ಬೆಂಗಳೂರು, 20, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ' ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ರಾಜ್ಯ ಸರ್ಕಾರವು ಈ ಕೂಡಲೇ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕೆಂದು 'ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ' ದ ಪದಾಧಿಕಾರಿಗಳು ಒತ್ತಾಯಿಸಿದರು.
ದಿನಾಂಕ 19/032025 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ವೇದಿಕೆಗೆ ಆಗಮಿಸಿದ ಸನ್ಮಾನ್ಯ ಸಚಿವರಾದ ಆರ್ ಬಿ ತಿಮ್ಮಪೂರ್ ರವರನ್ನು ನೆರೆದಿರುವ ಜನಸಮುದಾಯ ಹಾಗೂ ಸಂಘಟಕರು ವಿರೋಧಿಸಿದರು ಮುಖ್ಯಮಂತ್ರಿ ಅಥವಾ ಸಮಾಜ ಕಲ್ಯಾಣ ಸಚಿವರು ವೇದಿಕೆಗೆ ಬರುವಂತೆ ಪಟ್ಟು ಹಿಡಿಯಲಾಯಿತು. ನಂತರ ಮಾತನಾಡಿದ ಸನ್ಮಾನ್ಯ ಸಚಿವರಾದ ಆರ್ ಬಿ ತಿಮ್ಮಾಪುರವರು ಇಂದು ಸಾಯಂಕಾಲ 5:00 ಗಂಟೆಗೆ ಮಾನ್ಯ ಮುಖ್ಯಮಂತ್ರಿ ಅವರ ಕೊಠಡಿಯಲ್ಲಿ ಸಭೆಯ ವ್ಯವಸ್ಥೆ ಮಾಡಿದರು.
ವಿಧಾನಸೌಧದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸಮಾಜಕಲ್ಯಾಣ ಸಚಿವರಾದ ಹೆಚ್ ಸಿ ಮಹದೇವಪ್ಪ ಹಿರಿಯ ಸಚಿವರಾದ ಕೆ.ಎಚ್ ಮುನಿಯಪ್ಪ ಹಾಗೂ ಇನ್ನೊಬ್ಬ ಸಚಿವರಾದ ಆರ್ ಬಿ ತಿಮ್ಮಾಪುರ ಸರ್ ಮುಖಂಡದೊಂದಿಗೆ ಸಭೆ ನಡೆಸಿದ ಮಾನ್ಯ ಮುಖ್ಯಮಂತ್ರಿ ಅವರು ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಎಚ್ ಸಿ ಮಹದೇವಪ್ಪ ರವರು ಯಾವುದೇ ಕಾರಣಕ್ಕೆ ಹೊಸ ನೇಮಕಾತಿ ಮಾಡುವುದಿಲ್ಲ ಮತ್ತು ಬ್ಯಾಕ್ಗಗು ಹುದ್ದೆಯನ್ನು ತುಂಬಿಕೊಳ್ಳುವುದಿಲ್ಲ ನ್ಯಾಯಾಲಯದಿಂದ ಕ್ರಮ ಕೈಗೊಳ್ಳಲು ಆದೇಶ ಬಂದಿರುವುದರಿಂದ ಕೇವಲ ಹುದ್ದೆಗಳನ್ನು ಲೆಕ್ಕ ಹಾಕುವ ದೃಷ್ಟಿಯಿಂದ ಸಮಿತಿಗಳನ್ನು ಮಾಡಲಾಗಿದೆ ಎಂದು ವಿವರಿಸಿದರು ನಂತರ ಸನ್ಮಾನ್ಯ ಮುಖ್ಯಮಂತ್ರಿಗಳು ಮಾತನಾಡಿ ಒಳಮೀಸಲಾತಿ ವರ್ಗೀಕರಣಕ್ಕೆ ನಾವು ಸಂಪೂರ್ಣ ಭದ್ಧರಾಗಿದ್ದು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ವರದಿ ನೀಡಲು ಇರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ಯಾವುದೇ ರೀತಿಯ ಸೌಕರ್ಯಗಳನ್ನು ಕೇಳಿದರು ಕೊಡಲು ಸಿದ್ಧವಾಗಿದ್ದೇವೆ ಅವರೊಂದಿಗೆ ಚರ್ಚಿಸಿ ನಾಳೆ ವರದಿ ಕೊಟ್ಟರೆ ನಾನು ಮಾರನೇ ದಿನ ಅದನ್ನು ಜಾರಿ ಮಾಡಲು ಬದ್ಧನಾಗಿದ್ದೇನೆ ಇದೇ ವಿಷಯವಾಗಿ ಮಾತನಾಡಲು ನ್ಯಾಯಮೂರ್ತಿ ನಾಗಮೋಹನದಾಸ ಅವರನ್ನು ದಿನಾಂಕ 22.03.2025 ರಂದು ಸಾಯಂಕಾಲ ನನ್ನನ್ನು ಭೇಟಿಯಾಗಲು ಸಮಯ ನಿಗದಿ ಮಾಡಿದ್ದೇನೆ ದಿನಾಂಕ 23.03.2025 ರಂದು ಸಂಘಟಕರನ್ನು ಕರೆದು ವಿಷಯ ಸ್ಪಷ್ಟಪಡುವುದಾಗಿ ಒಳ ಮೀಸಲಾತಿ ಜಾರಿಗಾಗಿ ವಿಳಂಬ ಮಾಡುವುದಿಲ್ಲ ಎಂದು ತಿಳಿಸಿದರು.
