ಬೆಂಗಳೂರು, ಮಾರ್ಚ್ 25, 2025
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಎಲ್ಪಿಜಿ ಗ್ರಾಮೀಣ ವಿತರಕರ ಒಕ್ಕೂಟದ ಸದಸ್ಯರು 'ವ್ಯಾಪ್ತಿ ಮೀರಿ ಸಿಲಿಂಡರ್ ವಿತರಣೆ ಸ್ಥಗಿತ'ಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಗ್ಯಾಸ್ ಸಿಲಿಂಡರ್ ವಿತರಣೆ ನಿಯಮಗಳ ಕಟ್ಟು ನಿಟ್ಟಿನ ಪಾಲನೆ ಸೇರಿ ವಿವಿಧ ಬೇಡಿ ಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಎಲ್ಪಿಜಿ ಗ್ರಾಮೀಣ ವಿತರಕರ ಒಕ್ಕೂಟದ ಸದಸ್ಯರು ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಸಿಲಿಂಡರ್ ವಿತರಣೆ ಸಂಬಂಧಿಸಿ ಏಕೀ ಕೃತ ಮಾರ್ಗಸೂಚಿ ಪ್ರಕಾರ, 15 ಕಿ.ಮೀ. ವ್ಯಾಪ್ತಿ ಮೀರಿ ಸಿಲಿಂಡರ್ ವಿತರಣೆಯನ್ನು ತಕ್ಷಣ ತಡೆಯಬೇಕು. ಕಟ್ಟುನಿಟ್ಟಿನ ನಿಯ ಮಗಳ ಪಾಲನೆಗಾಗಿ ಈ ಕುರಿತು ಸುತ್ತೋಲೆ ಹೊರಡಿಸಬೇಕು. ಗ್ರಾಮೀಣಪ್ರದೇಶದಲ್ಲಿ ಸೇವೆ ನೀಡುತ್ತಿರುವ ಹಳೆಯ ವಿತರಕರ ಕಾರ್ಯಕ್ಷೇತ್ರ ವ್ಯಾಪ್ತಿಗೆ ಬಂದು ನಿಯಮ ಗಳನ್ನು ಉಲ್ಲಂಘಿಸಿ ಸಿಲಿಂಡರ್ ವಿತರಿಸುವ ನಮಗೆ ವ್ಯಾಪಾರ ರೇಡಿಯಸ್ಗೆ ಸಹಾಯ ಮಾಡಿ ವಿತರಕರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಬೇಕು. ಗ್ರಾಮೀಣ ವಿತರ ಕರು ಮಾತ್ರ ನಿಯಮಗಳನ್ನು ಪಾಲಿಸಬೇಕು ಎಂದು ಒತ್ತಡ ಹೇರುವ ಕಂಪನಿಗಳು ತಮ್ಮ ಮಲತಾಯಿ ಧೋರಣೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.