ಬೆಂಗಳೂರು, ಮಾರ್ಚ್ 19, 2025 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಎಲೆ ಶ್ರೀನಿವಾಸ್ ಅವರು ಮಾತನಾಡಿದರು.

ಬೆಂಗಳೂರಿನ ಕೆ.ಆ‌ರ್.ಪುರ ಸಂತೆ ಸುಂಕ ವಸೂಲಾತಿಯಲ್ಲಿ ಪ್ರತಿ ತಿಂಗಳು ಸುಮಾರು ₹20 ಲಕ್ಷದಷ್ಟು ಅವ್ಯವಹಾರ ನಡೆಯುತ್ತಿದೆ ಎಂದು ಎಲೆ ಶ್ರೀನಿವಾಸ್ ಅವರು ಆರೋಪಿಸಿದರು. 

ಎಲ್ ಶ್ರೀನಿವಾಸ್‌ ಅಧ್ಯಕ್ಷರು, ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟ (ರಿ) ಆದ ನಾನು ತಮ್ಮಲ್ಲಿ ಕೋರಿಕೊಳ್ಳುವುದೇನೆಂದರೆ ಕೆ.ಆರ್ ಪುರದ ಇತಿಹಾಸ ಪ್ರಸಿದ್ಧ ಸಂತೆಯಲ್ಲಿ ಈಗಾಗಲೇ 1-14 ಗುಂಟೆ ಪ್ರದೇಶಕ್ಕೆ ಸುಂಕ ವಸೂಲಾತಿ ಟೆಂಡರ್ ಕರೆದಿದ್ದು ಪ್ರತಿ ತಿಂಗಳು 9,81700/-ಆಗಿರುತ್ತದೆ.

ಆದರೆ ಟೆಂಡರ್ ನ 1.14 ಗುಂಟೆಗೆ ಸೀಮಿತ ಇದ್ದರು ಅದಕ್ಕಿಂತ ಸರಿಸುಮಾರು ನಾಲ್ಕು ಹೆಚ್ಚುವರಿ ಪ್ರದೇಶದಲ್ಲಿ ಅಕ್ರಮವಾಗಿ ಸುಂಕ ವಸೂಲಾತಿ ಮಾಡುತ್ತಿದ್ದು ಈ ಅಕ್ರಮ ಹಣವನ್ನು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಅಧಿಕಾರಿಗಳು ಟೆಂಡ‌ರ್ ದಾರರು ಹಂಚಿಕೊಂಡು ಸರ್ಕಾರದ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದು ಸದರಿ ಅಕ್ರಮದ ಬಗ್ಗೆ ಸರಣಿ ಹೋರಾಟಗಳನ್ನು ಮಾಡಲು ಸಂಘಟನೆ ಸಿದ್ಧವಾಗಿದೆ. ಕೆ.ಆರ್ ಪುರಂ ಸಂತೆಯಿಂದ ಗೋಣಿ ಚೀಲ ದರಿಸಿ ಕಾಲನಡುಗೆ ಮೂಲಕ (4 ಜನ ಮಾತ್ರ) ಸದರಿ ಪ್ರದೇಶಕ್ಕೆ ಕೆ ಆರ್ ಪುರ ಸಂತೆಯಿಂದ ಕಾಲು ನಡಿಗೆ ಮೂಲಕ ತೆರಳಿ ಮನವಿ ಪತ್ರವನ್ನು ಸಲ್ಲಿಸುವುದು.

ಸಮಯ: ಪ್ರತಿ ದಿನ ಬೆಳಿಗೆ 8 ಗಂಟೆಯಿಂದ ಪಾದಯಾತ್ರೆ ಆರಂಬಿಸಲಾಗುವುದು.

1) ದಿನಾಂಕ: 20-03-2025 ಗುರುವಾರದಂದು ವಲಯ ಆಯುಕ್ತರು ಬಿ ಬಿ ಎಂ ಪಿ ಮಹದೇವಪುರ.

2) ದಿನಾಂಕ: 21-03-2025 ಶುಕ್ರವಾರದಂದು ಆಯುಕ್ತರು ಬಿ ಬಿ ಎಂ ಪಿ ಪ್ರಧಾನ ಕಛೇರಿ, ಬೆಂಗಳೂರು.