ಬೆಂಗಳೂರು, ಮಾರ್ಚ್ 15, 2025 'ಭೂಮಾಫಿಯಾ - ನಡೆಸುವ ಉದ್ದೇಶದಿಂದಲೇ ಗ್ರೇಟರ್ ಬೆಂಗಳೂರು ಮಾಸೂಧೆ ಮಾಡಲು ಹೊರಟಿದೆ' ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷರಾದ ಎಚ್.ಎಂ.ರಮೇಶ್‌ಗೌಡ ಅವರು ಆರೋಪಿಸಿದರು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಗ್ರೇಟರ್ ಬೆಂಗಳೂರು ಮಸೂಧೆ' ವಿರೋಧಿಸಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಿದರು. ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಏಳು ಭಾಗವಾಗಿ ವಿಭಜಿಸುವುದನ್ನು ವಿರೋಧಿಸಿದರು. ರಿಯಲ್ ಎಸ್ಟೇಟ್ ದಂಧೆಗೆ ಈ ಮೂಲಕ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದರು. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ, 'ಭೂದಂಧೆ - ನಡೆಸುವ ಉದ್ದೇಶದಿಂದಲೇ ಗ್ರೇಟರ್ ಬೆಂಗಳೂರು ಮಾಡಲು ಹೊರಟಿದೆ. ಇದರಿಂದ ಬೆಂಗಳೂರಿನಲ್ಲಿ ಕನ್ನಡಿಗರೇ ಪರಕೀಯರಾಗುವ ಸಾಧ್ಯತೆಯಿದೆ ಎಂದು ಹೇಳಿದರು. ವಿಧಾನ ಮಂಡಲದಲ್ಲಿ ಸರ್ಕಾರ ಗ್ರೇಟರ್ ಬೆಂಗಳೂರು ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ರಾಜ್ಯಪಾಲರು ಯಾವುದೇ ಕಾರಣಕ್ಕೂ ಈ ಮಸೂದೆಗೆ ಸಹಿ ಹಾಕಬಾರದು. ತಿರಸ್ಕರಿಸಬೇಕು' ಎಂದು ಆಗ್ರಹಿಸಿದರು. 'ನಗರದ ಜನಸಂಖ್ಯೆ ಒಂದೂವರೆ ಕೋಟಿ ಇದೆ. ಕುಡಿಯುವ ನೀರಿಲ್ಲ, 'ಗ್ರೇಟರ್ ಬೆಂಗಳೂರು' ಮಸೂದೆಗೆ ವಿರೋಧ ವ್ಯಕ್ತಪಡಿಸಿ, ಜೆಡಿಎಸ್ ಮುಖಂಡರು ಉದ್ಯಾನದಲ್ಲಿ ಪ್ರತಿಭಟಿಸಿದರು ಮೂಲಸೌಕರ್ಯಗಳಿಲ್ಲ. ರಸ್ತೆಗುಂಡಿಗಳ ಮುಚ್ಚಲು ಹಣವಿಲ್ಲ. ಈಗ ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಜನರನ್ನು ಯಾಮಾರಿಸಲು ಸರ್ಕಾರ ಹೊರಟಿದೆ' ಎಂದು ಆಕ್ರೋಶ ಹೊರಹಾಕಿದರು. ವಿಧಾನ ಪರಿಷತ್ ಸದಸ್ಯ ಟಿ.ಎ.ಜವರಾಯ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಬೆಂಗಳೂರು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾರಾವ್, ಮುಖಂಡರಾದ ನಾಗೇಶ್ ರಾವ್, ವೆಂಕಟಸ್ವಾಮಿ, ವೇಣುಗೋಪಾಲ್, ಮಂಗಳಮ್ಮ ಪ್ರವೀಣ್ ಕುಮಾರ್ ಭಾಗವಹಿಸಿದ್ದರು.