ಜುಲೈ 3, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಅಹಿಂದ" ಚಳುವಳಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಹಿಂದ ಚಳುವಳಿಯ ರಾಜ್ಯ ಜಂಟಿ ಮುಖ್ಯ ಸಂಚಾಲಕರಾದ ಎನ್. ವೆಂಕಟೇಶ ಗೌಡ ಚೆನ್ನಾಪುರ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರು ಅಹಿಂದ ವರ್ಗಗಳ ಬಹುದೊಡ್ಡ ನಾಯಕರಾದ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಯಾವುದೇ ಕಾರಣಕ್ಕೂ ಕೆಳಗೆ ಇಳಿಸಬಾರದು ಎಂದು ಎನ್. ವೆಂಕಟೇಶ ಗೌಡ ಚೆನ್ನಾಪುರ ಅವರು ಒತ್ತಾಯಿಸಿದರು.
ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಅವರು 5 ಗ್ಯಾರಂಟಿಗಳನ್ನು ಸಹ ನೀಡಿದ್ದಾರೆ. ಇದರಿಂದಾಗಿ ಕೋಟ್ಯಾಂತರ ಜನರಿಗೆ ಅನುಕೂಲವಾಗಿದೆ. ಹಾಗಾಗಿ ಬೇರೆಯವರ ಒತ್ತಡಗಳಿಗೆ ಮಣಿಯದೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗೆ ಇಳಿಸಬಾರದು ಎಂದು ಒತ್ತಾಯಿಸಿದರು.
ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಸಿಎಂ ಪದವಿಯಿಂದ ಕೆಳಗೆ ಇಳಿಸಿದರೆ, ರಾಜ್ಯದಾದ್ಯಂತ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎನ್. ವೆಂಕಟೇಶ ಗೌಡ ಚೆನ್ನಾಪುರ ಅವರು ಎಚ್ಚರಿಕೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಮುದಾಯಗಳ ಪ್ರಮುಖರಾದ ಶ್ರೀಮತಿ ಯೋಗೇಶ್ವರಿ ವಿಜಯ್, ಪ್ರಜ್ವಲ್ ಸ್ವಾಮಿ, ಅಶೋಕ್ ಕುಮಾರ್, ಮಂಡ್ಯ ಕೃಷ್ಣಪ್ಪ ಅವರನ್ನು ಸೇರಿದಂತೆ ಅನೇಕ ಸಂಘಟನೆಗಳ ಪ್ರಮುಖರು ಸಹ ಉಪಸ್ಥಿತರಿದ್ದರು.