ಬೆಂಗಳೂರು, ಫೆಬ್ರವರಿ 28, 2025
ಬೆಂಗಳೂರಿನ ಹೈಕೋರ್ಟ್ ಮುಂದೆ 'ಬೆಂಗಳೂರು ನಗರ ವಕೀಲರ ಸಂಘ'ದ ವತಿಯಿಂದ 'ನಮ್ಮ ಮೆಟ್ರೋ' ರೈಲಿನ ಟಿಕೆಟ್ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ ನಡೆಯಿತು.
ಬೆಂಗಳೂರು ನಗರ ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬರೆಡ್ಡಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಬಿ.ಎಂ.ಆರ್.ಸಿ.ಎಲ್ ಸಂಸ್ಥೆಯ ಆಡಳಿತ ಮಂಡಳಿಯವರು ಈ ಕೂಡಲೇ ಮೆಟ್ರೋ' ರೈಲಿನ ಟಿಕೆಟ್ ದರವನ್ನು ಕಡಿಮೆ ಮಾಡಬೇಕೆಂದು ವಿವೇಕ್ ಸುಬ್ಬರೆಡ್ಡಿ ಅವರು ಒತ್ತಾಯಿಸಿದರು.