ಲಾಲ್‌ಬಾಗ್‌ನಲ್ಲಿ ದ್ರಾಕ್ಷಿ-ಕಲ್ಲಂಗಡಿ ಮಾರಾಟ ಮೇಳಕ್ಕೆ ತೋಟಗಾರಿಕೆ ಸಚಿವ ಎಸ್. ಎಸ್.ಮಲ್ಲಿಕಾರ್ಜುನ ಚಾಲನೆ ನೀಡಿದರು. ಈ ವೇಳೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ರಿಜ್ವಾನ್ ಅರ್ಷದ್, ಉದಯ್ ಬಿ.ಗರುಡಾಚಾರ್, ಸಂಸದ ಪಿ.ಸಿ ಮೋಹನ್ ಮತ್ತಿತರರಿದ್ದರು.
ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್ ಕಾಮ್ಸ್) ವತಿಯಿಂದ ಲಾಲ್‌ಬಾಗ್‌ನಲ್ಲಿ ನಡೆದ ದ್ರಾಕ್ಷಿ-ಕಲ್ಲಂಗಡಿ ಮಾರಾಟ ಮೇಳಕ್ಕೆ ಚಾಲನೆ ನೀಡಲಾಯಿತು.
ರಾಜ್ಯದ ಚಿಕ್ಕಬಳ್ಳಾಪುರ, ಇತರ ಕೆಲವು ಜಿಲ್ಲೆಗಳಿಂದ ನೂರಾರು ಮೆಟ್ರಿಕ್ ಟನ್‌ನಷ್ಟು ವಿವಿಧ ತಳಿಯ ದ್ರಾಕ್ಷಿಯನ್ನು ಖರೀದಿಸಿ ಮಾರಾಟ ಮಾಡುವ ಗುರಿಹೊಂದಿದ್ದು ಬೆಂಗಳೂರಿನ ಕರಾವಳಿ, ಮಲೆನಾಡಿನ ಪ್ರದೇಶ ಹೊರತುಪಡಿಸಿ ರಾಜ್ಯಾದ್ಯಂತ ಬೆಳೆದ ಕಿರಣ್ ಕಲ್ಲಂಗಡಿ, ಹಳದಿ ಬಣ್ಣದ ಕಲ್ಲಂಗಡಿ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಕೋಲಾರ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಬೆಳೆದ ಬೆಂಗಳೂರು ನೀಲಿ, ಕೃಷ್ಣ ಶರದ್, ಸೋನಾಕ, ಸೂಪರ್ ಸೋನಾಕ, ಇಂಡಿಯನ್ ರೆಡ್ ಗ್ಲೋಬ್ ಥಾಟ್ಸನ್ ಸೀಡ್‌ಲೆಸ್ ಸೇರಿದಂತೆ ಹತ್ತಕ್ಕೂ ಹೆಚ್ಚು ದ್ರಾಕ್ಷಿಗಳನ್ನು ಮೇಳದಲ್ಲಿ ಖರೀದಿಸುವ ಅವಕಾಶವಿದೆ ಎಂದು ಹಾಪ್ ಕಾಮ್ಸ್ ಹೇಳಿದೆ.
ಹಾಪ್‌ಕಾಮ್ಸ್‌ನ ಎಲ್ಲ ಮಳಿಗೆಗಳಲ್ಲಿ ಕಲ್ಲಂಗಡಿಯನ್ನು ಕೂಡ ಮಾರಾಟ ಮಾಡುವ ಗುರಿಹೊಂದಿದೆ.
ಶರದ್, ಕೃಷ್ಣ ಶರದ್, ಗ್ಲೋಬ್, ಸೋನಿಕಾ ಸೇರಿದಂತೆ ಹತ್ತಾರು ತಳಿಯ ದ್ರಾಕ್ಷಿ ಮೇಳದಲ್ಲಿ ಲಭ್ಯವಾಗಲಿದೆ. ಬೆಂಗಳೂರಿನಲ್ಲಿರುವ ಎಲ್ಲ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಈ ಹಣ್ಣುಗಳ ಮಾರಾಟ ನಡೆಯಲಿದೆ. ಬೇಸಿಗೆ ಪೂರ್ಣಗೊಳ್ಳುವವರೆಗೆ ಈ ಕೊಡುಗೆ ಇರಲಿದೆ.