ಜನವರಿ 29, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಕಮಿಟಿ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಫೆಬ್ರವರಿ 21ರಿಂದ 28ರವರೆಗೆ "ಎಮ್ಮೆಮಾಡು ಮಖಾಮ್ ಉರೂಸ್" ಕಾರ್ಯಕ್ರಮ ನಡೆಯಲಿದೆ.
ಕೊಡಗು ಜಿಲ್ಲೆ, ಮಡಿಕೇರಿ ತಾಲೂಕು ಎಮ್ಮೆಮಾಡು ಗ್ರಾಮದಲ್ಲಿ ಅಂತ್ಯವಿಶ್ರಾಂತಿ ಪಡೆಯುತ್ತಿರುವ ಪವಾಡ ಪುರುಷರಾದ ಬಹು. ಹದ್ಭುತ್ ಸೂಫಿ ಶಹೀದ್ (ರ) ಹಾಗೂ ಸೈಯದ್ ಹಸನ್ ಸಖಾಫ್ ಅಲ್ ಹಳರಮಿ(ರ) ಹಾಗೂ ಇತರೆ ಔಲಿಯಗಳ ಹೆಸರಿನಲ್ಲಿ ಪ್ರತಿ ವರ್ಷವು ಆಚರಣೆ ಮಾಡಿಕೊಂಡು ಬರುತ್ತಿರುವ "ಉರೂಸ್ ಮುಬಾರಕ್" ದಿನಾಂಕ: 21.02.2025 ರಿಂದ 28.02.2025ರವರೆಗೆ 7 ದಿನಗಳ ಕಾಲ ಜಾತಿ ಮತಬೇದವಿಲ್ಲದೆ ಸಾವಿರಾರು ಜನರ ಭಾಗವಹಿಸುವ ಕಾರ್ಯಕ್ರಮವಾಗಿದೆ ಹಾಗೂ ದಿನಾಂಕ: 24.02.2025ರಂದು ಆಗಮಿಸುವ ಸರ್ವಭಕ್ತ ಭಾಂದವರಿಗೆ ಅನ್ನಸಂತರ್ಪನೆ ಕಾರ್ಯಕ್ರಮವು ನಡೆಯಲಿದೆ.
ಈ 7 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಖತಂದುಆ, ದಿಕ್ರಹಲ್ಕ, ಸಾಮೂಹಿಕ ವಿವಾಹ, ಧಾರ್ಮಿಕ ಮತಪ್ರವಚನ, ಸಾರ್ವಜನಿಕ ಸಮ್ಮೇಳನ, ಸಮಾರೋಪ ಸಮಾರಂಭನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಹೊರರಾಜ್ಯದಿಂದ ಸಯ್ಯದ್ ಕುಟುಂಬದ ನೇತೃತ್ವ, ಧಾರ್ಮಿಕ ಮತಪಂಡಿತರುಗಳು. ರಾಜಕೀಯ ಮತ್ತು ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮವು ತಾಜುಲ್ ಇಸ್ಲಾಂ ಮುಸ್ಲಿಂ ಜಮಾ-ಅತ್‌ನ ಅಧೀನದಲ್ಲಿ ನಡೆಸಲಾಗುತ್ತದೆ.
