ಬೆಂಗಳೂರು, ಫೆಬ್ರವರಿ 7, 2025:
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ದುಬೈ ಒಕ್ಕಲಿಗರ ಸಂಘ' ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ದುಬೈ ನಲ್ಲಿ ಏಪ್ರಿಲ್ 20 ರಂದು 'ದುಬೈ ಒಕ್ಕಲಿಗರ ಸಂಘ'ದ ವತಿಯಿಂದ "ವಿಶ್ವ ಒಕ್ಕಲಿಗರ ವೈಭವ ಮತ್ತು ಕುವೆಂಪು ಉತ್ಸವ - 2025" ಅದ್ದೂರಿಯಾಗಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಇನ್ನೂ ಅದ್ದೂರಿಯಾಗಿಸಲು ವಿಶ್ವದ ಬೇರೆ ಬೇರೆ ಭಾಗಗಳಿಂದ ಸಮುದಾಯದ ಅನೇಕ ಅತಿಥಿಗಳು ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ಒಕ್ಕಲಿಗರ ಸಂಘವು ನಮ್ಮ ಸಮುದಾಯದ ಶಕ್ತಿ ಏಕತೆ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಪುನರುಚ್ಛರಿಸುವ ಕಾರ್ಯಕ್ರಮವನ್ನು ಅವಿಸ್ಮರಣೀಯ ಮತ್ತು ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಿದೆ ಎಂದು ತಿಳಿಸಿದರು.