಲಾಕೃತಿ ರಚಿಸಲು 7 ವರ್ಷ) ತೆಗೆದುಕೊಂಡರು. ವಾಸ್ತವವಾಗಿ ಈ ಮಟ್ಟದ ಯಶಸ್ಸು ಸಾಧಿಸಲು ಶ್ರೀ ಜಿಯಂಪಾವ್ಲ್ವ್ ಥೋಮಸೆಟ್ಟಿ ಅವರೇ ನನಗೆ ಸ್ಫೂರ್ತಿ.

  ಕಲಾವಿದರ ಕುರಿತು: ಶ್ರೀ ಸ್ವಾಮಿ ಅವರು ಮ್ಯಾನೇಜ್‍ಮೆಂಟ್ ವೃತ್ತಿಪರ ಮತ್ತು ಉತ್ಸಾಹಿ ಯೋಗಾಭ್ಯಾಸಿಯಾಗಿದ್ದಾರೆ. ಈ ದ್ವಂದ್ವ ವ್ಯಕ್ತಿತ್ವದ ಕಾರಣದಿಂದಾಗಿಯೇ ಅವರಿಗೆ ಕಲೆಯಲ್ಲಿ ವಿಭಿನ್ನ ದೃಷ್ಟಿಕೋನದ ಪ್ರಯತ್ನ ನಡೆಸಲು ಸಾಧ್ಯವಾಗಿದೆ. ಭಾರತೀಯ ಸಂಸ್ಕøತಿ ಮತ್ತು ಮಹಾಭಾರತ ಕುರಿತಾದ ಅವರ ಆಳವಾದ ಜ್ಞಾನವು ಅವರ ಸಾಟಿಯಿಲ್ಲದ ಕಲಾಕೃತಿಗಳಲ್ಲಿ ಪ್ರತಿಫಲಿಸುತ್ತದೆ.

  ಮಹಾಭಾರತ ಸರಣಿಯ ಕುರಿತು- ಕಥಾ ನಿರೂಪಣೆಯೊಂದಿಗೆ ವರ್ಣಚಿತ್ರಗಳು:

- 178 ಸುಂದರ ತೈಲ ವರ್ಣ ಚಿತ್ರಗಳು: ಪ್ರತಿ ಕಲಾಕೃತಿಯೂ 24’’ By 30’’ ವಿಶಿಷ್ಟ ಅಳತೆಯಲ್ಲಿದ್ದು, ಮಹಾಭಾರತದ ನಿರೂಪಣೆಯ ವಿಭಿನ್ನ ಆಯಾಮಗಳನ್ನು ಅನಾವರಣಗೊಳಿಸುತ್ತವೆ. ಈ ಕಲಾಕೃತಿಗಳ ಸೌಂದರ್ಯ ಎಂದರೆ ಮಹಾಭಾರತದ ಕಥೆಯನ್ನು ತಿಳಿದುಕೊಳ್ಳಲು ಬಯಸುವ ಪಯಣಿಗರಿಗೆ ಒಂದೇ ಕಲಾ ಗ್ಯಾಲರಿಯಲ್ಲಿ ಇಡೀ ಮಹಾಕಾವ್ಯವನ್ನು ತಿಳಿಸಿಕೊಡುವ ಮೂಲಕ ವಿಭಿನ್ನ ಅನುಭವ ನೀಡುತ್ತದೆ.

- ವಿಶ್ವ ದಾಖಲೆ ಮುರಿಯುವ ಅವಧಿ (ಟೈಮ್‍ಲೈನ್): ಭಾರತೀಯ ಸಂಸ್ಕøತಿ ಮತ್ತು ಮಹಾಭಾರತದ ಅಧ್ಯಯನ ಮಾಡಲು ಇಟಲಿಯ ಕಲಾವಿದ ಶ್ರೀ ಜಿಯಂಪಾವ್ಲ್ವ್ ಥೋಮಸೆಟ್ಟಿ ಅವರು ವ್ಯಯಿಸಿದ್ದ ಅವಧಿಗೆ ಹೋಲಿಸಿದರೆ ಶ್ರೀ ಸ್ವಾಮಿ ಅವರು ಈ ಕಲಾಕೃತಿಗಳಿಗಾಗಿ ಐದು ವರ್ಷಗಳ ಸಮಯವನ್ನು ವಿನಿಯೋಗಿಸಿದ್ದಾರೆ. ಇಟಲಿ ಕಲಾವಿದ ದೊಡ್ಡ ಕ್ಯಾನ್ವಾಸ್‍ನಲ್ಲಿ ಮಹಾಭಾರತದ 25 ಚಿತ್ರಗಳನ್ನು ರಚಿಸಿಲು 7 ವರ್ಷ ತೆಗೆದುಕೊಂಡರೆ, ಶ್ರೀ ಸ್ವಾಮಿ ಅವರು ವಿಶಿಷ್ಟ ಅಳತೆಯ ಕ್ಯಾನ್ವಾಸ್‍ಗಳಲ್ಲಿ ವಿಭಿನ್ನ ಶೈಲಿಯ 178 ಕಲಾಕೃತಿಗಳನ್ನು ಐದು ವರ್ಷಗಳಲ್ಲಿ ರಚಿಸುವ ಮೂಲಕ ಅದ್ಭುತ ಸಾಧನೆಯನ್ನು ಮಾಡಿದ್ದಾರೆ.

