ಗ್ರೋಹೇರ್ & ಗ್ಲೋಸ್ಕಿನ್ನ ಅತ್ಯಾಧುನಿಕ ಕ್ಲಿನಿಕ್ ಇಂದಿರಾನಗರದಲ್ಲಿ ಶುಭಾರಂಭ
ಬೆಂಗಳೂರು, ಜುಲೈ 13,2023: ಗ್ರೋಹೇರ್ & ಗ್ಲೋಸ್ಕಿನ್ ತನ್ನ ಕ್ಲಿನಿಕ್ ಇಂದಿರಾನಗರದಲ್ಲಿ ತನ್ನ 20 ನೇ ಶಾಖೆಯನ್ನು ಜುಲೈ 13, 2023ರಂದು ಆರಂಭಿಸಿದೆ, ಇದು ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸುವಲ್ಲಿ ಮಹತ್ವದ ಮೈಲಿಗಲ್ಲು ಎನಿಸಿಕೊಂಡಿದೆ. ಕೂದಲಿನ ಮರುಬೆಳವಣಿಗೆ ಮತ್ತು ತ್ವಚೆಯ ಚಿಕಿತ್ಸೆ ಪ್ರಮುಖ ಬ್ರಾಂಡ್ ಎಂದು ಹೆಸರುವಾಸಿಯಾದ ಈ ಕ್ಲಿನಿಕ್, ಕೂದಲಿನ ಮರು ಬೆಳವಣಿಗೆಗೆ ಅತ್ಯುತ್ತಮ ಸೇವೆ ನೀಡುತ್ತಿದೆ. ಜತೆಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸ್ವಾಸ್ಥ್ಯ ಪರಿಹಾರಗಳನ್ನು ಒದಗಿಸುತ್ತಿದೆ. ಅಡ್ವಾನ್ಸ್ಡ್ ಗ್ರೋಹೇರ್& ಗ್ಲೋಸ್ಕಿನ್ ಕ್ಲಿನಿಕ್, 2021ರಲ್ಲಿ ತನ್ನ ಯಾನ ಪ್ರಾರಂಭಿಸಿದ ಹೆಮ್ಮೆಯ ಬ್ರಾಂಡ್. ಇದು ಉತ್ಕೃಷ್ಟತೆ ಮತ್ತು ಅಚಲ ಬದ್ಧತೆಯೊಂದಿದೆ ಪ್ರವರ್ಧಮಾನಕ್ಕೆ ಬಂದಿದ್ದು, 2024ರ ವೇಳೆಗೆ 100 ಚಿಕಿತ್ಸಾಲಯಗಳ ನೆಟ್ವರ್ಕ್ ಆರಂಭಿಸುವ ಗುರಿಯನ್ನು ಹೊಂದಿದೆ. .
ಇಲ್ಲಿನ ಹಲವು ಶ್ರೇಣಿಯ ಚಿಕಿತ್ಸೆಗಳು ಕ್ಲಿನಿಕಲ್ ಮತ್ತು ನಾನ್-ಕ್ಲಿನಿಕಲ್ ವಿಧಾನಗಳನ್ನು ಒಳಗೊಂಡಿವೆ, ಇದರಲ್ಲಿ ಪರ್ಕ್ಯುಟೇನಿಯಸ್ ಎಫ್ಯುಇ ಹೇರ್ ಟ್ರಾನ್ಸ್ಪ್ಲಾಂಟ್, ಪಿಆರ್ಪಿ ಪ್ರೊ+, ಲೇಸರ್ ಹೇರ್ ಥೆರಪಿ, ಅಡ್ವಾನ್ಸ್ಡ್ ಗ್ರೋಹೇರ್ ಕಾಸ್ಮೆಟಿಕ್ ಸಿಸ್ಟಮ್ ಸೇವೆಗಳು ಒಳಗೊಂಡಿವೆ. ಇವೆಲ್ಲವೂ ಯುಎಸ್- ಎಫ್ಡಿಎನಿಂದ (ಅಮೆರಿಕ ಆಹಾರ ಮತ್ತು ಔಷಧ ನಿಯಂತ್ರನ ಸಂಸ್ಥೆ ) ಅನುಮೋದಿಸಲ್ಪಟ್ಟಿವೆ. ಇದಲ್ಲದೆ, ಅವರು ಹೈಡ್ರಾಫೇಷಿಯಲ್, ಕ್ಯೂ ಸ್ವಿಚ್ಡ್ ಲೇಸರ್, ಕೆಮಿಕಲ್ ಪೀಲ್, ಬೊಟೊಕ್ಸ್, ಫಿಲ್ಲರ್ಗಳು , ಥ್ರೆಡ್ ಲಿಫ್ಟ್, ಫುಲ್ ಬಾಡಿ ಲೇಸರ್, ಫೇಸ್ ಪಿಆರ್ಪಿ, ಮೊಡವೆ ತೆಗೆದುಹಾಕುವಿಕೆ ಮತ್ತು ಇತರ ಅನೇಕ ಅಸಾಧಾರಣ ಚರ್ಮದ ಚಿಕಿತ್ಸೆಗಳನ್ನು ನೀಡುತ್ತಿದೆ. ಚಿಕಿತ್ಸಾಲಯವು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಹೊಂದಿದೆ. ಜತೆಗೆ ಪೇಟೆಂಟ್ ಪಡೆದ ಉನ್ನತ-ಮಟ್ಟದ ಯಂತ್ರೋಪಕರಣಗಳನ್ನು ಒಳಗೊಂಡಿದೆ, ಸೌಂದರ್ಯಶಾಸ್ತ್ರದ ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವದರ್ಜೆಯ ತಜ್ಞರು ಇವುಗಳನ್ನು ನಿರ್ವಹಿಸುತ್ತಾರೆ. ಇದರಿಂದಾಗಿ ಗಮನಾರ್ಹ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗಿದೆ.
ಹೊಸ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಗೌರವಾನ್ವಿತ ಮುಖ್ಯ ಅತಿಥಿ ಹಾಗೂ ಬ್ರಾಂಡ್ ಮಾಲೀಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಶರಣ್ ವೇಲ್ ಜೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಫ್ರ್ಯಾಂಚೈಸ್ ಮಾಲೀಕರಾದ ಶ್ರೀಮತಿ ಭುವನಾ ಬಾಲಕೃಷ್ಣನ್ ಮತ್ತು ಕ್ಲಿನಿಕ್ನ ಇತರ ಸಿಬ್ಬಂದಿ ಭಾಗವಹಿಸಿದ್ದರು.
ಅಡ್ವಾನ್ಸ್ಡ್ ಗ್ರೋಹೇರ್ ಮತ್ತು ಗ್ಲೋಸ್ಕಿನ್ ಕ್ಲಿನಿಕ್ ತನ್ನ ಗುರಿಯನ್ನು ಸಾಧಿಸುತ್ತಿದೆ. ನಿಷ್ಕಳಂಕ ಟ್ರ್ಯಾಕ್ ರೆಕಾರ್ಡ್ ಮತ್ತು ಪರಿಪೂರ್ಣತೆಯ ಅನ್ವೇಷಣೆಯೊಂದಿಗೆ ಕೂದಲು ಮರು ಬೆಳವಣಿಗೆ ಮತ್ತು ಚರ್ಮದ ಚಿಕಿತ್ಸೆ ಸೇವೆಗಳ ಮೂಲಕ ಜನರ ಜೀವನವನ್ನು ಪರಿವರ್ತಿಸುವುದನ್ನು ಮುಂದುವರಿಸುತ್ತಿದೆ. .