ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕ ಪಾರಂಪರಿಕ ವೈದ್ಯರದೇ ಆದ ಸಂಘಟನೆಯಾಗಿದ್ದು, 2001 ಜನವರಿ 106ರಂದು ಶ್ರೀಕ್ಷೇತ್ರ ಸಿದ್ಧಗಂಗಾ ಮಠ, ತುಮಕೂರಿನಲ್ಲಿ ನಡೆದ 4ನೇ ಪಾರಂಪರಿಕ ವೈದ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಪಾರಂಪರಿಕ ವೈದ್ಯರೆಲ್ಲರ ಸಮಕ್ಷಮದಲ್ಲಿ ಚುನಾವಣೆ ಮೂಲಕ ಮೊಟ್ಟಮೊದಲ ತಾಲ್ಲೂಕು ಕಾರ್ಯಕಾರಿ ಸಮಿತಿ ಹಾಗೂ ರಾಜ್ಯ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಿದ ನಂತರ ಪ್ರತಿ 3 ವರ್ಷಗಳಿಗೊಮ್ಮೆ ಈ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿ ತಾಲ್ಲೂಕು ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗಳು ಅಸ್ತಿತ್ವಕ್ಕೆ ಬರುತ್ತವೆ.
ಕಳೆದ ಚುನಾವಣೆಗಳನ್ನು ಧಾರವಾಡದ ಕ್ರಿಯಾಶೀಲ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ್ ಮೈಗೂರ್ ಇವರ ಅಧ್ಯಕ್ಷತೆಯಲ್ಲಿನ ಚುನಾವಣಾ ಸಮಿತಿಯು ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿಕೊಟ್ಟಿದ್ದು, 2025 ರ ಚುನಾವಣಾ ಪ್ರಕ್ರಿಯೆಯನ್ನು ವನಲೋಕ ಪ್ರೋಗ್ರಾಮ್ ಡೈರೆಕ್ಟರ್ ಆದ ಶ್ರೀಮತಿ ಡಾ. ರೂಪಾ ಡಿ. ಇವರ ನೇತೃತ್ವದ ಸಮಿತಿ ನಡೆಸಲಿದ್ದು, ಈ ಸಮಿತಿಯಲ್ಲಿ ವೈದ್ಯ ಪರಿಷತ್‌ನ ಹಿರಿಯ ಸಂಸ್ಥಾಪಕರಾದ ಪ್ರೊ. ಜಿ. ಹರಿರಾಮಮೂರ್ತಿ, ಡಾ. ಸತ್ಯನಾರಾಯಣ ಭಟ್, ಡಾ. ಸಮದ್ ಕೊಟ್ಟೂರ್ ಮತ್ತು ಶ್ರೀ ರಮೇಶ್ ಎ. ಮಹೀಂದ್ರಕರ್ ಇವರುಗಳನ್ನು ಒಳಗೊಂಡಿದೆ.
ವೈದ್ಯ ಪರಿಷತ್ತಿನಲ್ಲಿ 4 ಸಾವಿರಕ್ಕೂ ಹೆಚ್ಚಿನ ಸದಸ್ಯರಿದ್ದು, ಪ್ರತಿ ತಾಲ್ಲೂಕಿನಿಂದ 11 ಜನರ ಕಾರ್ಯಕಾರಿ ಸಮಿತಿ ರಚನೆಯಾಗಬೇಕಾಗಿದೆ. ಆ 11 ಜನರನ್ನು ಆಯ್ಕೆ ಮಾಡಲು ಈ ದಿನ ಚುನಾವಣಾ ಪ್ರಕ್ರಿಯೆಗಳನ್ನು ಪ್ರಕಟಿಸುತ್ತಿದ್ದು, ಅಕ್ಟೋಬರ್ 15ರಿಂದ ಅಕ್ಟೋಬರ್ 30ರ ಸಂಜೆ 5 ಗಂಟೆಯೊಳಗೆ ಭರ್ತಿ ಮಾಡಿದ ನಾಮಪತ್ರಗಳನ್ನು ಚುನಾವಣಾ ಸಮಿತಿಯ ಅಧ್ಯಕ್ಷರ ಕಛೇರಿಗೆ ತಲುಪುವಂತೆ ಕಳಿಸಬೇಕು.
ನಂತರ ಅಕ್ಟೋಬರ್ 31 ರಿಂದ ನವೆಂಬರ್ 2ರವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನವೆಂಬರ್ 3ರಂದು ಅರ್ಹ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಲಿದ್ದು, ಮೊದಲ ಹಂತದ ಚುನಾವಣೆ ನವಂಬರ್ 21ರಂದು ನಡೆಯಲಿದೆ. ಹಂತ ಹಂತವಾಗಿ ನವಂಬರ್ 30ರೊಳಗೆ ತಾಲ್ಲೂಕು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಡಿಸೆಂಬರ್ 10 2025 ರೊಳಗೆ ತಾಲ್ಲೂಕು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ಡಿಸೆಂಬರ್ 15ರೊಳಗೆ ಜಿಲ್ಲಾ ಸಂಚಾಲಕರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ಡಿಸೆಂಬರ್ 30ರೊಳಗೆ ನೂತನ ರಾಜ್ಯ ಆಡಳಿತ ಮಂಡಳಿಯು ರಚನೆಯಾಗುವ ಮೂಲಕ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ವೈದ್ಯ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಇರಬೇಕಾದ ಅರ್ಹತೆಗಳು
ಪಾರಂಪರಿಕ ವೈದ್ಯರಾಗಿದ್ದು ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕ ಸಂಘದ ಸದಸ್ಯರಾಗಿರಬೇಕು
ಈ ಕೆಳಕಂಡವರು ವೈದ್ಯ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.
