ಮಾಜಿ ಸಿಎಂ HDK ನಮ್ಮ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ನಾವು ಉತ್ತರಿಸುವುದು ಒಂದೇ.,ಹುಚ್ಚಾಸ್ಪತ್ರೆಗೆ ಸೇರುವುದೂ ಒಂದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿ ಅವರ ಆರೋಪಗಳೇ ಹಾಸ್ಯಾಸ್ಪದ. ಯಾವುದೇ ಸರ್ಕಾರದಲ್ಲಿ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ಸಹಜ ಪ್ರಕ್ರಿಯೆ. ಇದು ಎಲ್ಲಾ ಸರ್ಕಾರಗಳಲ್ಲೂ ನಡೆಯುತ್ತದೆ. ಇದು ಎರಡು ಬಾರಿ ರಾಜ್ಯ ಆಳಿದವರಿಗೆ ಗೊತ್ತಿಲ್ಲವೇ?
HDK CM ಆಗಿದ್ದ ಅವಧಿಯಲ್ಲೂ ಅಧಿಕಾರಿಗಳ ವರ್ಗಾವಣೆಯಾಗಿತ್ತು. ಆಗ HDK ಅಧಿಕಾರಿಗಳ ವರ್ಗಾವಣೆಗೆ ಇಂತಿಷ್ಟು ರೇಟ್ ಎಂದು ಫಿಕ್ಸ್ ಮಾಡಿದ್ರಾ? ಯಾಕಂದರೆ ಕಳ್ಳನ ಗುಟ್ಟು ಕಳ್ಳನಿಗೆ ಗೊತ್ತು ಎಂಬಂತಿದೆ HDK ವರ್ತನೆ. ನಮ್ಮ ಸರ್ಕಾರದಲ್ಲಿ ವರ್ಗಾವಣೆ ಪಾರದರ್ಶಕವಾಗಿದೆ. ಆದರೆ ತಾನು ಕಳ್ಳ ಪರರ ನಂಬ ಎಂಬಂತೆ HDK ವರ್ತಿಸಿದರೆ ಏನು ಮಾಡಲು ಸಾಧ್ಯ?
ಸರ್ಕಾರದ ವಿರುದ್ಧದ ಆರೋಪಗಳಿಗೆ ಸಾಕ್ಷಿ ಇದೆ ಎಂದು HDK ಪೆನ್ ಡ್ರೈವ್ ಎಂಬ ಹಾವಿನ ಬುಟ್ಟಿ ತೋರಿಸುತ್ತಿದ್ದಾರೆ. ಅವರ ಬಳಿಯಿರುವ ಹಾವಿನ ಬುಟ್ಟಿಯಲ್ಲಿ ಯಾವ ಹಾವಿದೆ ಎಂದು ತಿಳಿದುಕೊಳ್ಳುವ ಕುತೂಹಲ ನಮಗೂ ಇದೆ. ಅವರ ಬುಟ್ಟಿಯಲ್ಲಿ ಹಾವಿದ್ದರೆ ಹೊರಗೆ ಬಿಡಲಿ. ಆಗ ಅದು ಕೇರೇ ಹಾವೋ,ಮಂಡಲದ ಹಾವೋ ಅಥವಾ ವಿಷ ಕಕ್ಕುವ ನಾಗರಹಾವೋ ತಿಳಿಯುತ್ತದೆ.