ಬೆಂಗಳೂರು, ಮಾರ್ಚ್ 19, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ-ಸಂಸ್ಥೆಗಳ ಮಹಾಒಕ್ಕೂಟ' ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 'ಪ್ರತೀ ಕುಟುಂಬದ ಆರ್ಥಿಕ ಸ್ಥಿತಿಗತಿಯೇ ವರ್ಗಿಕರಣ' ನಂತರ ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು. 

ಒಳಮೀಸಲಾತಿ: ಪರಿಶಿಷ್ಟರ ಮಹಾಒಕ್ಕೂಟ ಆಗ್ರಹ 'ಪ್ರತೀ ಕುಟುಂಬದ ಆರ್ಥಿಕ ಸ್ಥಿತಿಗತಿಯೇ ವರ್ಗಿಕರಣಕ್ಕೆ ಮಾನದಂಡ ಆಗಲಿ'

ಬೆಂಗಳೂರು: ಕರ್ನಾಟಕ ರಾಜ್ಯಕ್ಕಾಗಿ ಅಧಿಸೂಚಿತ ಎಲ್ಲ 101 ಪರಿಶಿಷ್ಟ ಜಾತಿಗಳಲ್ಲಿನ ಪ್ರತಿ ಜಾತಿಯ ಪ್ರತಿ ವ್ಯಕ್ತಿಗೆ, ನಮ್ಮ ಸಂವಿಧಾನದ ಆಶಯದಂತೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಖಾತರಿ ಮಾಡಲು, ಆತನ ಕುಟುಂಬದ ಆರ್ಥಿಕ ಸ್ಥಿತಿಗತಿ ಆಧಾರದಲ್ಲೇ ಒಳಮೀಸಲಾತಿ ವರ್ಗಿಕರಣಕ್ಕೆ ಸೂಕ್ತ ಮಾನದಂಡಗಳನ್ನು ರೂಪಿಸಬೇಕು ಎಂದು ಮಂಗಳೂರು ಮೂಲದ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾಒಕ್ಕೂಟದ ಆಗ್ರಹ

ಪಡಿಸುತ್ತದೆ.

ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಅಗತ್ಯವಾದ ವರ್ಗೀಕರಣದ ಕರಡು ಮಾದರಿಯೊಂದನ್ನು ಮಹಾಒಕ್ಕೂಟವು ನ್ಯಾ. ಹೆಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗಕ್ಕೆ ಈಗಾಗಲೇ ಸಕಾಲದಲ್ಲಿ ಸಲ್ಲಿಸಿದೆ.

ಕರ್ನಾಟಕ ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳ ಪ್ರತಿ ಸದಸ್ಯರಿಗೆ ಸಂವಿಧಾನದ ವಿಧಿ 15(4) ಮತ್ತು 16(4)ರ ಅನ್ವಯ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಸಮಾನ ಅವಕಾಶಗಳನ್ನು ಖಾತರಿ ಪಡಿಸಲು ಉದ್ದೇಶಿಸಲಾಗಿರುವ ಒಳ ಮೀಸಲಾತಿ ನೀತಿಗೆ ಅಗತ್ಯವಾದ ನ್ಯಾಯೋಚಿತವಾದ ವರ್ಗಿಕರಣವನ್ನು ಈ 101 ಜಾತಿಗಳಿಗೆ ಸೇರಿರುವ ಪ್ರತಿಯೊಬ್ಬರ ಕುಟುಂಬದ ಆರ್ಥಿಕ ಸ್ಥಿತಿಗತಿ / ವಾರ್ಷಿಕ ಆದಾಯದ ಆಧಾರದ ಮಾನದಂಡದಲ್ಲಿ ಮಾಡಬೇಕೇ ಹೊರತು, ಜಾತೀಯ ನೆಲೆಗಟ್ಟಿನಲ್ಲಿ ಅಲ್ಲ ಜಾತಿ ನೆಲೆಗಟ್ಟಿನಲ್ಲಿ. ಜನ ಸಂಖ್ಯೆ ಅನುಗುಣವಾಗಿ ವರ್ಗೀಕರಣ ಮಾಡಿದಲ್ಲಿ ಈ ಜಾತಿಗಲ್ಲಿರುವ ಬಲಾಡ್ಯರಿಗೆ ಹೆಚ್ಚಿನ ಲಾಭ ವಾಗುತ್ತದೆ ಮಾತ್ರವಲ್ಲ, ಸಣ್ಣ ಪುಟ್ಟ ಜಾತಿಗಳಿಗೆ ಸೇರಿರುವ ಪ್ರತಿಭಾವಂತರು ಸಂಪೂರ್ಣವಾಗಿ ಅವಕಾಶ ವಂಚಿತರಾಗುತ್ತಾರೆ. ಆದರೆ ಇದೇ ವೇಳೆ ಈ ನೀತಿ ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿಗಳ ಒಳಗೆ ಇರುವ ಪ್ರಬಲರನ್ನು ಮೀಸಲಾತಿ ನೀತಿಯಿಂದಲೇ ಹೊರಗಿಡುವ ಕೆನೆ ಪದರ ನೀತಿಯೂ ಆಗಬಾರದು. ಇದು ಎಲ್ಲ ಪರಿಶಿಷ್ಟ ಜಾತಿಗಳಿಗೆ ಸೇರಿದ ಎಲ್ಲ ವ್ಯಕ್ತಿಗಳನ್ನು ಒಳಗೊಳ್ಳುವಂತಿರಬೇಕು ಎಂಬುದು ನಮ್ಮ ಖಚಿತ ನಿಲುವು

