ಬೆಂಗಳೂರು, ಮಾರ್ಚ್ 13, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕ.ವಿ.ಮಂ. ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷರಾದ ಕೆ. ದಾಸ್ ಪ್ರಕಾಶ್ ಅವರು ಮಾತನಾಡಿದರು.
ನನ್ನ ನಿವೃತ್ತಿ ನಂತರ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿರುತ್ತಾರೆ - ಕೆ. ದಾಸ್ ಪ್ರಕಾಶ್
ಶ್ರೀ. ಕೆ. ದಾಸ್ ಪ್ರಕಾಶ್, ಮಾಜಿ ಅಧ್ಯಕ್ಷರು, ಕ.ವಿ.ಮಂ. ಪರಿಷ್ಟ ಜಾತಿ / ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ (ರಿ: 466), ಬೆಂಗಳೂರು ಆದ ನಾನು 2021-26 ರ ಐದು ವರ್ಷದ ಅವಧಿಗೆ ಚುನಾವಣೆಯಲ್ಲಿ ಆಯ್ಕೆಗೊಂಡು ಸದರಿ ಆಡಳಿತ ಮಂಡಳಿಯಲ್ಲಿ ಕೆ. ದಾಸ್ ಪ್ರಕಾಶ್ ಆದ ನಾನು ಅಧ್ಯಕ್ಷನಾಗಿ ದಿನಾಂಕ: 30/04/2023 ರವರಿಗೆ ಪ್ರಾಮಾಣಿಕನಾಗಿ ಮತ್ತು ಸಂಸ್ಥೆಯ ಸೇವಾಭಿವೃದ್ಧಿಗಾಗಿ ಕಾರ್ಯನಿರ್ವಹಿಸಿರುತ್ತೇನೆ.
ನನ್ನ ತೇಜೋವಧೆಗಾಗಿ ನನ್ನ ನಿವೃತ್ತಿ ನಂತರ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನ ವಿರುದ್ಧ ವೃಥಾ ಆರೋಪಗಳು ಮಾಡಿರುತ್ತಾರೆ. ದಿನಾಂಕ: ಜನವರಿ-31-2025 ಮತ್ತು ಫೆಬ್ರವರಿ-15-2025 ರಲ್ಲಿ ಇಲ್ಲ-ಸಲ್ಲದ ಆರೋಪಗಳು ಮಾಡಿ ಪತ್ರಿಕಾಗೋಷ್ಠಿ ನಡೆಸಿ ವೃಥಾ ಆರೋಪಗಳನ್ನು ಮಾಡಿರುತ್ತಾರೆ. ಶ್ರೀ. ಮುನಿರಾಜು, ಸಹಾಯಕ ಕಾರ್ಯದರ್ಶಿ (ನಿವೃತ್ತ) ಮತ್ತು ವಿ.ವೈ. ಕಟ್ಟಿಮನಿ ಉಪಕಾರ್ಯದರ್ಶಿ (ನಿವೃತ್ತ) ಇವರುಗಳು ಪತ್ರಿಕಾಗೋಷ್ಠಿ ಮಾಡಿ ವಿವರಗಳನ್ನು ನೀಡಿರುತ್ತಾರೆ. ಮೇಲ್ಕಂಡ ಸದಸ್ಯರು ನಮ್ಮ ಸಂಸ್ಥೆಯಲ್ಲಿ ನನ್ನೊಡನೆ ಆಡಳಿತ ಸಂಸ್ಥೆಯಲ್ಲಿ ಪದಾಧಿಕಾರಿಗಳಾಗಿದ್ದು, ನನ್ನ ನಿವೃತ್ತಿ ನಂತರ ಅವರು ನಿವೃತ್ತಿ ಆದ ಮೇಲೆ ವೃಥಾ ಸುಳ್ಳು ಆರೋಪಗಳು ಮಾಡಿರುವುದು ನನಗೆ ತುಂಬಾ ನೋವಿನ ಸಂಗತಿಯಾಗಿರುತ್ತದೆ.
ಸಹಕಾರ ಇಲಾಖೆಯ ಆಡಳಿತಾಧಿಕಾರಿಯಾದ ಶ್ರೀ. ಸುರೇಶ್ ಗೌಡ ರ ವತಿಯಿಂದ 2013-16 ರ ಅವಧಿಯಲ್ಲಿ ಆಯ್ಕೆಯಾದ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಶ್ರೀ. ವಿ.ವೈ. ಗಸ್ತಿ, ಹಿರಿಯ ಉಪಾಧ್ಯಕ್ಷರಾಗಿ ಹೆಚ್.ಆರ್. ರಾಜ್ ಕುಮಾರ್, ಕೆ. ದಾಸ್ ಪ್ರಕಾಶ್ ಆದ ನಾನು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಶ್ರೀ. ಓ. ಕರಿಯಣ್ಣ ರವರು ಖಜಾಂಚಿಯಾಗಿ, ಶ್ರೀ. ನಂಜುಂಡಸ್ವಾಮಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಸಂಸ್ಥೆಯ ವತಿಯಿಂದ ರಾಜಾಜಿನಗರದಲ್ಲಿ ಡಾ. ಬೀಮ್‌ರಾವ್ ಪ್ಯಾಲೇಸ್ ಭವನವನ್ನು ನಿರ್ಮಾಣ ಮಾಡಿರುತ್ತೇವೆ.
ಇದರ ಕಟ್ಟಡದ ಅಂತಿಮದ ಒಟ್ಟು ಮೊತ್ತ: 12.41 ಕೋಟಿ ರೂ.ಗಳು ಮಾತ್ರ ವೆಚ್ಚವಾಗಿರುತ್ತದೆ.