ಬೆಂಗಳೂರು, ಫೆಬ್ರವರಿ 18, 2025

ದಶಕಗಳ ಕಾಲದಿಂದಲೂ ರಾಜ್ಯ ಹಿಂದೂ ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆ ಜಾರಿ ಮಾಡದೇ ಇರುವ ವೀರಶೈವಾಗಮೋಕ್ತ ಪದ್ದತಿಯ ದೇವಾಲಯಗಳ ಹಾಗು ವೀರಶೈವಲಿಂಗಾಯತ ಆರ್ಚಕ ಆಗಮಿಕರ ಹಾಗೂ ವೇದ ಆಗಮ ವಿದ್ಯಾರ್ಥಿಗಳಿಗೆ ಬಹು ಮುಖ್ಯವಾಗಿ ಬೇಕಾಗಿರುವ ಬೇಡಿಕೆಗಳನ್ನು ಈ ವರ್ಷದ ಬೆಂಗಳೂರು ವಿಧಾನಸಭಾ ಅಧಿವೇಶನದಲ್ಲಿ ಜಾರಿಗೊಳಿಸಿ. ವೀರಶೈವಾಗಮೊಕ್ತ ಪರಂಪರೆಯ ದೇವಾಲಯಗಳಿಗೆ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಆರ್ಚಕ ಆಗಮಿಕರಿಗೆ ಮತ್ತು ವೇದ ಆಗಮ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವ .

ಈ ವಿಷಯಕ್ಕೆ ಸಂಬಂಧಪಟ್ಟಂತೆ ವೀರಶೈವಾಗಮೋಕ್ತ ಪದ್ದತಿಯ ದೇವಾಲಯಗಳ ವೀರಶೈವಲಿಂಗಾಯತ ಪರಂಪರೆಯ ಆಸ್ತಿಕ ಭಕ್ತರ ವೀರಶೈವ ವೇದ ಆಗಮ ಪಾಠಶಾಲೆಗಳ ಅರ್ಚಕ ಆಗಮಿಕರ ವೇದ ವಿಧ್ಯಾರ್ಥಿಗಳ ಮೂಲಭೂತ ಜಾರಿಯಾಗಬೇಕಾಗಿರವ ಯೋಜನೆಗಳಾದ ಸೌಕರ್ಯಗಳು aperte ರಕ್ಷಣೆಗೆ ಸಂಬಂಧಪಟ್ಟಂತೆ ಕೂಡಲೇ

+ ರಾಜ್ಯ ಹಿಂದೂ ಧಾರ್ಮಿಕ ದತ್ತಿ(ಮುಜರಾಯಿ) ಇಲಾಖೆಯಲ್ಲಿ ವೀರಶೈವಾಗಮ ಹಿರಿಯ ಮತ್ತು ಕಿರಿಯ ಪಂಡಿತರ ಹುದ್ದೆಯನ್ನು ಕೂಡಲೇ ಮಂಜೂರು ಮಾಡಿ ಖಾಯಂ ಗೊಳಿಸಿ ಆದೇಶ ಹೊರಡಿಸಬೇಕು.

* ವೀರಶೈವಾಗಮೋಕ್ತ ಪದ್ಧತಿಯಲ್ಲಿ ಪೂಜಾ ಕೈಂಕರ್ಯ ನೆರವೇರುತ್ತಿರುವ ದೇವಾಲಯಗಳ ಕುಂದು ಕೊರತೆಗಳನ್ನು ಆಲಿಸಲು ಹಾಗೂ ಜೀರ್ಣೋದ್ದಾರ ಕುಂಭಾಭಿಷೇಕ ರಥೋತ್ಸವಗಳಿಗೆ ಸಲಹೆ ಸೂಚನೆಗಳನ್ನು ನೀಡಲು ಕಡ್ಡಾಯವಾಗಿ ವೀರಶೈವಾಗಮ ಪಂಡಿತರನ್ನು ಹೊರತುಪಡಿಸಿ ಬೇರೆ ಆಗಮಕ್ಕೆ ಸಂಬಂಧಪಟ್ಟ ಪಂಡಿತರನ್ನು ನಿಯೋಜನೆ ಮಾಡಕೂಡದು.

