*"ಪ್ರೈಡ್ ಫೆಸ್ಟ್ 2023 LGBTQ++ ಸಮುದಾಯದ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ* *ಜಾಗೃತಿ ಮೂಡಿಸಲು ಉದ್ಯಮದ ನಾಯಕರನ್ನು ಜಂಟಿಯಾಗಿ ಒಂದುಗೂಡಿಸಲಿದೆ "*
ಬೆಂಗಳೂರು, ಜೂನ್ 28, 2023 - ಪ್ರೈಡ್ ಫೆಸ್ಟ್ 2023, P&G ಇಂಡಿಯಾ, ಗೋದ್ರೇಜ್ ಕ್ಯಾಪಿಟಲ್, ಸೆಂಕೋ ಗೋಲ್ಡ್ & ಡೈಮಂಡ್ ಮತ್ತು ಲಲಿತ್ ಸೂರಿ ಗ್ರೂಪ್ ಗಳ ಸಹಯೋಗದ ಪ್ರಯತ್ನವಾಗಿದ್ದು, LGBTQ++ ಸಮುದಾಯವು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ ಹಾಗೂ ಸಂಭಾವ್ಯ ಪರಿಹಾರಗಳ ಬಗ್ಗೆ ಚರ್ಚಿಸಲಿದೆ. ಈ ಅಭಿಯಾನದ ಭಾಗವಾಗಿ, LGBTQ++ ಸಮುದಾಯದ ಪ್ರತಿನಿಧಿಗಳು ಮತ್ತು ಮಾಧ್ಯಮಗಳ ನಡುವಿನ ಸಂವಾದಗಳನ್ನು ಸುಲಭಗೊಳಿಸಲು 'ಸಂವಾದ್' ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಂವಾದ್ ಪತ್ರಿಕಾ ಸಂವಾದವು ಬೆಂಗಳೂರಿನಲ್ಲಿ ನಡೆಯಿತು, ಇದರಲ್ಲಿ ಏಳು ಗೌರವಾನ್ವಿತ ಅತಿಥಿಗಳು ಪಾಲ್ಗೊಂಡಿದ್ದರು. ಈ ವ್ಯಕ್ತಿಗಳು ವೈವಿಧ್ಯಮಯ ಹಿನ್ನೆಲೆ ಮತ್ತು ದೃಷ್ಟಿಕೋನಗಳನ್ನು ಪ್ರತಿನಿಧಿಸಿದ್ದರು. LGBTQ++ ಹಕ್ಕುಗಳು ಮತ್ತು ಸೇರ್ಪಡೆಯ ಕುರಿತು ನಡೆಯುತ್ತಿರುವ ಸಂವಾದಕ್ಕೆ ದನಿಗೂಡಿಸಿದರು.