- ಕ್ಯಾನ್ವಾಸ್‍ನಲ್ಲಿ ತೈಲ ಚಿತ್ರ: ಶ್ರೀ ಸ್ವಾಮಿ ಅವರು ತೈಲ ವರ್ಣ ಶೈಲಿಯಲ್ಲಿ ಕಲಾಕೃತಿಗಳನ್ನು ರಚಿಸಿದ್ದಾರೆ. ಮಹಾಭಾರತದ ತಿರುಳನ್ನು ಕ್ಯಾನ್ವಾಸ್‍ಗಳಲ್ಲಿ ಕಟ್ಟಿಕೊಡಲು ಚಿಯಾರುಸ್ಕುರೊ, ಸ್ಕ್ರ್ಯಾಂಬ್ಲಿಂಗ್, ಗ್ಲೇಜಿಂಗ್, ಗ್ರಿಸಾಲ್, ರಿಯಲಿಸಂ, ವೆಟ್-ಆನ್-ವೆಟ್ (ಆಲ್ ಪ್ರಿಮಾ), ವೆಟ್-ಆನ್-ಡ್ರೈ ಮೊದಲಾದ ತಂತ್ರಗಾರಿಕೆಗಳನ್ನೂ ಬಳಸಿದ್ದಾರೆ.

ಕಥೆ ಹೇಳುವ ಕಲಾತ್ಮಕ ತಂತ್ರ: ಕಲಾಕೃತಿಗಳ ಜತೆಯಲ್ಲಿಯೇ ಶ್ರೀ ಸ್ವಾಮಿ ಅವರು ಯುಟ್ಯೂಬ್‍ನಲ್ಲಿ 39 ಆಕರ್ಷಕ ಸಂಚಿಕೆಗಳಲ್ಲಿ ಮಹಾಭಾರತದ ಕಥೆಯನ್ನು ಮೂರು ಭಾಷೆಗಳಲ್ಲಿ (ಕನ್ನಡ, ಹಿಂದಿ ಮತ್ತು ಇಂಗ್ಲಿಷ್) ಹೇಳಲಿದ್ದಾರೆ. ಶ್ರೀ ಪ್ರಕಾಶ್ ಹೆಗಡೆ ಅವರ ಮಧುರವಾದ ಸಂಗೀತ ಸಂಯೋಜನೆಯು ಕಲಾಪಯಣಕ್ಕೆ ಮಾಧುರ್ಯದ ರಂಗು ತುಂಬಿದೆ.

ಬಿಡುಗಡೆ ಮತ್ತು ಲಭ್ಯತೆ: ಮಹಾಭಾರತ ಕಲಾಕೃತಿಗಳ ಮುದ್ರಿತ ಚಿತ್ರಗಳು (Print on Canvas and Print on Paper) ಮಕರ ಸಂಕ್ರಾಂತಿಯ ಮಹತ್ವದ ದಿನವಾದ ಜನವರಿ 14, 2024 ರಿಂದ www.swamyarts.com ನಲ್ಲಿ ಖರೀದಿಗೆ ಲಭ್ಯವಿದೆ. ಅದೇವೇಳೆ ಯುಟ್ಯೂಬ್ ಸರಣಿಯೂ @Swamychannel ನಲ್ಲಿ ಪ್ರಸಾರವಾಗಲಿದೆ. ಭಾರತದ ಶ್ರೇಷ್ಠ ಮತ್ತು ಕಾಲಾತೀತ ಮಹಾಕಾವ್ಯದಲ್ಲಿ ಲೀನಗೊಳ್ಳುವ ಅನುಭವ ಪಡೆಯುವುದಕ್ಕಾಗಿ ಯೂಟ್ಯೂಬ್ ಚಾನೆಲ್ (@Swamychannel) ಗೆ ಚಂದಾದಾರರಾಗಬಹುದು (Subscribe to YouTube: @swamychannel).

ಸಂಪರ್ಕಿಸಿ ಮತ್ತು ಫಾಲೋ ಮಾಡಿ:

- ವೆಬ್‍ಸೈಟ್: www.swamyarts.com

- ಇನ್ಸ್‍ಟಾಗ್ರಾಮ್: @Swamyarts_com

- ಫೇಸ್‍ಬುಕ್: @swamyartscom

- X ಮೊದಲಿನ ಟ್ವಿಟರ್: @Swamyarts_com