* ಕರ್ನಾಟಕ ರಾಜ್ಯದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ವೀರಶೈವಾಗಮೋಕ್ತ ಪದ್ಧತಿಯ ದೇವಾಲಯಗಳಲ್ಲಿ ಕಡ್ಡಾಯವಾಗಿ ವೀರಶೈವ ಲಿಂಗಾಯತ ಪರಂಪರೆಯ ಅರ್ಚಕ ಆಗಮಿಕರೇ ಪೂಜಾ ಕೈಂಕರ್ಯ ನೆರವೇರಿಸಬೇಕೆಂದು ಕೂಡಲೇ ಸುತ್ತೋಲೆ ಹೊರಡಿಸಿ ಸುಗ್ರೀವಾಜ್ಞೆ ಜಾರಿ ಗೊಳಿಸಬೇಕು.

* ರಾಜ್ಯ ಹಿಂದೂ ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಯ 'ಸಿ' ಪ್ರವರ್ಗದ ದೇವಸ್ಥಾನಗಳ ಆರ್ಚಕರಿಗೆ ಪ್ರಸ್ತುತ ನೀಡುತ್ತಿರುವ ಮಾಸಿಕ ತಸ್ತೀಕ್ ಮತ್ತು ವರ್ಷಾಸನದ ಹಣವನ್ನು ರೂ. 5,000 ದಿಂದ 10,000 ರೊಗಳಿಗೆ ಹೆಚ್ಚಳ ಮಾಡುವುದು.

+ ರಾಜ್ಯ ಹಿಂದೂ ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಗೆ ಒಳಪಡುವ ದೇವಸ್ಥಾನಗಳ ಸ್ಥಿರಾಸ್ತಿ ಮತ್ತು ಸ್ವಾಧೀನ ಮಾಡಿಕೊಂಡಿರುವ ವ್ಯಕ್ತಿಗಳಿಂದ ಹಾಗೂ ಕೆಲವು గంగళంద కూడ ముజరాయ ఇలాఖీయ స్థిరాస్తి మత్తు బిరాస్తిగళన్ను సౌకారద వకర్షీ ಪಡೆಯುವುದು.

* ರಾಜ್ಯ ಹಿಂದು ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಯ ರಾಜ್ಯ ಮತ್ತು ಜಿಲ್ಲಾವಾರು ಧಾರ್ಮಿಕ ಪರಿಷತ್ ಸಮಿತಿಗಳಿಗೆ ವೀರಶೈವ ಲಿಂಗಾಯತ ಮಾಡಿಕೊಳ್ಳುವುದು. M3F6 ಮತ್ತು ಆಗಮಿಕರನ್ನು ಕಡ್ಡಾಯವಾಗಿ ನೇಮಕ

+ ರಾಜ್ಯ ಹಿಂದೂ ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಯ 'ಸಿ' ಪ್ರವರ್ಗದ ದೇವಸ್ಥಾನಗಳ ಅರ್ಚಕರಿಗೆ ಮಾಸಿಕ ಭತ್ಯೆ ಸಂಬಳ ಅಥವಾ ಗೌರವ ಧನವನ್ನು ನೀಡುವುದು.

* ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ವೀರಶೈವ ವೇದ, ವೀರಶೈವಾಗಮ ಪಾಠಶಾಲೆಗಳಲ್ಲಿ ನುರಿತ ವೀರಶೈವ ವೇದ, ವೀರಶೈವಾಗಮ ಆಧ್ಯಾಪಕರನ್ನು ನೇಮಕ ಮಾಡಬೇಕು.