1. ಆಧುನಿಕ ಆಸ್ಪತ್ರೆಗಳಲ್ಲಿ ಉದ್ಯೋಗದಲ್ಲಿ ಇರಬಾರದು.
2. ಡಿ. ಫಾರ್ಮಸಿ, ಬಿ. ಫಾರ್ಮಸಿ, ಎಂ.ಬಿ.ಬಿ.ಎಸ್. ಬಿ.ಎ.ಎಂ.ಎಸ್. ಹೋಮಿಯೋಪತಿ, ಸಿದ್ಧ, ಯುನಾನಿ ಸೇರಿದಂತೆ ಯಾವುದೇ ವೈದ್ಯಕೀಯ ಶಿಕ್ಷಣ ಪಡೆದಿರಬಾರದು.
3. ಆಶಾ ಕಾರ್ಯಕರ್ತೆಯರು
4. ಶುಕ್ರೂಶಕರು
5. ಮೆಡಿಕಲ್ ಸ್ಟೋರ್ ನಡೆಸುವವರು
6. ಮೆಡಿಕಲ್ ಪ್ರತಿನಿಧಿಗಳು (ರೆಪ್ರೆಸೆಂಟಿಟಿವ್)
7. ಔಷಧಿ ಕಂಪನಿಗಳ ಏಜೆಂಟರ್‌ಗಳು
8. ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕ ಈ ಸಂಘದ ಸದಸ್ಯರಾಗಿದ್ದುಕೊಂಡೇ ಇನ್ನೊಂದು ವೈದ್ಯ ಪರಿಷತ್ತಿನಲ್ಲಿ ಸದಸ್ಯರಾಗಿರುವವರು ನಾಮಪತ್ರ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಮೇಲಿನ ಎಲ್ಲಾ ನಿಬಂಧನೆಗಳಿಗೆ ಒಳಪಟ್ಟ ಅರ್ಹ ವೈದ್ಯ ಪರಿಷತ್ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರಗಳನ್ನು ನಿಗದಿತ ಶುಲ್ಕ 150/- ರೂ.ಗಳನ್ನು ಸಂದಾಯ ಮಾಡಿ ಈ ಕೆಳಗಿನ ವಿಳಾಸದಲ್ಲಿ ನಾಮಪತ್ರ ಪಡೆಯಬಹುದು.
1. ಚುನಾವಣಾ ಸಮಿತಿಯ ಅಧ್ಯಕ್ಷರ ಕಛೇರಿ, ವನಲೋಕ, ವನವಿಕಾಸ ಕಟ್ಟಡ, 4ನೇ ಮಹಡಿ, 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು - 560003
2. ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕ, ನಂ. 16, ಟೆನ್ನಿಸ್ ಕೋರ್ಟ್ ಕಾಂಪ್ಲೆಕ್ಸ್, ಅಕ್ಕಮಹಾದೇವಿ ರಸ್ತೆ, ದಾವಣಗೆರೆ - 577002. ದೂರವಾಣಿ ಸಂಖ್ಯೆ : 9483492871
ನಿಗದಿತ ಅರ್ಜಿ ನಮೂನೆಯಲ್ಲಿ ಸೂಚಿಸಿರುವ ಎಲ್ಲಾ ದಾಖಲಾತಿಗಳೊಂದಿಗೆ ಅಕ್ಟೋಬರ್ 30 2025 ರ ಸಂಜೆ 5.00 ಗಂಟೆಯೊಳಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸತಕ್ಕದ್ದು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಡಾ. ರೂಪಾ ಡಿ., ಅಧ್ಯಕ್ಷರು, ವೈದ್ಯ ಪರಿಷತ್ ಚುನಾವಣಾ ಸಮಿತಿ, ವನಲೋಕ, ವನವಿಕಾಸ ಕಟ್ಟಡ, 4ನೇ ಮಹಡಿ, 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು 560003
ಉಪಸ್ಥಿತಿ :
ಡಾ. ರೂಪಾ ಡಿ.
ಅಧ್ಯಕ್ಷರು, ಚುನಾವಣಾ ಸಮಿತಿ
ಪ್ರೊ. ಜಿ. ಹರಿರಾಮಮೂರ್ತಿ
ಹಿರಿಯ ಸಂಸ್ಥಾಪಕರು ಹಾಗೂ ಸದಸ್ಯರು, ಚುನಾವಣಾ ಸಮಿತಿ
ಡಾ. ಸತ್ಯನಾರಾಯಣ ಭಟ್
ಹಿರಿಯ ಸಂಸ್ಥಾಪಕರು ಹಾಗೂ ಸದಸ್ಯರು, ಚುನಾವಣಾ ಸಮಿತಿ
ವೈದ್ಯ ಜಿ. ಮಹದೇವಯ್ಯ
ಅಧ್ಯಕ್ಷರು, ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕ
ವೈದ್ಯ ಕೆ. ವೀರಣ್ಣ
ಕಾರ್ಯದರ್ಶಿ, ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