ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘವು ರಾಜ್ಯಮಟ್ಟದಲ್ಲಿ 2022- 23ನೇ ಸಾಲಿನಲ್ಲಿ SSLC ಮತ್ತು ದ್ವಿತೀಯ ಪಿಯುಸಿಯಲ್ಲಿ ರಾಜ್ಯದ ಬೆಂಗಳೂರು/ ಕಲ್ಬುರ್ಗಿ/ ಬೆಳಗಾವಿ/ ಮೈಸೂರು ನಾಲ್ಕು ಕಂದಾಯ ವಿಭಾಗಗಳ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ಗಂಗಾಮತ ಮತ್ತಿತರ ಪರ್ಯಾಯ ಪಂಗಡಗಳಿಗೆ ಸೇರಿದ ಮೊದಲ ಮೂರು ವಿದ್ಯಾರ್ಥಿಗಳಿಗೆ ನವಂಬರ್ 26ರಂದು ಬಾಗಲಕೋಟೆಯ ನವನಗರದಲ್ಲಿನ ಕಲಾಭವನದಲ್ಲಿ ನಡೆಲಿರುವ ಸಂಘದ ಕಾರ್ಯಕ್ರಮದಲ್ಲಿ ಪುರಸ್ಕರಿಸಲು ಉದ್ದೇಶಿಸಲಾಗಿದೆ ತಿಳಿಸಿದರು.