ಕನ್ನಡ ಮಾಧ್ಯಮ ಲೋಕದಲ್ಲಿ 'ನ್ಯೂಸ್ ಫಸ್ಟ್' ಕನ್ನಡ ಚಾನೆಲ್ ಸಂಸ್ಥೆಯು ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಆರ್ಟಿಫಿಷಿಲ್ ಇಂಟಲಿಜೆನ್ಸ್ (AI) ಆ್ಯಂಕರ್ ಮಾಯಾ ನ್ಯೂಸ್ ಫಸ್ಟ್ ಚಾನೆಲ್ ನಲ್ಲಿ ಸುದ್ದಿವಾಚನ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾಳೆ. AI ಮಾಯಾಳ ಆ್ಯಂಕರಿಂಗ್ ಸ್ಟೈಲ್ ಗೆ ಪ್ರಮುಖ ರಾಜಕಾರಣಿಗಳು, ಸಿನಿಮಾ ನಟ - ನಟಿಯರು ಸೇರಿದಂತೆ ರಾಜ್ಯದ ಜನರು ಫಿದಾ ಆಗಿದ್ದಾರೆ.