ಒಡಿಶಾದ ಬಾಲಸೋರ್ ನಲ್ಲಿ ನಡೆದ ಭೀಕರ ರೈಲು ಅಪಘಾತದ 5 ದಿನಗಳ ಬಳಿಕ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮತ್ತೆ ಸಂಚಾರ ಆರಂಭಿಸಿತು. ಅಪಘಾತದ ನಂತರ ಪಶ್ಚಿಮ ಬಂಗಾಳದ ಶಾಲಿಮರ್ ರೈಲ್ವೆ ನಿಲ್ದಾಣದಿಂದ ತಮಿಳುನಾಡಿನ ಚೆನ್ನೈ ಗೆ ಪ್ರಯಾಣ ಬೆಳೆಸಿತು.
ಜೂನ್ 2 ರಂದು ನಡೆದ ಮೂರು ರೈಲುಗಳ ದುರ್ಘಟನೆಯಲ್ಲಿ 275 ಅಮಾಯಕರು ಸಾವಿಗೀಡಾಗಿದ್ದರು. 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.