ರಾಜ್ಯದ 101 ಪರಿಶಿಷ್ಟ ಜಾತಿಗಳ ಒಳಗೆ ಒಳಮೀಸಲಾತಿ ಕಲ್ಪಿಸಲು, ಅಗತ್ಯ ಶಿಫಾರಸ್ಸುಗಳನ್ನು ಮಾಡಲು ರಚಿಸಲಾಗಿರುವ ನ್ಯಾಯಮೂರ್ತಿ ಹೆಚ್ ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗಕ್ಕೆ ಬರೆದಿರುವ ಸುಧೀರ್ಘ ಪತ್ರದಲ್ಲಿ, ಈ ವಿಷಯವನ್ನು ಸ್ಪಷ್ಟ ಪಡಿಸಿರುವ ಮಹಾಒಕ್ಕೂಟವು. ಈಗಾಗಲೇ ಜಾತೀಯ ನೆಲೆಗಟ್ಟಿನಲ್ಲಿ ನಿಂತ ಆಸ್ಪೃಶ್ಯತೆ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯ ಆಧಾರದಲ್ಲೇ ಸಂವಿಧಾನದ ವಿಧಿ 341ರ ಅಡಿಯಲ್ಲಿ ಕರ್ನಾಟಕ ರಾಜ್ಯಕ್ಕಾಗಿ 101 ಜಾತಿಗಳನ್ನು ಪರಿಶಿಷ್ಟ ಜಾತಿಗಳು ಎಂಬ ಹೆಸರಿನಲ್ಲಿ ಪ್ರವರ್ಗ ರಚಿಸಿ ಅಧಿಸೂಚಿಸಲಾಗಿದೆ. ಈ 101 ಜಾತಿಗಳಿಗೆ ಸೇರಿದ ಪ್ರತಿ ವ್ಯಕ್ತಿಗೆ ಸಂವಿಧಾನದ ವಿಧಿ 14ರಲ್ಲಿ ಪ್ರತಿಪಾದಿಸಲಾದ ಸಮಾನತೆಯ ತತ್ವಕ್ಕೆ ಚ್ಯುತಿ ಬಾರದಂತೆ, ವಿಧಿ 15(1)ರಲ್ಲಿ ಸ್ಪಷ್ಟ ಪಡಿಸಿರುವಂತೆ ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯ ಇಲ್ಲದಂತೆ, ವಿಧಿ 15(4)ರಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆಯಲ್ಲಿ ಮೀಸಲಾತಿ ಕಲ್ಪಿಸಲು ಮತ್ತು ಸಂವಿಧಾನದ ವಿಧಿ 16(1)ರಲ್ಲಿ ಎಲ್ಲಾ ಪ್ರಜೆಗಳಿಗೆ ಸಾರ್ವಜನಿಕ ಸೇವೆಗಳಲ್ಲಿ ಸಮಾನ ಅವಕಾಶವನ್ನು ಖಾತರಿ ಮಾಡುವ ಆಶಯಕ್ಕೆ ಚ್ಯುತಿ ಬಾರದಂತೆ, ವಿಧಿ 16(4)ರಲ್ಲಿ ನ್ಯಾಯೋಚಿತ ರೀತಿಯಲ್ಲಿ ಮೀಸಲಾತಿ ಕಲ್ಪಿಸಬೇಕಾದರೆ ಒಳಮೀಸಲಾತಿ ವರ್ಗಿಕರಣವು ಕುಟುಂಬದ ಆರ್ಥಿಕ ಸ್ಥಿತಿಗತಿ / ವಾರ್ಷಿಕ ಆದಾಯದ ನೆಲೆಗಟ್ಟಿನಲ್ಲಿಯೇ ನಡೆಯಬೇಕು ಎಂಬುದು ಮಹಾಒಕ್ಕೂಟದ ಪ್ರತಿಪಾದನೆ.