P&G ಇಂಡಿಯಾದ ಮುಖ್ಯ ಸಪ್ಲೈ ಚೈನ್ ಅಧಿಕಾರಿ ಅಂಕುರ್ ಭಗತ್ ಅವರು ಪ್ರೈಡ್ ಫೆಸ್ಟ್ 2023 ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. "P&G ನಲ್ಲಿ, ಸಮಾನತೆ ಮತ್ತು ಸೇರ್ಪಡೆ (ಈಕ್ವಾಲಿಟಿ ಹಾಗೂ ಇನ್ಕ್ಲೂಷನ್ E&I) ಗೆ ನಾವು ಪ್ರಥಮ ಆದ್ಯತೆ ನೀಡುತ್ತೇವೆ. ನಮ್ಮ ಸಂಸ್ಕೃತಿಯೇ ನಮಗೆ ಮೂಲಾಧಾರವಾಗಿದೆ; ಕಲಿಯಲು, ಬೆಳೆಯಲು, ಯಶಸ್ವಿಯಾಗಲು ಮತ್ತು ಅಭಿವೃದ್ಧಿ ಹೊಂದಲು ಸಮಾನ ಪ್ರವೇಶ ಮತ್ತು ಅವಕಾಶವನ್ನು ಎಲ್ಲರಿಗೂ ಒದಗಿಸಿದ್ದೇವೆ. ಇದಕ್ಕೆ ಅನುಗುಣವಾಗಿ, P&G ಒಳಗೆ ಮತ್ತು ಹೊರಗೆ ಸಮಾನ ಮತ್ತು ಅಂತರ್ಗತ ಜಗತ್ತನ್ನು ರಚಿಸುವತ್ತ ನಾವು ಗಮನಹರಿಸುತ್ತೇವೆ. ಕಂಪನಿಯೊಳಗೆ, ನಾವು ನಮ್ಮ ಅಂತರ್ಗತ ನೀತಿಗಳು ಮತ್ತು ಸಂಸ್ಕೃತಿಯ ಮೂಲಕ ಇದನ್ನು ಜೀವಂತಗೊಳಿಸುತ್ತೇವೆ, ಇದು ನಮ್ಮಲ್ಲಿ ಎಲ್ಲಾ ರೀತಿಯ ಜನರು ತಮ್ಮ ನಿಜವಾದ ಗುರುತಿನೊಂಧೀಗೆ ಪ್ರತಿದಿನ ಕೆಲಸದ ಸ್ಥಳಕ್ಕೆ ತೆರಳಲು ಅನುವು ಮಾಡಿಕೊಡುತ್ತದೆ. ಕಂಪನಿಯ ಹೊರಗೆ, ನಾವು ಸೇವೆ ಸಲ್ಲಿಸುವ ಸಮುದಾಯಗಳಲ್ಲಿ ಇದೇ ಸಿದ್ಧಾಂತವನ್ನು ಅಳವಡಿಸಲು ಪ್ರಯತ್ನಿಸುತ್ತೇವೆ. ಅಭಿಪ್ರಾಯಗಳು ರೂಪುಗೊಂಡಾಗ ಮತ್ತು ಸಿದ್ಧಾಂತಗಳು ಬಲಗೊಂಡಾಗ ಶಿಕ್ಷಣ ಸಂಸ್ಥೆಗಳು ಅಪೂರ್ವವಾದ ಸಾಧನೆಗಳಿಗೆ ಸಾಕ್ಷಿಯಾಗುತ್ತವೆ. ವಿದ್ಯಾರ್ಥಿಗಳನ್ನು ಮತ್ತು ಅವರ ಸುತ್ತಲಿನ ಇತರ ಮಂದಿಯನ್ನು ಸಂವೇದನಾಶೀಲಗೊಳಿಸಲು ಇದು ಸರಿಯಾದ ಕ್ರಮವಾಗಿದೆ, ಸಮಾಜವನ್ನು ಬೆಳೆಸಲು ಮತ್ತು ಸಮಾನಮನಸ್ಕರಿಗೆ ಸುರಕ್ಷಿತ ಸ್ಥಳಗಳನ್ನು ರಚಿಸುವ ಗುರಿಯನ್ನು ಹೊಂದಿದೆ. ಇದರೊಂದಿಗೆ, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಯನ್ನು ಸಂವೇದನಾಶೀಲಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ದೇಶಾದ್ಯಂತ ಪದವಿಪೂರ್ವ ಕಾಲೇಜುಗಳು ಮತ್ತು ಸ್ನಾತಕೋತ್ತರ ವಿಶ್ವವಿದ್ಯಾಲಯಗಳು ಸೇರಿದಂತೆ 50ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ನಾವು ShareThePride ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಇದರೊಂದಿಗೆ, ಕಂಪನಿಯು ಅಂತರ್ಗತ ಪ್ರದೇಶದ ಧನಾತ್ಮಕ ಗುರುತುಗಳನ್ನು ಸಂಯೋಜಿಸುವ ಪರಿಸರ ವ್ಯವಸ್ಥೆಯನ್ನು ವಿಕಸನಗೊಳಿಸುವ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ” ಎಂದು ಹೇಳಿದರು.
