ಬೆಂಗಳೂರು: ಜುಲೈ 10, 2023
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಬಿಬಿಎಂಪಿ ಪೌರ ಕಾರ್ಮಿಕರ ಮತ್ತು 4 ನೇ ದರ್ಜೆ ನೌಕರರ ಸಂಘ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಕೆಪಿಸಿಸಿ ಸಂಯೋಜಕರು ಹಾಗೂ ಪೌರ ಕಾರ್ಮಿಕರ ಹೋರಾಟಗಾರ ಎನ್. ವಿಜಯಕುಮಾರ್ ಸಿಂಹ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಅಧ್ಯಕ್ಷರಾದ ಎನ್. ನಾರಾಯಣ ಅವರು ಒತ್ತಾಯಿಸಿದರು.