ಮಾಧುಸ್ವಾಮಿ ಶಿಫಾರಸ್ಸು ತಿರಸ್ಕರಿಸಿ:

ಆದ್ದರಿಂದಲೇ 101 ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಲ್ಲಿ, ಒಂದನೇ ಗುಂಪಿನಲ್ಲಿ ನಾಲ್ಕು ಜಾತಿಗಳಿಗೆ 6% ಮೀಸಲಾತಿ, ಎರಡನೇ ಗುಂಪಿನಲ್ಲಿ ನಾಲ್ಕು ಜಾತಿಗಳಿಗೆ 5.5% ಮೀಸಲಾತಿ, ಮೂರನೇ ಗುಂಪಿನಲ್ಲಿ 4 ಜಾತಿಗಳಿಗೆ 4.5% ಮೀಸಲಾತಿ ಮತ್ತು 89 ಸಣ್ಣ ಪುಟ್ಟ ಜಾತಿಗಳಿಗೆ 01% ಮೀಸಲಾತಿ, ಹೀಗೆ ಅತ್ಯಂತ ಅವೈಜ್ಞಾನಿಕವಾಗಿ ವರ್ಗಿಕರಣ ಮಾಡಿ, ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾಗಿ ಭಾರತ ಸರಕಾರಕ್ಕೆ ಶಿಫಾರಸ್ಸು ಮಾಡಿರುವ 2023ರಲ್ಲಿ ಆಗಿನ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿಯ ಶಿಫಾರಸ್ಸುಗಳನ್ನು ನ್ಯಾ. ಹೆಚ್ ಎನ್ ನಾಗಮೋಹನ್ ದಾಸ್ ವಿಚಾರಣಾ ಆಯೋಗ ತಿರಸ್ಕರಿಸಬೇಕು ಎಂಬುದು ನಮ್ಮ ಆಗ್ರಹ.

ಆಯೋಗವೇ ಹೊಸತಾಗಿ ಡೇಟಾ ಸಂಗ್ರಹಿಸಲಿ

ಆಗಸ್ಟ್ 1, 2024ರಂದು ಸುಪ್ರೀಂ ಕೋರ್ಟ್ನ ಏಳು ಸದಸ್ಯರ ಪೀಠ ನೀಡಿದ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಒಳಗೆ ಒಳಮೀಸಲಾತಿ ನೀತಿ ರೂಪಿಸಲು ಪ್ರಸಕ್ತ

ಇರುವ ವಾಸ್ತವ ಸಾಮಾಜಿಕ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅಧಿಕೃತ ದತ್ತಾಮ (Empirical Data) ಅತ್ಯಗತ್ಯ. ಆದರೆ, ಕರ್ನಾಟಕದಲ್ಲಿ ಪ್ರಸಕ್ತ ಅಂತಹ ಡೇಟಾವೇ

ಲಭ್ಯ ಇಲ್ಲ.

2001ರ ಜನಗಣತಿ ಆಧಾರವಾಗಿಟ್ಟು 2005ರ ನಂತರ ನಡೆಸಲಾದ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು 'ಅದು ಅಪ್ರಸ್ತುತ' ಎಂದು ಜೆ ಸಿ ಮಾಧುಸ್ವಾಮಿ ನೇತೃತ್ವದ ಸಂಪುಟ ಉಪಸಮಿತಿ 2023ರಲ್ಲೇ ತಿರಸ್ಕರಿಸಿದೆ. ಆ ಶಿಫಾರಸ್ಸನ್ನು ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಒಪ್ಪಿ, ತನ್ನದೇ ರೀತಿಯಲ್ಲಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.

ತದನಂತರ 2015ರಲ್ಲಿ ಆಗಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜ್ ನೇತೃತ್ವದಲ್ಲಿ ಮತ್ತು ನಂತರ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಸಿದ್ಧಪಡಿಸಿ ಸಲ್ಲಿಸಲಾದ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಯನ್ನು ರಾಜ್ಯ ಸರಕಾರ ಇನ್ನೂ ಅಂಗೀಕರಿಸಿಲ್ಲ.