ಗೋದ್ರೇಜ್ ಕ್ಯಾಪಿಟಲ್ನ ಸಿಎಚ್ಆರ್ಒ ರೂಹಿ ಪಾಂಡೆ ಈ ಅಭಿಯಾನದ ಮಹತ್ವವನ್ನು ಎತ್ತಿ ತೋರಿಸಿದರು. “ಸಂಸ್ಥೆಗಳು ನಾವು ವಾಸಿಸುವ ಸಮಾಜದ ಸೂಕ್ಷ್ಮರೂಪಗಳಾಗಿವೆ ಮತ್ತು ಆದ್ದರಿಂದ ನಾವು ಮಾನವ ವೈವಿಧ್ಯತೆಯ ಸಂಪೂರ್ಣ ದೃಷ್ಟಿಕೋನವನ್ನು ಬದಲಿಸಬೇಕಾಗುತ್ತದೆ. ಇದು ಕೇವಲ ಕೆಲವು ದಿನಗಳಿಗಷ್ಟೇ ಸೀಮಿತವಲ್ಲ, ಯಾವುದೇ ಸಂಸ್ಥೆಗೆ ಕಾರ್ಯತಂತ್ರದ ಭಾಗವಾಗಬೇಕು. ಇದರಿಂದ ಮಾತ್ರ ಹೊಸತನದ ಪ್ರಯೋಗ ಸಾಧ್ಯವಾಗುತ್ತದೆ, ಸೃಜನಶೀಲತೆಗೆ ಉತ್ತೇಜನ ದೊರೆಯುತ್ತದೆ ಮತ್ತು ಒಟ್ಟಾರೆ ಸಾಂಸ್ಥಿಕ ಯಶಸ್ಸನ್ನು ಹೆಚ್ಚಿಸುತ್ತದೆ. ಈಗಾಗಲೇ ಮನಸ್ಸಿನಲ್ಲಿ ಕುಳಿತಿರುವ ನಿರ್ದಿಷ್ಟ ಸ್ಟೀರಿಯೋಟೈಪ್ ಗಳನ್ನು ದೂರಮಾಡುತ್ತದೆ. ಸುತ್ತಲಿನ ಪ್ರಪಂಚದ ಬಗೆಗಿನ ನಮ್ಮ ಸಾಮೂಹಿಕ ತಿಳುವಳಿಕೆಯನ್ನು ವಿಸ್ತರಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ನಿಜವಾದ ಆಂತರಿಕ ಕೆಲಸದ ವಾತಾವರಣವನ್ನು ನಿರ್ಮಾಣ ಮಾಡುವುದು ಎಂದರೆ ಬ್ಯಾನರ್ ಪೋಸ್ಟರ್ ಗಳನ್ನು ರಚಿಸಿ ಅಂಟಿಸುವುದಲ್ಲ. ಪೂರ್ವಾಗ್ರಹ ಅಥವಾ ತಾರತಮ್ಯದ ಭಯವಿಲ್ಲದೆ ಕೆಲಸ ಮಾಡುವ ಪರಿಸರವನ್ನು ಸೃಷ್ಟಿಸುವುದು. ಪ್ರತಿಯೊಬ್ಬರೂ ತಮ್ಮ ಅಧಿಕೃತತೆಯನ್ನು ಹೊಂದಿರುವ, ಸಂಸ್ಕೃತಿಯನ್ನು ಬೆಳೆಸುವ ಬದ್ಧತೆಯನ್ನು ಹೊಂದಿರಬೇಕು. ನಾವು ಪಕ್ಷಪಾತಗಳಿಂದ ದೂರವಿದ್ದು LGBTQ+ ವ್ಯಕ್ತಿಗಳ ಪ್ರಗತಿಗೆ ಅಡ್ಡಿಯಾಗಬಹುದಾದ ಅಡೆತಡೆಗಳನ್ನು ತೆಗೆದುಹಾಕಬೇಕು. ಗೋದ್ರೇಜ್ ಕ್ಯಾಪಿಟಲ್ನಲ್ಲಿ, ವೃತ್ತಿಪರ ಬೆಳವಣಿಗೆ ಮತ್ತು ಪ್ರಗತಿಗೆ ಸಮಾನ ಅವಕಾಶಗಳೊಂದಿಗೆ LGBTQ+ ಉದ್ಯೋಗಿಗಳನ್ನು ಬೆಳೆಸಲು ನಾವು ಪ್ರಯತ್ನಿಸುತ್ತೇವೆ. ಇಂಟರ್ನ್ಶಿಪ್ ಕಾರ್ಯಕ್ರಮಗಳು, ಸಾಮರ್ಥ್ಯ ನಿರ್ಮಾಣದ ಅಭಿಯಾನಗಳು, ಮಾರ್ಗದರ್ಶನ ಮತ್ತು ಉದ್ಯೋಗಿ ಸಂಪನ್ಮೂಲ ಗುಂಪುಗಳು ಸಮುದಾಯ ಮತ್ತು ಬೆಂಬಲದ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. LGBTQ+ ಹಕ್ಕುಗಳು ಮತ್ತು ಕೆಲಸದ ಸ್ಥಳವನ್ನು ಮೀರಿ ಸಮಾನತೆಯನ್ನು ಉತ್ತೇಜಿಸಲು ಸಂಸ್ಥೆಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ತಮ್ಮ ಪ್ರಭಾವ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ, ಕಂಪನಿಗಳು ವಿಶಾಲವಾದ ಸಾಮಾಜಿಕ ಪ್ರಗತಿಗೆ ಕೊಡುಗೆ ನೀಡಬಹುದು ಮತ್ತು ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡಬಹುದು. ಈ ಪ್ರಕ್ರಿಯೆ ಒಂದು ಬಾರಿಗೆ ಸೀಮಿತಗೊಳ್ಳುವುದಲ್ಲ. ಇದು ನಿರಂತರ ಕಲಿಕೆ ಮತ್ತು ಕ್ರಿಯೆಯ ಅಗತ್ಯವಿರುವ ಬದ್ಧತೆಯಾಗಿದೆ. ನಾವು ವೈವಿಧ್ಯತೆಯ ಚಾಂಪಿಯನ್ಗಳಾಗಿ ಒಟ್ಟಿಗೆ ನಿಲ್ಲೋಣ, LGBTQ+ ವ್ಯಕ್ತಿಗಳನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳೋಣ ಮತ್ತು ಆಚರಿಸೋಣ, ಇದರಿಂದ ವ್ಯತ್ಯಾಸಗಳ ಶ್ರೀಮಂತಿಕೆಯಲ್ಲಿ ನಾವು ಬಹಳ ಮೇಲ್ದರ್ಜೆಗೆ ಏರುತ್ತೇವೆ" ಎಂದು ಹೇಳಿದರು.
ಈ ಅಭಿಯಾನದ ಪ್ರಮುಖ ಪಾಲುದಾರರಾದ Senco Gold & Diamond, ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಸಂವಾದ್ ಪತ್ರಿಕಾ ಸಂವಾದದಲ್ಲಿ ಭಾಗವಹಿಸಲು ಸೆಂಕೋದ ಪ್ರತಿನಿಧಿಗೆ ಸಾಧ್ಯವಾಗದಿದ್ದರೂ, ಅವರು ತಮ್ಮ ಬೆಂಬಲವನ್ನು ತಿಳಿಸಿದರು, "ನಾವು ಏಕತೆ, ಸಮಾನತೆ ಮತ್ತು ಸ್ವೀಕಾರದ ಶಕ್ತಿಯನ್ನು ನಂಬುತ್ತೇವೆ. ಪ್ರೈಡ್ ಫೆಸ್ಟ್ 2023 ಈ ಮೌಲ್ಯಗಳನ್ನು ವರ್ಧಿಸಲು ಮತ್ತು ಹಕ್ಕುಗಳಿಗಾಗಿ ಪ್ರತಿಪಾದಿಸಲು ವೇದಿಕೆಯನ್ನು ಒದಗಿಸುತ್ತದೆ. ಮತ್ತು LGBTQ++ ಸಮುದಾಯದ ಯೋಗಕ್ಷೇಮವನ್ನು ವಿಚಾರಿಸುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.
ಪ್ರೈಡ್ ಫೆಸ್ಟ್ 2023, ಅದರ ವೈವಿಧ್ಯಮಯ ಸಹಯೋಗಿಗಳೊಂದಿಗೆ, ಧನಾತ್ಮಕ ಬದಲಾವಣೆಯನ್ನು ತರುವ ಮತ್ತು ಹೆಚ್ಚು ಮಂದಿ ಒಳಗೊಳ್ಳುವ ಸಮಾಜವನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಖ್ಯಾತ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ, ಪ್ರತಿಭಾವಂತ ಡ್ರ್ಯಾಗ್ ಕಲಾವಿದ ಜೀಶನ್, ಗೌರವಾನ್ವಿತ ಡ್ರ್ಯಾಗ್ ಕ್ವೀನ್ ಬೆಯೋನ್ಸ್, ಬೆಂಗಳೂರಿನ ಪ್ರಮುಖ ಪ್ರಮೋಟರ್ ಮಾಧವ್ ಕೊಠಾರಿ ಮತ್ತು ದಿ ಲಲಿತ್ ಅಶೋಕ್ ಬೆಂಗಳೂರಿನ ಮಾರ್ಕೆಟಿಂಗ್ ಮ್ಯಾನೇಜರ್ ದೀಪ್ತಿ ಕಪಿಲ್ ಅವರಂತಹ ಪ್ರಭಾವಿ ಮಂದಿಗಳನ್ನು ಒಟ್ಟುಗೂಡಿಸುವ ಮೂಲಕ ಈ ಕಾರ್ಯಕ್ರಮ ಬದಲಾವಣೆ ತರುವಲ್ಲಿ ಸಾಮೂಹಿಕ ಕ್ರಿಯೆಯ ಶಕ್ತಿಯನ್ನು ಪ್ರದರ್ಶಿಸುತ್ತದೆ.
ಪ್ರೈಡ್ ಫೆಸ್ಟ್ 2023 ಮತ್ತು ಸಂವಾದ್ ಪತ್ರಿಕಾ ಸಂವಾದದ ಮೂಲಕ, ವ್ಯಾಪಕ ಪ್ರೇಕ್ಷಕರನ್ನು ತಲುಪಲು ಮತ್ತು LGBTQ++ ಹಕ್ಕುಗಳು ಮತ್ತು ಸಮಸ್ಯೆಗಳ ಕುರಿತು ಮುಕ್ತ ಸಂಭಾಷಣೆಯಲ್ಲಿ ತೊಡಗಿಕೊಳ್ಳಲು ಸಂಘಟಕರು ಬಯಸುತ್ತಾರೆ. ಪತ್ರಿಕೆಗಳೊಂದಿಗೆ ತೊಡಗಿಸಿಕೊಳ್ಳುವ ಮೂಲಕ, ಅವರು ಜಾಗೃತಿ ಮೂಡಿಸಲು, ತಿಳುವಳಿಕೆಯನ್ನು ಹೆಚ್ಚಿಸಲು ಮತ್ತು ಅಧಿಕ ಮಂದಿ ಪಾಲ್ಗೊಳ್ಳುವಂತೆ ಮಾಡುವ ಗುರಿಯನ್ನು ಹೊಂದಿದ್ದಾರೆ.