+ ರಾಜ್ಯದಲ್ಲಿರುವ ವೀರಶೈವ ವೇದ ಆಗಮ ಪಾಠಶಾಲೆಗಳಿಗೆ ಆತೀ ಅವಶ್ಯಕಥೆ ಇರುವ ಸುಸಜ್ಜಿತ ಕಟ್ಟಡ, ಗ್ರಂಥಾಲಯ, ಶೌಚಾಲಯ, ಕುರ್ಚಿ ಮೇಜು ಒಳಗೊಂಡ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.

* ಪ್ರತಿ ವರ್ಷವೂ ಕಡ್ಡಾಯವಾಗಿ ರಾಜ್ಯ ಹಿಂದೂ ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಯ ಅಡಿಯಲ್ಲಿ ವೀರಶೈವಾಗಮ ಪ್ರವರ ಪ್ರವೀಣ ಪರೀಕ್ಷೆಗಳನ್ನು ನಡೆಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಸರ್ಟಿಫಿಕೇಟ್ ನೀಡಬೇಕು.

* ವೀರಶೈವಾಗಮ ಪ್ರವರ ಪ್ರವೀಣ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ಸರ್ಕಾರ ಈ ಕೂಡಲೇ ಅಧಿಕೃತವಾಗಿ ವೀರಶೈವಾಗಮ ಪಠ್ಯಪುಸ್ತಕ ನೀಡಬೇಕು.

* ಕರ್ನಾಟಕ ರಾಜ್ಯದಲ್ಲಿರುವ ವೀರಶೈವ ವೇದ ಆಗಮ ಪಾಠಶಾಲೆಗಳಲ್ಲಿ ಶಾಲಾ ಸಮಯ ನಿಗದಿ, ಸಮವಸ್ತ್ರ (ವಸ್ತ್ರ ಸಂಹಿತೆ) ಹಾಗೂ ವಿದ್ಯಾರ್ಥಿ ವೇತನ ಕಡ್ಡಾಯಗೊಳಿಸಬೇಕು.

+ 10 ವರ್ಷಗಳಿಂದಲೂ ವೀರಶೈವಾಗಮ ಪ್ರವರ ಪ್ರವೀಣ ಪರೀಕ್ಷೆ ಯಲ್ಲಿ ಉತ್ತೀರ್ಣರಾಗಿ ಇದುವರೆಗೂ ಅಂಕಪಟ್ಟಿ ಸಿಗದ ಸಾವಿರಾರು ವಿದ್ಯಾರ್ಥಿಗಳಿಗೆ ಈ ಕೂಡಲೇ ಅಂಕಪಟ್ಟಿಗಳನ್ನು ನೀಡಬೇಕು.

* ಪ್ರತಿವರ್ಷ ವೀರಶೈವಾಗಮ ಪ್ರವರ ಪ್ರವೀಣ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ (ಮುಜರಾಯಿ ಇಲಾಖೆ) ಆರ್ಚಕ ಆಗಮಿಕರ ತರಬೇತಿಯನ್ನು ನೀಡಿ ಪ್ರಮಾಣ ಪತ್ರ ನೀಡಬೇಕು

ದಯಾಮಯರಾದ ತಾವುಗಳು ಇದೇ ವರ್ಷದ ಬೆಂಗಳೂರು ವಿಧಾನಸಭಾ ಅಧಿವೇಶನದಲ್ಲಿ ಈ ఎల్లా ಯೋಜನೆಗಳನ್ನು ಜಾರಿಗೊಳಿಸಿ ಕರ್ನಾಟಕ ರಾಜ್ಯದ ವೀರಶೈವ ಲಿಂಗಾಯತ ಪರಂಪರೆಯ ಸಮಸ್ತ ಆಸ್ತಿಕ ಭಕ್ತರಿಗೂ, ವೀರಶೈವಾಗಮೋಕ್ತ ದೇವಾಲಯಗಳಿಗೂ ಆರ್ಚಕ ಆಗಮಿಕರಿಗೂ ವೇದ ಆಗಮ ವಿದ್ಯಾರ್ಥಿಗಳಿಗೂ ನ್ಯಾಯ ಒದಗಿಸಿ ಕೊಡಬೇಕೆಂದು ತಮ್ಮನ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ.