ಬೆಂಗಳೂರು, ಅಕ್ಟೋಬರ್ 8, 2025: 

ಭಾರತದ ಗಾಳಿ ಶಕ್ತಿಯ ಕ್ಷೇತ್ರದ ಏಕೈಕ ಅಂತರರಾಷ್ಟ್ರೀಯ ವ್ಯಾಪಾರ ಮೇಳ ಮತ್ತು ಸಮ್ಮೇಳನವಾದ ವಿಂಡರ್ಜಿ ಇಂಡಿಯಾ 2025ರ ಏಳನೇ ಆವೃತ್ತಿ, ಅಕ್ಟೋಬರ್ 29ರಿಂದ 31ರವರೆಗೆ ಚೆನ್ನೈ ಟ್ರೇಡ್ ಸೆಂಟರ್‌ನಲ್ಲಿ ನಡೆಯಲಿದೆ.

ಭಾರತವು ಗಾಳಿ ಶಕ್ತಿ ಉತ್ಪಾದನೆಯಲ್ಲಿ ಭಾರೀ ಹೆಜ್ಜೆ ಹಾಕುತ್ತಿರುವ ಈ ಸಂದರ್ಭದಲ್ಲಿ, ಈ ಕಾರ್ಯಕ್ರಮವು ನವೀಕರಿಸಬಹುದಾದ ಶಕ್ತಿಯ ಭವಿಷ್ಯವನ್ನು ರೂಪಿಸಲು ಸಂಪರ್ಕ, ಸಹಯೋಗ ಮತ್ತು ಅವಕಾಶಗಳ ಅನನ್ಯ ವೇದಿಕೆಯಾಗಲಿದೆ.

ವಿಂಡರ್ಜಿ ಇಂಡಿಯಾ 2025 ಪ್ರಮುಖ ಬಿಸಿನೆಸ್-ಟು-ಬಿಸಿನೆಸ್ ವೇದಿಕೆಯಾಗಿದ್ದು, ನೀತಿನಿರ್ಣಾಯಕರು, ನಿಯಂತ್ರಣ ಪ್ರಾಧಿಕಾರಗಳು, ಅಂತರರಾಷ್ಟ್ರೀಯ ಮತ್ತು ದೇಶೀಯ ಪರಿಹಾರ ದಾರರು, ಹಾಗೂ ಕೈಗಾರಿಕಾ ನಾಯಕರನ್ನು ಒಂದೇ ವೇದಿಕೆಗೆ ತರಲಿದೆ. 20 ಕ್ಕೂ ಹೆಚ್ಚು ದೇಶಗಳ ಪ್ರದರ್ಶಕರು ಪಾಲ್ಗೊಳ್ಳಲಿದ್ದು, 15,000 ಕ್ಕೂ ಹೆಚ್ಚು ವೀಕ್ಷಕರ ಹಾಜರಾತಿ ನಿರೀಕ್ಷಿಸಲಾಗಿದೆ. ಡೆನ್ಮಾರ್ಕ್, ಜರ್ಮನಿ ಮತ್ತು ಸ್ಪೇನ್‌ನಂತಹ ಗಾಳಿ ಶಕ್ತಿ ದೈತ್ಯ ಸಂಸ್ಥೆಗಳ ಪೆವಿಲಿಯನ್‌ಗಳು ಕಾರ್ಯಕ್ರಮದ ಮೌಲ್ಯವನ್ನು ಹೆಚ್ಚಿಸಲಿವೆ.

ಪ್ರಾರಂಭಿಕ ಅಧಿವೇಶನಕ್ಕೆ ಹೊಸ ಮತ್ತು ನವೀಕರಿಸಬಹುದಾದ ಶಕ್ತಿಗಾಗಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರ ಸಹ ಸಚಿವರಾದ ಶ್ರೀ ಶ್ರೀಪಾದ್ ಯಸ್ಸೋ ನಾಯಕ್ ಅವರ ಸಾನ್ನಿಧ್ಯ ಲಭ್ಯವಾಗಲಿದೆ.