December 7, 2023
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು 'ಕರ್ನಾಟಕ ಪ್ರದೇಶದ ಆರ್ಯ ಈಡಿಗರ ಸಂಘ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಆಯೋಜಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಡಾ. ಎಂ. ತಿಮ್ಮೇಗೌಡ ಅವರು ಮಾತನಾಡಿದರು. ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರ ಸಭಾಂಗಣದಲ್ಲಿ ಡಿಸೆಂಬರ್ 10ರಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ "ಅಮೃತ ಮಹೋತ್ಸವ" ಹಾಗೂ ಈಡಿಗ 25 ಪಂಗಡಗಳ "ಬೃಹತ್ ಜಾಗೃತ ಸಮಾವೇಶ"ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ|| ಎಂ. ತಿಮ್ಮೇಗೌಡ ಅವರು ಮಾಧ್ಯಮಗಳಿಗೆ ತಿಳಿಸಿದರು.