ಒಂದು ಗಂಟೆಕಾಲ ನಡೆದ ಈ ಸಭೆಯಲ್ಲಿ ಎ ಐ ಬಿ ಎಸ್ ಪಿ ರಾಜ್ಯಾಧ್ಯಕ್ಷರಾದ ಶ್ರೀ ಮಾರಸಂದ್ರ ಮುನಿಯಪ್ಪನವರು ಆರ್ ಪಿ ಬಿ ಬಿ ಮತ್ತು ಡಿಎಸ್‌ಎಸ್ ಎನ್ ಮೂರ್ತಿ ಸ್ಥಾಪಿತ ಡಾಕ್ಟರ್ ಎಸ್ ಮೂರ್ತಿಯವರು ಮಾದಿಗ ಮೀಸಲಾತಿ ಹೋರಾಟ ಸಮಿತಿ ಸಂಸ್ಥಾಪಕ ಎಂ ಆರ್ ಎಚ್ ಎಸ್ ರಾಜ್ಯ ಗೌರವಾಧ್ಯಕ್ಷರಾದ ಕೇಶವಮೂರ್ತಿಯವರು ರಾಜ್ಯಾಧ್ಯಕ್ಷರಾದ ಶಿವರಾಯ ಅಕ್ಕರಿಕೆಯವರು ಮಾದಿಗ ದಂಡೋರದ ಸಂಸ್ಥಾಪಕರಾದ ರಾಯಚೂರಿನ ಜೆ ಬಿ ರಾಜುರವರು ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ರಾಜ್ಯಾಧ್ಯಕ್ಷರಾದ ಶಿವಮೊಗ್ಗ ಗುರುಮೂರ್ತಿಯವರು ರಾಜ್ಯ ಸಂಘಟನಾ ಸಂಚಾಲಕರಾದ ಹನುಮಂತಪ್ಪ ಕಾಕರಗಲ್ ರವರು ವಿಶ್ವ ಒಳಮೀಸಲಾತಿ ಜಾರಿಗಾಗಿ ಆದಿ ಜಾಂಬವ ಮಹಾಸಭಾ ರಾಜ್ಯಾಧ್ಯಕ್ಷರಾದ ಡಾಕ್ಟರ್ ಭೀಮಪ್ಪನವರು ಕರ್ನಾಟಕ ಭೋಜನ ಚಳುವಳಿಯ ರಾಜ್ಯಾಧ್ಯಕ್ಷರಾದ ಕನಕೇನಹಳ್ಳಿ ಕೃಷ್ಣಪ್ಪನವರುಕರ್ನಾಟಕ ಮಾದಿಗ ದಂಡೋರ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷರಾದ ಎಮ್ ಸಿ ಶ್ರೀನಿವಾಸರವರು ಅಖಿಲ ಭಾರತ ಮಾದಿಗ ದಂಡೋರ ರಾಜ್ಯಾಧ್ಯಕ್ಷರಾದ ಹುಸೇನಪ್ಪ ಸ್ವಾಮಿಯವರು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಸಮುದಾಯದ ರಾಜ್ಯಾಧ್ಯಕ್ಷರಾದ ಹನುಮಂತಪ್ಪನವರು ರಾಜ್ಯದಕ್ಕಲಿಗರ ಸಂಘದ ರಾಜ್ಯಾಧ್ಯಕ್ಷರಾದ ಶಾಂತರಾಜ್ ರವರು ಸುಡುಗಾಡು ಸಿದ್ದ ಸಮುದಾಯದ ರಾಜ್ಯಾಧ್ಯಕ್ಷರಾದ ಗೋವಿಂದರಾಜರವರು ಅನೇಕ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಕೆಳಕಂಡಂತೆ ಹಕ್ಕೋತ್ತಾಯಗಳನ್ನ ಮಂಡಿಸಲಾಯಿತು.
ಹಕ್ಕೋತ್ತಾಯಗಳು
• ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸರ್ಕಾರದಲ್ಲಿ ಲಭ್ಯವಿರುವ ದತ್ತಾಂಶಗಳನ್ನು ಪರಿಗಣಿಸಿ ವಿಳಂಭ ನೀತಿ ಅನುಸರಿಸದೆ ರಾಜ್ಯ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಬೇಕು.