ಬೆಂಗಳೂರು, ಮಾರ್ಚ್ 28, 2025

ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್ ಅವರು 'ಜೈ ಭಜರಂಗಿ ಫಿಟ್ನೆಸ್ ಕ್ಲಬ್' ಉದ್ಘಾಟಿಸಿದರು.

ಸಂಪಂಗಿರಾಮನಗರದ ಬಿಬಿಎಂಪಿ ಕೇಂದ್ರದಲ್ಲಿ ನೂತನವಾಗಿ ಆರಂಭವಾಗಿರುವ 'ಜೈ ಭಜರಂಗಿ ಫಿಟ್ನೆಸ್ ಕ್ಲಬ್'ನಲ್ಲಿ ಅತ್ಯಾಧುನಿಕ ಫಿಟ್ನೆಸ್ ಉಪಕರಣಗಳಿವೆ. 

ಅತ್ಯಾಧುನಿಕ ಫಿಟ್ನೆಸ್ ಉಪಕರಣಗಳನ್ನು ಉಪಯೋಗಿಸಿಕೊಂಡು ಸಂಪಂಗಿರಾಮನಗರದ ಜನರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಶಾಸಕರಾದ ರಿಜ್ವಾನ್ ಅರ್ಷದ್ ಅವರು ಸಲಹೆ ನೀಡಿದರು. 

  ಈ ಸಂದರ್ಭದಲ್ಲಿ ಯುವ ಬಾಡಿಬಿಲ್ಡರ್ಸ್ ತಮ್ಮ ದೇಹದಾಡ್ಯ ಪ್ರದರ್ಶನ ಮಾಡಿದರು.