ಕಳೆದ 400 ವರ್ಷಗಳ ಹಿಂದೆ ಹಿಜಿರಾ 11ನೇ ಶತಮಾನದಲ್ಲ ಇಸ್ಲಾಂನ ನವೋತ್ಥಾನ ನಾಯಕರ ತವರೂರಾದ ಈಜೀಪ್ಟ್ನಿಂದ ಪ್ರವಾದಿವರ್ಯರ ಝಿಯಾರತ್ ಮುಗಿಸಿ ಧರ್ಮ ಪ್ರಚಾರರ್ಥ ಕೊಡಗಿಗೆ ಬಂದು ತಲುಪಿ ವಿರಾಜಪೇಟೆ ತಾಲೂಕಿನ ಪೊನಂಪೇಟೆ ಕುತ್‌ನಾಡ್ ಗ್ರಾಮದಲ್ಲಿಯೂ ನಂತರ ಭಾಗಮಂಡಲ ಸಮೀಪ ತಾವೂರಿನಲ್ಲಿ ಎಮ್ಮೆಮಾಡುವಿನಲ್ಲಿ ಕೊನೆಯದಾಗಿ ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ವಾಸ ಮಾಡಿ
ಅಲ್ಲಾಹುವಿನ ಆದೇಶಗಳನ್ನು ಪರಮಾವಧಿ ಅನುಸರಿಸಿ ನಿಶೇಧಗಳನ್ನು ತ್ಯೆಜಿಸಿ ಸಮ್ಮತಾರ್ಹ ಸುಖ, ಭೋಗಗಳಿಂದ ಕೂಡ ದೂರು ನಿಂತು ಇಹದ ಬಗ್ಗೆ ನಿಜವಾದ ನಿರ್ಮಮಕಾರ ಮನಸ್ಥಿತಿ ಬೆಳೆಸಿಕೊಂಡು ಶ್ರದ್ಧಾ ಭಾಳ್ವೆ ನಡೆಸುವ ಮೂಲಕ ಅಲ್ಲಾಹುವಿನ ಒಲವು ಮತ್ತು ಸನಿಹತೆಗೆ ಪಾತ್ರರಾದವರೇ ಔಲಿಯಾಗಳು.
ವಿಶಾಲವಾದ ಬತ್ತಬಯಲು ತಲೆಯೆತ್ತಿನಿಂತ ಪರ್ವತ ಶ್ರೇಣಿಗಳು, ಕಾಡುಬೆಟ್ಟಗಳ, ನಡುವಿನ ದಾರಿಗಳು, ತುಂಬಿ ತುಳುಕಾಡುವ ಕಾಫಿತೋಟಗಳು, ಏಲಕ್ಕಿ, ಮೆಣಸಿನ ಚಲುವಿನ ಬೀಡಾದ ಕೊಡಗಿನಲ್ಲಿ ಕಷ್ಟ, ನಷ್ಟ, ಪ್ರಾಬ್ಬಗಳಲ್ಲಿ ಸಿಲುಕಿ ನಲಗುತ್ತಿರುವ ಜಾತಿ ಮತಬೇದವಿಲ್ಲದೇ ಆಗಮಿಸುವ ಆಬಾಲ ವೃದ್ದ ಜನರು ಸೂಫಿ ಶಹೀದ್(ರ) ಚಿರಶಾಂತಿ ಹೊಂದುತ್ತಿರುವ ದರ್ಗದಲ್ಲಿ ಪರಿಸರ ಪ್ರದೇಶಗಳಿಂದ ನರೆಯ ರಾಜ್ಯಗಳ ವಿವಿಧ ಕಡೆಗಳಿಂದ ದಿನವಹಿ ಅಪಾರ ಜನ ಸಂದರ್ಶಿಸಿ ಅವರವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಒಂದು ಪ್ರಸಿದ್ದ ಕೇಂದ್ರವಾಗಿ ಎಮ್ಮೆಮಾಡು ಗ್ರಾಮದ ದರ್ಗ ಶರೀಫ್ ಬೆಳೆದು ನಿಂತಿದೆ.
ದಿ : 21.02.2025 00 28.02.2025 7 ಕಾಲ ಜಾತಿ ಮತಬೇದವಿಲ್ಲದೆ ಈ ಮಹಾನುಭಾವರುಗಳ ಹೆಸರಿನಲ್ಲಿ ನಡೆಯುವ "ಉರೂಸ್ ಮುಬಾರಕ್" నాఏరారు ಜನರ ಭಾಗವಹಿಸುವ ಕಾರ್ಯಕ್ರಮವಾಗಿದ್ದು ออมอ ದಿನಾಂಕ: 24.02.2025ರಂದು ಆಗಮಿಸುವ ಸರ್ವಭಕ್ತ ಭಾಂದವರಿಗೆ ಅನ್ನಸಂತರ್ಪನೆ ಕಾರ್ಯಕ್ರಮ ನಡೆಯಲಿದ್ದು, ಈ ಕುರಿತು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿ, ಟಿ.ವಿ.ಮಾಧ್ಯಮದಲ್ಲಿ ಬಿತ್ತರಿಸುವಂತೆ ವಿನಂತಿಸಿಕೊಳ್ಳುತ್ತೇವೆ.